Advertisement

Pink Test: ಸಿಡ್ನಿಯಲ್ಲೂ ನಡೆಯಲಿದೆ ಪಿಂಕ್‌ ಟೆಸ್ಟ್‌

11:01 PM Jan 01, 2025 | Team Udayavani |

ಸಿಡ್ನಿಯಲ್ಲಿ ನಡೆಯುವುದು “ಪಿಂಕ್‌ ಟೆಸ್ಟ್‌’. ಆದರೆ ಪಿಂಕ್‌ ಬಾಲ್‌ ಬಳಸಿ ಆಡುವ ಡೇ-ನೈಟ್‌ ಟೆಸ್ಟ್‌ ಇದಲ್ಲ. ಸ್ತನ ಕ್ಯಾನ್ಸರ್‌ ವಿರುದ್ಧ ಜಾಗೃತಿ ಮೂಡಿಸಿ, ಗ್ಲೆನ್‌ ಮೆಕ್‌ಗ್ರಾತ್‌ ಫೌಂಡೇಶನ್‌ಗೆ ಆರ್ಥಿಕ ನೆರವು ನೀಡುವುದು ಈ ಪಂದ್ಯದ ಉದ್ದೇಶ.

Advertisement

2009ರಿಂದೀಚೆ ಆಸ್ಟ್ರೇಲಿಯದ ವರ್ಷಾರಂಭದ ಟೆಸ್ಟ್‌ ಪಂದ್ಯ “ಪಿಂಕ್‌ ಟೆಸ್ಟ್‌’ ಆಗಿರುತ್ತದೆ. ಗ್ಲೆನ್‌ ಮೆಕ್‌ಗ್ರಾತ್‌ ಅವರ ಪತ್ನಿ ಜೇನ್‌ ಮೆಕ್‌ಗ್ರಾತ್‌ 2008ರಲ್ಲಿ ಸ್ತನ ಕ್ಯಾನ್ಸರ್‌ನಿಂದ ನಿಧನ ಹೊಂದಿದ್ದರು. ಅವರ ಗೌರವಾರ್ಥ ಪಿಂಕ್‌ ಟೆಸ್ಟ್‌ ಆಡಲಾಗುತ್ತಿದೆ. ಅಂದು ಹುಟ್ಟಿಕೊಂಡ ಮೆಕ್‌ಗ್ರಾತ್‌ ಫೌಂಡೇಶನ್‌, ಸ್ತನ ಕ್ಯಾನ್ಸರ್‌ ಪೀಡಿತರಿಗೆ ಧನ ಸಹಾಯ ಮಾಡುತ್ತ ಬಂದಿದೆ.

ಈ ಪಂದ್ಯ ವೇಳೆ ಆಸ್ಟ್ರೇಲಿಯದ ಕ್ರಿಕೆಟಿಗರ ಕ್ಯಾಪ್‌, ಜೆರ್ಸಿ ನಂಬರ್‌, ಇದರ ಮೇಲಿನ ಅವರ ಹೆಸರೆಲ್ಲ ಪಿಂಕ್‌ ಬಣ್ಣದಲ್ಲಿರುತ್ತದೆ. ಇಡೀ ಸ್ಟೇಡಿಯಂ ಗುಲಾಲಿ ಬಣ್ಣವಾಗಿ ಪರಿವರ್ತನೆಗೊಳ್ಳಲಿದೆ. ವೀಕ್ಷಕರು ಕೂಡ ಇದೇ ಬಣ್ಣದ ಉಡುಗೆಯಲ್ಲಿರುತ್ತಾರೆ. ಪಂದ್ಯದ 3ನೇ ದಿನ “ಜೇನ್‌ ಮೆಕ್‌ಗ್ರಾತ್‌ ಡೇ’ ಆಚರಿಸಲಾಗುತ್ತದೆ.
ಬುಧವಾರ ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ಗೆ ಆಗಮಿಸಿದ ಗ್ಲೆನ್‌ ಮೆಕ್‌ಗ್ರಾತ್‌ ಆಸೀಸ್‌ ಕ್ರಿಕೆಟಿಗರೊಂದಿಗೆ ಬೆರೆತರು. ಎಲ್ಲರೂ ಗುಲಾಲಿ ಬಣ್ಣಕ್ಕೆ ಆದ್ಯತೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next