Vijay Hazare Trophy: ಚಾಂಪಿಯನ್ ಹರಿಯಾಣ ಪರಾಭವ… ಫೈನಲ್ ಪ್ರವೇಶಿಸಿದ ಕರ್ನಾಟಕ
Team Udayavani, Jan 15, 2025, 10:10 PM IST
ವಡೋದರ: ಹಾಲಿ ಚಾಂಪಿಯನ್ ಹರಿಯಾಣವನ್ನು 5 ವಿಕೆಟ್‌ಗಳಿಂದ ಪರಾಭವಗೊಳಿಸಿದ ಕರ್ನಾಟಕ “ವಿಜಯ್ ಹಜಾರೆ ಟ್ರೋಫಿ’ ಏಕದಿನ ಪಂದ್ಯಾವಳಿಯ ಫೈನಲ್‌ಗೆ ಲಗ್ಗೆ ಹಾಕಿದೆ.
ಗುರುವಾರದ ರಾಜಸ್ಥಾನ-ವಿದರ್ಭ ನಡುವೆ ದ್ವಿತೀಯ ಸೆಮಿಫೈನಲ್ ನಡೆಯಲಿದ್ದು, ಇಲ್ಲಿನ ವಿಜೇತ ತಂಡವನ್ನು ಶನಿವಾರದ ಫೈನಲ್‌ನಲ್ಲಿ ಕರ್ನಾಟಕ ಎದುರಿಸಲಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಹರಿಯಾಣ 9 ವಿಕೆಟಿಗೆ 237 ರನ್ ಗಳಿಸಿದರೆ, ಕರ್ನಾಟಕ 47.2 ಓವರ್‌ಗಳಲ್ಲಿ 5 ವಿಕೆಟಿಗೆ 238 ರನ್ ಮಾಡಿ ವಿಜಯಿಯಾಯಿತು.
ಬೌಲಿಂಗ್‌ನಲ್ಲಿ ಅಭಿಲಾಷ್ ಶೆಟ್ಟಿ, ಬ್ಯಾಟಿಂಗ್‌ನಲ್ಲಿ ದೇವದತ್ತ ಪಡಿಕ್ಕಲ್ ಮತ್ತು ಸ್ಮರಣ್ ರವಿಚಂದ್ರನ್ ಕರ್ನಾಟಕ ಗೆಲುವಿನ ರೂವಾರಿಗಳಾಗಿ ಮೂಡಿಬಂದರು. ಅಭಿಲಾಷ್ ಶೆಟ್ಟಿ 34ಕ್ಕೆ 4 ವಿಕೆಟ್ ಕೆಡವಿದರೆ, ಪಡಿಕ್ಕಲ್ ಸರ್ವಾಧಿಕ 86 ರನ್ (113 ಎಸೆತ, 8 ಬೌಂಡರಿ, 1 ಸಿಕ್ಸರ್) ಮತ್ತು ಸ್ಮರಣ್ ರವಿಚಂದ್ರನ್ 76 ರನ್ (94 ಎಸೆತ, 3 ಬೌಂಡರಿ, 3 ಸಿಕ್ಸರ್) ಬಾರಿಸಿದರು.
ಇದು ಕರ್ನಾಟಕ ಕಾಣುತ್ತಿರುವ 5ನೇ ಫೈನಲ್. ಹಿಂದಿನ ನಾಲ್ಕೂ ಪ್ರಶಸ್ತಿ ಸಮರದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಕರ್ನಾಟಕ ಕೊನೆಯ ಹಂತದಲ್ಲಿ ಒಂದಿಷ್ಟು ಬಿಗಿ ಬೌಲಿಂಗ್ ದಾಳಿ ಸಂಘಟಿಸಿದ್ದೇ ಆದರೆ ಹರಿಯಾಣವನ್ನು ಇನ್ನೂರರ ಒಳಗೆ ಹಿಡಿದು ನಿಲ್ಲಿಸಬಹುದಿತ್ತು. ಅಂತಿಮ ವಿಕೆಟಿಗೆ ಜತೆಗೂಡಿದ ಅನುಜ್ ಥಾಕ್ರಲ್-ಅಮಿತ್ ರಾಣಾ 39 ರನ್ ಒಟ್ಟುಗೂಡಿಸಿದರು.
ಹರಿಯಾಣ ಸರದಿಯಲ್ಲಿ ಯಾರಿಂದಲೂ ಅರ್ಧ ಶತಕ ದಾಖಲಾಗಲಿಲ್ಲ. ನಾಯಕ ಅಂಕಿತ್ ಕುಮಾರ್ ಸರ್ವಾಧಿಕ 48 ರನ್ ಹೊಡೆದರು. ಆರಂಭಕಾರ ಹಿಮಾಂಶು ರಾಣಾ 44, ಅನುಜ್ ಥಾಕ್ರಲ್ ಔಟಾಗದೆ 23 ರನ್ ಕೊಡುಗೆ ಸಲ್ಲಿಸಿದರು. ತಲಾ 2 ವಿಕೆಟ್ ಉರುಳಿಸಿದ ಪ್ರಸಿದ್ಧ್ ಕೃಷ್ಣ ಮತ್ತು ಶ್ರೇಯಸ್ ಗೋಪಾಲ್ ಕರ್ನಾಟಕದ ಮತ್ತಿಬ್ಬರು ಯಶಸ್ವಿ ಬೌಲರ್.
132 ರನ್ ಜತೆಯಾಟ
ಕರ್ನಾಟಕದ ಚೇಸಿಂಗ್ ಆಘಾತಕಾರಿಯಾಗಿತ್ತು. ಸರಣಿಯುದ್ದಕ್ಕೂ ರನ್ ಪ್ರವಾಹ ಹರಿಸುತ್ತಲೇ ಬಂದ ಮಾಯಾಂಕ್ ಅಗರ್ವಾಲ್ ಇಲ್ಲಿ 3ನೇ ಎಸೆತದಲ್ಲೇ ಖಾತೆ ತೆರೆಯುವ ಮೊದಲೇ ಪೆವಿಲಿಯನ್ ಸೇರಿಕೊಂಡರು. ಆದರೆ ದೇವದತ್ತ ಪಡಿಕ್ಕಲ್, ಸ್ಮರಣ್ ರವಿಚಂದ್ರನ್ ಅವರ ಅಮೋಘ ಆಟದಿಂದ ಚೇತರಿಕೆ ಕಂಡಿತು. ಇವರಿಬ್ಬರ 3ನೇ ವಿಕೆಟ್ ಜತೆಯಾಟದಲ್ಲಿ 132 ರನ್ ಹರಿದು ಬಂತು.
ಸಂಕ್ಷಿಪ್ತ ಸ್ಕೋರ್: ಹರಿಯಾಣ-9 ವಿಕೆಟಿಗೆ 237 (ಅಂಕಿತ್ ಕುಮಾರ್ 48, ಹಿಮಾಂಶು ರಾಣಾ 44, ಅನುಜ್ ಥಾಕ್ರಲ್ ಔಟಾಗದೆ 23, ಅಭಿಲಾಷ್ ಶೆಟ್ಟಿ 34ಕ್ಕೆ 4, ಶ್ರೇಯಸ್ ಗೋಪಾಲ್ 36ಕ್ಕೆ 2, ಪ್ರಸಿದ್ಧ್ ಕೃಷ್ಣ 40ಕ್ಕೆ 2). ಕರ್ನಾಟಕ-47.2 ಓವರ್‌ಗಳಲ್ಲಿ 5 ವಿಕೆಟಿಗೆ 238 (ಪಡಿಕ್ಕಲ್ 86, ಸ್ಮರಣ್ 76, ಶ್ರೇಯಸ್ ಔಟಾಗದೆ 23, ಅನೀಶ್ 22, ನಿಶಾಂತ್ 47ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test; 35 ವರ್ಷಗಳ ನಂತರ ಪಾಕಿಸ್ಥಾನದಲ್ಲಿ ಗೆಲುವು ಸಾಧಿಸಿದ ವೆಸ್ಟ್ ಇಂಡೀಸ್
ಪಾಕಿಸ್ತಾನದಲ್ಲಿ ಇನ್ನೂ ಮುಗಿಯದ ಮೈದಾನ ಕೆಲಸ: ಅನಿಶ್ಚಿತತೆಯಲ್ಲಿ ಚಾಂಪಿಯನ್ಸ್ ಟ್ರೋಫಿ
ICC ವರ್ಷದ ಟೆಸ್ಟ್ ಕ್ರಿಕೆಟಿಗನಾಗಿ ಬುಮ್ರಾ:ಪ್ರಶಸ್ತಿ ಗೆದ್ದ 6ನೇ ಭಾರತೀಯ ಎಂಬ ಹೆಗ್ಗಳಿಕೆ
Zanai Bhosle: ಆಶಾ ಭೋಂಸ್ಲೆ ಮೊಮ್ಮಗಳ ಜತೆ ಸಿರಾಜ್ ಡೇಟಿಂಗ್?: ಮೌನ ಮುರಿದ ವೇಗಿ
Champions Trophy ಮುನ್ನ ಲಾಹೋರ್, ಕರಾಚಿಯಲ್ಲಿ ತ್ರಿಕೋನ ಏಕದಿನ ಸರಣಿ