ನಾಗ್ಪುರ : ಇಲ್ಲಿನ ವಿದರ್ಭ ಕ್ರಿಕೆಟ್ ಅಸೋಸಿಯೇವನ್ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಪ್ರವಾಸಿ ಲಂಕಾ ಎದುರಿನ 2ನೇ ಕ್ರಿಕೆಟ್ ಟೆಸ್ಟ್ ಪಂದ್ಯದ ಇಂದು ಶನಿವಾರದ ಎರಡನೇ ದಿನದ ಅಂತ್ಯಕ್ಕೆ ಭಾರತ 2 ವಿಕೆಟ್ ನಷ್ಟಕ್ಕೆ 312 ರನ್ ಮಾಡಿ 107 ರನ್‌ಗಳ ಉತ್ತಮ ಲೀಡ್ ಪಡೆದು ಪಂದ್ಯದಲ್ಲಿ ತನ್ನ ಬಿಗಿ ಹಿಡಿತವನ್ನು ಸಾಧಿಸಿತು.
ಇಂದಿನ ಆಟದಲ್ಲಿ ಆರಂಭಕಾರ ಮುರಳಿ ವಿಜಯ್ ಮತ್ತು ಅವರಿಗೆ ಸಾಥ್ ಕೊಟ್ಟ ಚೇತೇಶ್ವರ ಪೂಜಾರ ತಲಾ ಶತಕ ಬಾರಿಸಿ ತಂಡದ ಬೃಹತ್ ಮೊತ್ತಕ್ಕೆ ಭದ್ರ ಬುನಾದಿ ಹಾಕಿದರು.
ದಿನಾಂತ್ಯಕ್ಕೆ ನಾಯಕ ವಿರಾಟ್ ಕೊಹ್ಲಿ 54 ರನ್ ಹಾಗೂ ಚೇತೇಶ್ವರ ಪೂಜಾರ 121ರನ್‌ಗಳೊಂದಿಗೆ ಕ್ರೀಸಿನಲ್ಲಿ ಉಳಿದಿದ್ದಾರೆ. ಭಾತ ಇಂದು 98 ಓವರ್‌ಗಳ ಆಟವನ್ನು ಉತ್ತಮವಾಗಿ ಪೂರೈಸಿತು.
ನಿನ್ನೆಯ ಮೊದಲ ದಿನದಲ್ಲಿ ಭಾರತ ರಾಹುಲ್ ಲೋಕೇಶ್ ಅವರ ವಿಕೆಟ್ ಕಳೆದುಕೊಂಡಿತ್ತಾದರೆ ಇಂದು ದಿನಪೂರ್ತಿಯ ಆಟದಲ್ಲಿ ಮುರಳಿ ವಿಜಯ್ ರೂಪದಲ್ಲಿ ಭಾರತ ಏಕೈಕ ವಿಕೆಟ್ ಕಳೆದುಕೊಂಡಿತು.
Related Articles
ಟಾಸ್ ಗೆದ್ದ ಮೊದಲ ಬ್ಯಾಟಿಂಗ್ ಆಯ್ದು ಕೊಂಡಿದ್ದ ಲಂಕಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 205 ರನ್‌ಗಳಿಗೆ ಆಲೌಟಾಗಿತ್ತು.