Advertisement

ರಾಜಕೋಟ್ ಟೆಸ್ಟ್ ; ಗೆಲುವಿನ ತವಕದಲ್ಲಿ ಟೀಮ್ ಇಂಡಿಯ

05:15 PM Oct 05, 2018 | |

ರಾಜ್ ಕೋಟ್: ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಪ್ರವಾಸಿ ವೆಸ್ಟ್ ಇಂಡೀಸ್ ನಡುವಿನ ಪ್ರಥಮ ಟೆಸ್ಟ್ ಪಂದ್ಯದ ದ್ವಿತೀಯ ದಿನ ಭಾರತ ಸಂಪೂರ್ಣ ಮೇಲುಗೈ ಸಾಧಿಸಿದೆ. ಈ ಮೂಲಕ ಈ ಟೆಸ್ಟ್ ಪಂದ್ಯವನ್ನು ದೊಡ್ಡ ಅಂತರದಿಂದ ಗೆಲ್ಲುವ ತವಕದಲ್ಲಿದೆ. 

Advertisement

ಪಂದ್ಯದ ಮೊದಲ ದಿನಾಂತ್ಯಕ್ಕೆ ನಾಲ್ಕು ವಿಕೆಟ್ ನಷ್ಟಕ್ಕೆ 364 ರನ್ ಗಳಿಸಿದ್ದ ಭಾರತ ಶುಕ್ರವಾರ 9 ವಿಕೆಟ್ ನಷ್ಟಕ್ಕೆ 649 ರನ್ ಗಳಿಸಿ ಮೊದಲ ಇನ್ನಿಂಗ್ಸ್ ಡಿಕ್ಲೇರ್  ಮಾಡಿಕೊಂಡಿದೆ. ಮೊದಲ ದಿನದಾದ್ಯಂತದಲ್ಲಿ 72 ರನ್ ಗಳಿಸಿ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದ ನಾಯಕ ಕೊಹ್ಲಿ 139 ರನ್ ಗಳಿಸಿದರೆ, 17 ರನ್ ಗಳಿಸಿ ಆಡುತ್ತಿದ್ದ ರಿಷಭ್ ಪಂತ್  92 ರನ್ ಗಳಿಸಿ ಔಟಾದರು. ಈ ಮೂಲಕ ಸತತ ಎರಡನೇ ಶತಕ ಗಳಿಸುವ ಅಪೂರ್ವ ಅವಕಾಶ ಕೇವಲ 8 ರನ್ ಅಂತರದಿಂದ ವಂಚಿತರಾದರು.

ಇವರಿಬ್ಬರ ವಿಕೆಟ್ ಪತನದ ನಂತರ ಕ್ರೀಸ್  ಆಕ್ರಮಿಸಿಕೊಂಡ ರವೀಂದ್ರ ಜಡೇಜ ಸ್ಪೋಟಕ ಆಟವಾಡಿ ತಮ್ಮ ಮೊದಲ ಟೆಸ್ಟ್ ಶತಕ ಭಾರಿಸಿ ಸಂಭ್ರಮಿಸಿದರು. ಕೇವಲ 132 ಎಸೆತ ಎದುರಿಸಿದ ಜಡೇಜ 5 ಬೌಂಡರಿ, 5 ಸಿಕ್ಸರ್ ನೆರವಿನಿಂದ ಅಜೇಯ100 ರನ್ ಗಳಿಸಿದರು. ಜಡೇಜ ಶತಕದೊಂದಿಗೆ ಭಾರತ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. 


ವೆಸ್ಟ್ ಇಂಡೀಸ್ ಪರ ದೇವೇಂದ್ರ ಬಿಶೂ 4 ವಿಕೆಟ್, ಶೆರ್ಮನ್ ಲೆವಿಸ್ 2, ಶಾನನ್ ಗ್ಯಾಬ್ರಿಯಲ್, ರೋಸ್ಟನ್ ಚೇಸ್, ಬ್ರಾಥ್ ವೇಟ್ ತಲಾ ಒಂದು ವಿಕೆಟ್ ಪಡೆದರು. 

ಕುಸಿದ ವೆಸ್ಟ್ ಇಂಡೀಸ್
ತಮ್ಮ ಮೊದಲ ಇನ್ನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ತಮ್ಮ 2.2 ಓವರ್ ನಲ್ಲೇ  ನಾಯಕ ಕ್ರೇಗ್ ಬ್ರಾಥ್ ವೇಟ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಈಡಾಯಿತು. ಭಾರತದ ಕರಾರುವಕ್ಕಾದ ದಾಳಿಗೆ ವಿಂಡೀಸ್ ತಂಡದ ಬ್ಯಾಟ್ಸ್ ಮನ್ ರನ್ ಕಲೆ ಹಾಕಲು ಸ್ಫೋಟಕ ಪರದಾಡ ಬೇಕಾಯಿತು. ಎರಡನೇ ದಿನದ ಅಂತ್ಯಕ್ಕೆ 94 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡಿದೆ. ಭಾರತದ ಪರ ಮೊಹಮ್ಮದ್ ಶಮಿ ಎರಡು ವಿಕೆಟ್ ಪಡೆದರೆ, ಅಶ್ವಿನ್, ಜಡೇಜ ಮತ್ತು ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next