Advertisement

Independence Amrit Mahotsav: ಅಶೋಕನಗರದ ದೇವಸ್ಥಾನದಲ್ಲಿ ಧ್ವಜಾರೋಹಣ!

12:51 AM Aug 08, 2023 | Team Udayavani |

ಮಂಗಳೂರು: ದೇಶದ 75ನೇ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣ ವಾಗಿಸುವ ನಿಟ್ಟಿನಲ್ಲಿ ಮೂರು ದಿನಗಳ ಕಾಲ ಮನೆ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ನೀಡಿದ್ದ ಕರೆಗೆ ಇಡೀ ದೇಶವೇ ಸ್ಪಂದಿಸಿತ್ತು. ಅದನ್ನೇ ಪ್ರೇರಣೆಯಾಗಿ ಸ್ವೀಕರಿಸಿದ ಮಂಗಳೂರಿನ ಸಮುದಾಯವೊಂದು ತಮ್ಮ ದೇವಸ್ಥಾನ ಆವರಣದಲ್ಲಿ ಕಳೆದ ಆ. 15ರಿಂದ ನಾಡಿದ್ದು ಆ. 15ರ ವರೆಗೆ ಪ್ರತೀ ದಿನ ಧ್ವಜಾರೋಹಣ ನೆರವೇರಿಸುವ ಮೂಲಕ ಅಮೃತ ಮಹೋತ್ಸವವನ್ನು ವಿಭಿನ್ನವಾಗಿ ಆಚರಿಸುತ್ತಿದೆ.

Advertisement

ಉರ್ವಸ್ಟೋರ್‌ ಬಳಿಯ ಅಶೋಕ ನಗರದ ದೇವಾಂಗ ಸಮುದಾಯಕ್ಕೆ ಸೇರಿದ ಶ್ರೀ ಭಗವತೀ ದೇವಸ್ಥಾನ ಮತ್ತು ಕುಕ್ಕಾಡಿ ಶ್ರೀ ಅರಸು ಮುಂಡತ್ತಾಯ ದೈವಸ್ಥಾನದ ಅವರಣದಲ್ಲಿ 1 ವರ್ಷದಿಂದ ಈ ಪ್ರಕ್ರಿಯೆ ನೆರವೇರುತ್ತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

“ಕಳೆದ ವರ್ಷದ ಸ್ವಾತಂತ್ರ್ಯ ಉತ್ಸವಕ್ಕೂ ಮುನ್ನ ಪ್ರಧಾನಿಯವರ ಕರೆಯನ್ವಯ ಆರಂಭಿಕ 3 ದಿನ ಎಲ್ಲರಂತೆ ನಾವೂ ಧ್ವಜಾರೋಹಣ ಮಾಡಿದ್ದೆವು. ಅದನ್ನು ಮೂರೇ ದಿನಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂದು ಎಲ್ಲರ ಮನಸ್ಸಿನಲ್ಲಿ ಮೂಡಿದ ಕಾರಣ ನಿರಂತರವಾಗಿ ಧ್ವಜಾರೋಹಣ ಮಾಡುತ್ತಿದ್ದೇವೆ ಎನ್ನುತ್ತಾರೆ ದೇವಾಂಗ ಸಂಘಟನೆಯ ಪದಾಧಿಕಾರಿಗಳು.

ಉದಯವಾಣಿ ಜತೆಗೆ ಮಾತನಾಡಿದ ಶರಣಪ್ಪ ಅವರು, “ಇದೊಂದು ರಾಷ್ಟ್ರ ಪ್ರೇಮದ ಕೆಲಸ. ಧ್ವಜವನ್ನು ಏರಿಸುವ, ಇಳಿಸುವ, ಮಡಚಿ ಇಡುವ ವಿಧಾನವನ್ನು ಕಲಿತು ಅದರಂತೆ ಮಾಡುತ್ತಿದ್ದೇನೆ. ಈ ಬಗ್ಗೆ ಹೆಮ್ಮೆ ಅನ್ನಿಸುತ್ತಿದೆ’ ಎಂದರು.

ಶರಣಪ್ಪ ಅವರ ನಿಷ್ಠೆಯ ಕಾಯಕ
ರಾಷ್ಟ್ರಧ್ವಜವನ್ನು ಬೆಳಗ್ಗೆ ಆರೋಹಣ ಮಾಡಿ ಸಂಜೆ ಅವರೋಹಣ ಮಾಡ ಬೇಕು. ಇದನ್ನು ತಪ್ಪದೇ ಮಾಡುವವರು ಯಾರು ಎಂಬ ವಿಚಾರ ಬಂದಾಗ “ಈ ಕೆಲಸ ನಾನು ಮಾಡುತ್ತೇನೆ’ ಎಂದು ಮುಂದೆ ಬಂದವರು ಮೂಲತಃ ಬಾದಾಮಿಯವರಾಗಿದ್ದು, ಮಂಗಳೂರಿನಲ್ಲಿ ನೆಲೆಸಿರುವ ಶರಣಪ್ಪ ಅವರು. ದೇವಾಂಗ ಭವನದಲ್ಲೇ ವಾಸವಾಗಿರುವ ಅವರು ಪ್ರತೀ ದಿನ ಬೆಳಗ್ಗೆ 7.30ಕ್ಕೆ ಗೌರವ ಪೂರ್ವಕವಾಗಿ ಧ್ವಜವನ್ನು ಹಾರಿಸಿ ಸಂಜೆ ಇಳಿಸುತ್ತಿದ್ದಾರೆ. ಈ ಅವಧಿಯಲ್ಲಿ ಅವರು ಊರಿಗೆ ಕೂಡ ಹೋಗಿಲ್ಲ.

Advertisement

ಕ್ಷೇತ್ರದ ಅವರಣದಲ್ಲಿ ಧ್ವಜಾ ರೋಹಣದ ಯೋಜನೆ ಆ ಕ್ಷಣಕ್ಕೆ ಬಂದ ಯೋಚನೆ. ಅನುಷ್ಠಾನಗೊಳಿಸುವಲ್ಲಿ ಒಳ್ಳೆಯ ವ್ಯಕ್ತಿಯೊಬ್ಬರು ಸಿಕ್ಕ ಕಾರಣ ವರ್ಷ ಕಾಲ ನಿರ್ವಿಘ್ನವಾಗಿ ನೆರವೇರಿತು. ಮುಂದಕ್ಕೆ ರಾಷ್ಟ್ರ ಪ್ರೇಮ ಉದ್ದೀಪನಗೊಳಿಸುವ ಇನ್ನೊಂದು ಉತ್ತಮ ಕಾರ್ಯಕ್ರಮವನ್ನು ಆಯೋಜಿಸುವ ಚಿಂತನೆ ಇದೆ.
– ಕ್ಷಿತಿ ಮಮೂÉರು, ಕ್ಷೇತ್ರದ ಆಡಳಿತ ಮೊಕ್ತೇಸರರು

Advertisement

Udayavani is now on Telegram. Click here to join our channel and stay updated with the latest news.

Next