Advertisement
ಆ ಒಂದು ದಿನಕ್ಕಾಗಿ ಇಡೀ ವರ್ಷ ಕಾಯುತ್ತಿದ್ದೆವು.
Related Articles
Advertisement
ಶಾಲೆ ತಲುಪುತ್ತಿದ್ದಂತೆ, ಶಾಲಾ ದೈಹಿಕ ಶಿಕ್ಷಣ ಶಿಕ್ಷಕರು ಧ್ವಜಸ್ತಂಭದ ಸುತ್ತ ಹೂ ಹಾಕಿ ಸಿಂಗರಿಸುವ ಜವಾಬ್ದಾರಿ ನೀಡುತ್ತಿದ್ದರು. ಇನ್ನೇನು ಕೆಲಸವೆಲ್ಲ ಮುಗಿದು ಧ್ವಜಾರೋಹಣ ಪ್ರಾರಂಭವಾಗುವ ಹೊತ್ತಿಗೆ ಎಲ್ಲ ಮಕ್ಕಳ ಕೈಯಲ್ಲಿ ಒಂದೊಂದು ಬಾವುಟಗಳನ್ನು ಕೊಟ್ಟು ಸಾಲು ಸಾಲಾಗಿ ನಿಲ್ಲಿಸಲಾಗುತಿತ್ತು. ಧ್ವಜಾರೋಹಣ ಮುಗಿದು ಭಾಷಣದ ಸಮಯ ಬಂದಾಗ ಮನಸ್ಸಿನಲ್ಲಿ ಒಂದು ರೀತಿಯ ಭಯ ಶುರುವಾಗುತ್ತಿತ್ತು.
ನನ್ನ ಸರದಿ ಬಂದಾಗ ಒಂದು ಕೈಯಲ್ಲಿ ಭಾಷಣದ ಚೀಟಿ ಹಿಡಿದುಕೊಂಡು ನೋಡಿ ಹೇಳಲೋ ಬೇಡವೋ ಎಂಬ ಗೊಂದಲದಲ್ಲಿ ಭಾಷಣ ಮುಗಿದಿರುತ್ತಿತ್ತು.
ಭಾಷಣ ಮುಗಿದ ಅನಂತರದ ಸಮಯ ನಮ್ಮೆಲ್ಲರಿಗೂ ಇಷ್ಟವಾಗಿತ್ತು. ಯಾಕೆಂದರೆ ಆಗ ಸಿಹಿ ತಿಂಡಿ ವಿತರಿಸಲಾಗುತ್ತಿತ್ತು. ಟೀಚರ್ ಚಾಕಲೇಟ್ ಕೊಟ್ಟು ಎಲ್ಲರ ಬಾಯಿ ಸಿಹಿ ಮಾಡುತ್ತಿದ್ದರು. ದಿನವೂ ಚಾಕಲೇಟ್ ತಿನ್ನುತ್ತಿದ್ದರೂ ಅಂದು ವಿತರಿಸುತ್ತಿದ್ದ ಚಾಕಲೇಟ್ ಹೆಚ್ಚು ಖುಷಿ ನೀಡುತ್ತಿತ್ತು. ಜತೆಗೆ ಸ್ವಾತಂತ್ರÂದ ಬಗ್ಗೆ, ಸ್ವಾತಂತ್ರÂ ವೀರರ ಬಗ್ಗೆ ಹಾಗೂ ಅವರ ಹೋರಾಟದ ಬದುಕನ್ನು ಬಂದಿರುವ ಅತಿಥಿಗಳ ಭಾಷಣಗಳಿಂದ ತಿಳಿದುಕೊಳ್ಳುವ ಅವಕಾಶ ನಮಗೆ ಸಿಗುತ್ತಿತ್ತು. ಬಳಿಕ ನಾವೆಲ್ಲರೂ ಕಾತರದಿಂದ ಕಾಯುತ್ತಿದ್ದದ್ದು ಬಹುಮಾನ ವಿತರಣೆಗೆ. ನಮ್ಮ ಶಾಲೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಬಹುಮಾನ ಸಿಗುತಿತ್ತು.
ಯಾರಿಗೂ ಬೇಸರವಿಲ್ಲ. ಎಲ್ಲರಿಗೂ ಸಂತೋಷವೇ. ನಾವೂ ಈಗಲೂ ಸ್ವಾತಂತ್ರÂ ದಿನ ಪ್ರತಿವರ್ಷ ಆಚರಿಸುತ್ತೇವೆ. ಆದರೆ ಬಾಲ್ಯದಲ್ಲಿ ಆಚರಿಸುತ್ತಿದ್ದ ದಿನದ ಸ್ವಾತಂತ್ರೋತ್ಸವ, ಭಾಗವಹಿಸುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳ ಸುಂದರ ಅನುಭವಕ್ಕೆ ಬೇರೆ ಯಾವುದೂ ಸರಿಸಾಟಿಯಾಗದು.