Advertisement
2012ರಲ್ಲಿ ಅಲಸ್ಟೇರ್ ಕುಕ್ ನೇತೃ ತ್ವದ ಇಂಗ್ಲೆಂಡ್ ವಿರುದ್ಧ ಕೊನೆಯ ಸಲ ಸರಣಿ ಕಳೆದುಕೊಂಡ ಭಾರತ, ಅನಂತರ ತವರಲ್ಲಿ ಯಾರಿಗೂ ಸರಣಿ ಬಿಟ್ಟು ಕೊಟ್ಟದ್ದಿಲ್ಲ. ಈ ಅವಧಿಯಲ್ಲಿ ಆಡಿದ 47 ಟೆಸ್ಟ್‌ಗಳಲ್ಲಿ 37 ಗೆಲುವು ಕಂಡಿದೆ.
Related Articles
Advertisement
ಬುಮ್ರಾ ಸ್ಥಾನಕ್ಕೆ ಯಾರು?:
ಈ ಬಾರಿ ವೇಗದ ಬೌಲಿಂಗ್ ವಿಭಾಗದಲ್ಲಿ ಭಾರತಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಸರಣಿಯಲ್ಲಿ ಸರ್ವಾಧಿಕ 17 ವಿಕೆಟ್ ಉರುಳಿಸಿ ಪ್ರಚಂಡ ಫಾರ್ಮ್ ಪ್ರದರ್ಶಿಸಿದ್ದ ಯಾರ್ಕರ್ ಸ್ಪೆಷಲಿಸ್ಟ್ ಜಸ್‌ಪ್ರೀತ್ ಬುಮ್ರಾ ಅನುಪಸ್ಥಿತಿಯೇ ಇದಕ್ಕೆ ಕಾರಣ. ವಿಶಾಖಪಟ್ಟಣ ಪಂದ್ಯದ 2ನೇ ದಿನದಾಟದಲ್ಲಿ ಇವರ ರಿವರ್ಸ್ ಸ್ವಿಂಗ್‌ಗೆ 6 ವಿಕೆಟ್ ಉರುಳಿದ ಕಾರಣ ಭಾರತಕ್ಕೆ ಸರಣಿಯನ್ನು ಸಮಬಲಕ್ಕೆ ತರಲು ಸಾಧ್ಯವಾಗಿತ್ತೆಂಬುದನ್ನು ಮರೆ ಯುವಂತಿಲ್ಲ.
ಮೊಹಮ್ಮದ್ ಸಿರಾಜ್ ಅವರೇ ಈಗ ವೇಗದ ವಿಭಾಗದ ಅನುಭವಿ ಬೌಲರ್. ಇವರಿಗೆ ಜತೆ ನೀಡಲು ಇಬ್ಬರು ಬಂಗಾಲಿಗಳಾದ ಮುಕೇಶ್ ಕುಮಾರ್ ಮತ್ತು ಆಕಾಶ್ ದೀಪ್ ಮಧ್ಯೆ ಸ್ಪರ್ಧೆ ಇದೆ. ಆದರೆ ಅಂತಿಮವಾಗಿ ಭಾರತದ ತ್ರಿವಳಿ ಸ್ಪಿನ್ನರ್‌ಗಳೇ ಪ್ರಭುತ್ವ ಸಾಧಿಸುವ ನಿರೀಕ್ಷೆ ಇರುವುದರಿಂದ ಬುಮ್ರಾ ಗೈರಿನ ಬಗ್ಗೆ ವಿಶೇಷವಾಗಿ ಚಿಂತಿಸಬೇಕಿಲ್ಲ ಎಂದೂ ಸಮಾಧಾನಪಡಬಹುದು.
“ಬಾಝ್ ಬಾಲ್’ ಠುಸ್:
ಇಂಗ್ಲೆಂಡಿಗರ “ಬಾಝ್ ಬಾಲ್’ ಕ್ರಿಕೆಟ್ ಇದೀಗ ಠುಸ್ ಆಗಿದೆ. ಇದಕ್ಕೆ ಅಲ್ಲಿನ ಮಾಜಿಗಳೇ ಟೀಕಿಸುತ್ತಿದ್ದಾರೆ. ಎಲ್ಲ ಕಾಲಕ್ಕೂ ಇದು ನಡೆಯದು ಎಂದು ಬುದ್ಧಿವಾದವನ್ನೂ ಹೇಳಿದ್ದಾರೆ. ಇದು ಸ್ಟೋಕ್ಸ್ ಬಳಗಕ್ಕೆ ಅರ್ಥವಾಗಬೇಕಿದೆ.
ರಾಜ್‌ಕೋಟ್ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಎದುರಾದ ಬ್ಯಾಟಿಂಗ್ ಕುಸಿತ ಕಂಡಾಗ ಇಂಗ್ಲೆಂಡ್ ಸರಣಿಗೆ ಮರಳುವುದು ಸುಲಭವಲ್ಲ ಎಂದೇ ಭಾವಿಸಬೇಕಿದೆ.
ಇಂಗ್ಲೆಂಡ್ ಆಡುವ ಬಳಗದಲ್ಲಿ ರಾಬಿನ್ಸನ್, ಶೋಯಿಬ್ ಬಶೀರ್ :
ಎಂದಿನಂತೆ ಇಂಗ್ಲೆಂಡ್ ಒಂದು ದಿನ ಮುಂಚಿತವಾಗಿ ತನ್ನ ಆಡುವ ಬಳಗವನ್ನು ಪ್ರಕಟಿಸಿದೆ. ಮಾರ್ಕ್ ವುಡ್ ಮತ್ತು ರೆಹಾನ್ ಅಹ್ಮದ್ ಅವರನ್ನು ಕೈಬಿಟ್ಟಿದ್ದು, ಮಧ್ಯಮ ವೇಗಿ ಓಲೀ ರಾಬಿನ್ಸನ್ ಮತ್ತು ಸ್ಪಿನ್ನರ್ ಶೋಯಿಬ್ ಬಶೀರ್ ಅವರನ್ನು ಸೇರಿಸಿಕೊಂಡಿದೆ.
ಇಂಗ್ಲೆಂಡ್ ಇಲೆವೆನ್: ಜಾಕ್ ಕ್ರಾಲಿ, ಬೆನ್ ಡಕೆಟ್, ಓಲೀ ಪೋಪ್, ಜೋ ರೂಟ್, ಜಾನಿ ಬೇರ್‌ಸ್ಟೊ, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್, ಟಾಮ್ ಹಾಟಿÉì, ಓಲೀ ರಾಬಿನ್ಸನ್, ಜೇಮ್ಸ್ ಆ್ಯಂಡರ್ಸನ್, ಶೋಯಿಬ್ ಬಶೀರ್.
ರಾಂಚಿ ಟೆಸ್ಟ್ ದಾಖಲೆ:
ರಾಂಚಿ: ರಾಂಚಿಯಲ್ಲಿ ಮೊದಲ ಟೆಸ್ಟ್ ನಡೆದದ್ದು 2017 ರಲ್ಲಿ. ಎದುರಾಳಿ ಆಸ್ಟ್ರೇಲಿಯ. ದೊಡ್ಡ ಮೊತ್ತದ ಈ ಪಂದ್ಯ ಡ್ರಾಗೊಂಡಿತ್ತು. ಆಸ್ಟ್ರೇಲಿಯದ 451ಕ್ಕೆ ಉತ್ತರವಾಗಿ ಭಾರತ 9ಕ್ಕೆ 603 ರನ್ ಪೇರಿಸಿ ಡಿಕ್ಲೇರ್ ಮಾಡಿತ್ತು. ಆಸೀಸ್ ಪರ ನಾಯಕ ಸ್ಮಿತ್ 178, ಮ್ಯಾಕ್ಸ್ ವೆಲ್ 104; ಭಾರತದ ಪರ ಪೂಜಾರ 202, ಸಾಹಾ 117 ರನ್ ಬಾರಿಸಿದ್ದರು. ಜಡೇಜ ಒಟ್ಟು 9 ವಿಕೆಟ್ ಕೆಡವಿದ್ದರು.
2ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯವನ್ನು 2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಾಗಿತ್ತು. ವಿರಾಟ್ ಕೊಹ್ಲಿ ಪಡೆ ಇದನ್ನು ಇನ್ನಿಂಗ್ಸ್ ಹಾಗೂ 202 ರನ್ ಅಂತರದಿಂದ ಜಯಿಸಿತ್ತು. ಭಾರತ 9ಕ್ಕೆ 497 ರನ್ ಪೇರಿಸಿ ಡಿಕ್ಲೇರ್ ಮಾಡಿದರೆ, ಫಾಲೋಆನ್‌ಗೆ ತುತ್ತಾದ ದ. ಆಫ್ರಿಕಾ 162 ಮತ್ತು 133ಕ್ಕೆ ಆಟ ಮುಗಿಸಿತ್ತು. ರೋಹಿತ್ 212, ಕೊಹ್ಲಿ 115 ರನ್ ಬಾರಿಸಿದ್ದರು.