Advertisement

‘ಚಲ್ತಾ ಹೇ’ಬೇಡ ‘ಬದಲ್‌ ಸಕ್ತಾ ಹೇ’ಆಗಲಿ : ಮೋದಿ ಕರೆ 

09:01 AM Aug 15, 2017 | |

ಹೊಸದಿಲ್ಲಿ: 71 ನೇ ಸ್ವಾತಂತ್ರ್ಯೋತ್ಸವವನ್ನು ದೇಶಾದ್ಯಂದ ಸಂಭ್ರಮಾಚರಣೆಯಿಂದ ಆಚರಿಸಲಾಗುತ್ತಿದ್ದು, ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಮಾತನಾಡಿದರು. 

Advertisement

ನಾಲ್ಕನೇ ಬಾರಿಗೆ ಕೆಂಪುಕೊಟೆಯಲ್ಲಿ ಭಾಷಣ ಮಾಡಿದ ಪ್ರಧಾನಿ ‘ಭಾರತ ಮುಂದಿನ 5 ವರ್ಷಗಳ ಒಳಗೆ ಭ್ರಷ್ಟಾಚಾರ, ಉಗ್ರವಾದ, ವರ್ಣಭೇದ ನೀತಿಯಿಂದ ಮುಕ್ತವಾಗಬೇಕು.ಸ್ವಚ್ಛ ಭಾರತವಾಗಬೇಕು,  ಸ್ವರಾಜ್ಯದ ಕನಸು ನನಸಾಗಬೇಕು. ಇದಕ್ಕೆ ಭಾರತೀಯರೆಲ್ಲರೂ ಒಂದಾಗಿ ನ್ಯೂ ಇಂಡಿಯಾಕ್ಕಾಗಿ ಕೆಲಸ ಮಾಡಬೇಕು’ ಎಂದು ಕರೆ ನೀಡಿದರು. 

‘ಅಪನಗದೀಕರಣ ಮತ್ತು ಸ್ವಚ್ಛ ಭಾರತ ಯೋಜನೆಗೆ ಭಾರತೀಯರೆಲ್ಲರೂ ಬೆಂಬಲ ನೀಡಿದ್ದಾರೆ. ಇದರಿಂದ ಬಹಳಷ್ಟು ಬದಲಾವಣೆ ಕಂಡು ಬಂದಿದೆ. ಅಪನಗದೀಕರಣದ ಬಳಿಕ 3 ಲಕ್ಷ  ನಕಲಿ  ಕಂಪೆನಿಗಳನ್ನು ಪತ್ತೆ ಹಚ್ಚಲಾಗಿದ್ದು ಈಗಾಗಲೇ 2 ಲಕ್ಷ ಕಂಪೆನಿಗಳ ಪರವಾನಿಗೆ ರದ್ದು ಮಾಡಲಾಗಿದೆ’ ಎಂದರು.

‘ಕಾಶ್ಮೀರದ ಸಮಸ್ಯೆಗೆ ಬಂದೂಕನ್ನು ಉಪಯೋಗಿಸಬೇಕೆಂದಿಲ್ಲ. ಒಂದು ಅಪ್ಪುಗೆಯ ಮೂಲಕ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಬಹುದು’ ಎಂದರು. 

‘ಇಡೀ ದೇಶವೆ ಜಿಎಸ್‌ಟಿ ಜಾರಿಗೆ ಬೆಂಬಲ ನೀಡಿದ್ದು, ತಂತ್ರಜ್ಞಾನದ ಬಳಕೆಗೆ ಮುಂದಾಗಿದೆ’ ಎಂದರು.

Advertisement

”ಚಲ್ತಾ ಹೇ’ (ನಡೀತದೆ) ಎನ್ನುವ ಧೋರಣೆಯನ್ನು ಬಿಟ್ಟು ‘ಬದಲ್‌ ಸಕ್ತಾ ಹೇ’ (ಬದಲಾಗುತ್ತದೆ)ಅನ್ನುವ ಧೋರಣೆಯನ್ನು ನಮ್ಮದಾಗಿಸಿಕೊಳ್ಳಬೇಕು. ಆಗ ನಮ್ಮ ದೇಶ ಬದಲಾಗುತ್ತದೆ’ ಎಂದರು. 

‘ಗೋರಖ್‌ಪುರದಲ್ಲಿ ಮೃತಪಟ್ಟ ಮುಗ್ಧ ಕಂದಮ್ಮಗಳ ಕುಟುಂಬದೊಂದಿಗೆ  ಇಡೀ ದೇಶವೇ ನಿಲ್ಲುತ್ತದೆ’ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next