ಡೊಂಬಿವಲಿ: ಕರ್ನಾಟಕ ಸಂಘ ಡೊಂಬಿವಲಿ ಸಂಚಾಲಿತ ಮಂಜುನಾಥ ಮಹಾವಿದ್ಯಾಲಯದಲ್ಲಿ 75ನೇ ಸ್ವಾತಂತ್ರ್ಯೋತ್ಸವವನ್ನು ಕಾರ್ಯಕಾರಿ ಸಮಿತಿ, ಶಿಕ್ಷಕ ವೃಂದ, ಹಾಗೂ ಸಿಬಂದಿಯ ಉಪಸ್ಥಿತಿಯಲ್ಲಿ ಆ. 15ರಂದು ಆಚರಿಸಲಾಯಿತು.
ಕರ್ನಾಟಕ ಸಂಘದ ಅಧ್ಯಕ್ಷ ದಿವಾಕರ ಶೆಟ್ಟಿ ಇಂದ್ರಾಳಿ ಧ್ವಜಾರೋಹಣಗೈದು ಮಾತನಾಡಿ, ಹಿರಿಯರು ಬ್ರಿಟಿಷರೊಂದಿಗೆ ಮಾಡಿದ ಹೋರಾಟ, ಅವರು ಮಾಡಿದ ತ್ಯಾಗ ಇಂದಿನ ಯುವ ಪೀಳಿಗೆಗೆ ಪ್ರೇರಣೆ ಯಾಗಬೇಕಿದೆ. ನಮಗೆ ದೊರೆತಿರುವಸ್ವಾತಂತ್ರ್ಯವನ್ನು ಉಳಿಸಿಕೋಳ್ಳೊಣ. ಇದೇ ತರಹ ನಮ್ಮ ಹಿರಿಯರು ಕರ್ನಾಟಕ ಸಂಘವನ್ನು, ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ ಎಂದರು.
ಇದನ್ನೂ ಓದಿ:ರೈತ ಸ್ನೇಹಿ, ಬಹುಉಪಯೋಗಿ ಲಾವಂಚ…ಉಪಯೋಗ ಏನು?
ಕಾರ್ಯಾಧ್ಯಕ್ಷ ಸುಕುಮಾರ್ ಎನ್. ಶೆಟ್ಟಿ ಮಾತನಾಡಿ, ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಿ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಅವರೆಲ್ಲರ ತ್ಯಾಗವನ್ನು ಯುವ ಜನಾಂಗ ಸ್ಮರಿಸಿಕೊಳ್ಳಬೇಕು. ಕರ್ನಾಟಕ ಸಂಘ ಸಂಚಾಲಿತ ಶಾಲೆ ಮತ್ತು ಕಾಲೇಜು ಶೈಕ್ಷಣಿಕ ಕ್ರಾಂತಿಯನ್ನು ಮಾಡುತ್ತಿದೆ ಎಂದರು.
ಕಾಲೇಜಿನ ಪ್ರಿನ್ಸಿಪಾಲ್ ಡಾ| ವಿ.ಎಸ್. ಆಡಿಗಲ್, ಕರ್ನಾಟಕ ಸಂಘದ ಉಪ ಕಾರ್ಯಾಧ್ಯಕ್ಷ ದೇವದಾಸ್ ಕುಲಾಲ್, ಕೋಶಾಧಿಕಾರಿ ಲೋಕನಾಥ್ ಶೆಟ್ಟಿ, ಜತೆ ಕಾರ್ಯದರ್ಶಿ ದಿನೇಶ್ ಕುಡ್ವ, ಕಾರ್ಯಕಾರಿ ಸಮಿತಿ ಸದಸ್ಯರಾದ ಆನಂದ ಶೆಟ್ಟಿ ಎಕ್ಕಾರು, ಪ್ರಭಾಕರ್ ಶೆಟ್ಟಿ, ಆರ್. ಎಂ. ಭಂಡಾರಿ, ರಾಜೀವ್ ಭಂಡಾರಿ, ವಸಂತ ಸುವರ್ಣ, ರಮೇಶ್ ಶೆಟ್ಟಿ, ಜಗನ್ನಾಥ ಶೆಟ್ಟಿ, ರವಿ ಸನಿಲ್, ಯೋಗಿನಿ ಸುಕುಮಾರ್ ಶೆಟ್ಟಿ, ಪ್ರೊ| ಡಾ| ಸುಶೀಲಾ ವಿಜಯ ಕುಮಾರ್, ಡಾ| ಪಾರ್ವತಿ ಪಾಟೀಲ್, ನಜಿರ್ಕರ್, ಶಿಕ್ಷಕೇತರ ಸಿಬಂದಿ ಉಪಸ್ಥಿತರಿದ್ದರು.