Advertisement

ಭಾರತದ ವೇಗಕ್ಕೆ ಕುಸಿದ ಇಂಗ್ಲೆಂಡ್‌

12:50 AM Aug 05, 2021 | Team Udayavani |

ನಾಟಿಂಗ್‌ಹ್ಯಾಮ್‌: ಭಾರತದ ವೇಗಿಗಳ ಬಿಗಿ ದಾಳಿಗೆ ಪರದಾಡಿದ ಇಂಗ್ಲೆಂಡ್‌, ನಾಟಿಂಗ್‌ಹ್ಯಾಮ್‌ ಟೆಸ್ಟ್‌ ಪಂದ್ಯದ ಮೊದಲ ದಿನ ತೀವ್ರ ಕುಸಿತ ಅನುಭವಿಸಿ 183 ರನ್‌ಗೆ ಆಲೌಟ್‌ ಆಗಿದೆ. ಇಂಗ್ಲೆಂಡ್‌ ಪರ ಕಪ್ತಾನನ ಆಟವಾಡಿದ ಜೋ ರೂಟ್‌ 64 ರನ್‌ ಮಾಡಿದರು.

Advertisement

ಟಾಸ್‌ ಗೆದ್ದ ಇಂಗ್ಲೆಂಡ್‌ ಮೊದಲು ಬ್ಯಾಟಿಂಗ್‌ ಮಾಡಲು ನಿರ್ಧರಿಸಿತು. ಬುಮ್ರಾ ಪಂದ್ಯದ 5ನೇ ಎಸೆತದಲ್ಲೇ ಖಾತೆ ತೆರೆಯದ ರೋರಿ ಬರ್ನ್ಸ್ ಅವರನ್ನು ಲೆಗ್‌ ಬಿಫೋರ್‌ ಬಲೆಗೆ ಬೀಳಿಸಿದರು. ಈ ಆಘಾತದಿಂದ ಚೇತರಿಸಿಕೊಳ್ಳಲು ಇಂಗ್ಲೆಂಡಿಗೆ ಸಾಧ್ಯವಾಗಲಿಲ್ಲ. ಲಂಚ್‌ ವೇಳೆ 2ಕ್ಕೆ 61 ರನ್‌ ಗಳಿಸಿದ ಇಂಗ್ಲೆಂಡ್‌, ಚಹಾ ವಿರಾಮದ ಹೊತ್ತಿಗೆ 138ಕ್ಕೆ 4 ವಿಕೆಟ್‌ ಕಳೆದುಕೊಂಡಿತ್ತು.

ಟೀ ಬಳಿಕ ಲಾರೆನ್ಸ್‌ ಮತ್ತು ಬಟ್ಲರ್‌ ಶೂನ್ಯಕ್ಕೆ ಔಟಾದದ್ದು ಇಂಗ್ಲೆಂಡಿನ ಸ್ಥಿತಿಯನ್ನು ಬಿಗಡಾಯಿಸುವಂತೆ ಮಾಡಿತು. ಉತ್ತಮವಾಗಿ ಆಡುತ್ತಿದ್ದ ರೂಟ್‌ ಕೂಡ ಪೆವಿಲಿಯನ್‌ ಹಾದಿ ಹಿಡಿದರು. ಭಾರತದ ಪರ ಜಸ್‌ಪ್ರೀತ್‌ ಬುಮ್ರಾ 4, ಶಮಿ 3, ಶಾರ್ದೂಲ್‌ ಠಾಕೂರ್‌ 2, ಸಿರಾಜ್‌ ಒಂದು ವಿಕೆಟ್‌ ಕಿತ್ತರು.

ಈ ಪಂದ್ಯಕ್ಕಾಗಿ ಅನುಭವಿ ಸ್ಪಿನ್ನರ್‌ ಆರ್‌. ಅಶ್ವಿ‌ನ್‌ ಅವರನ್ನು ಹೊರಗಿರಿಸಿದ್ದು ಅಚ್ಚರಿಯಾಗಿ ಕಂಡಿತು. ಹಾಗೆಯೇ ಹಿರಿಯ ವೇಗಿ ಇಶಾಂತ್‌ ಶರ್ಮ ಅವರನ್ನೂ ಕೈಬಿಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next