Advertisement
ಟಿ20 ಸರಣಿ ಜುಲೈ 6ರಿಂದ 14ರ ತನಕ ನಡೆಯಲಿದೆ. ಜು. 6, 7, 10, 13 ಮತ್ತು 14ರಂದು ಈ ಸರಣಿ ನಡೆಯಲಿದೆ. ಎಲ್ಲ ಪಂದ್ಯಗಳನ್ನು ಹರಾರೆಯಲ್ಲಿ ಆಡಲಾಗುವುದು.
“ಬಿಸಿಸಿಐ ಜಾಗತಿಕ ಕ್ರಿಕೆಟ್ ಸಮುದಾಯಕ್ಕೆ ಮುಂಚೂಣಿಯಲ್ಲಿ ನಿಂತು ಕೊಡುಗೆ ಸಲ್ಲಿಸಿದೆ. ಜಿಂಬಾಬ್ವೆ ಕ್ರಿಕೆಟ್ ಪುನರುತ್ಥಾನಕ್ಕೆ ಇದು ಸಕಾಲ. ಅದಕ್ಕೆ ನಮ್ಮ ಸಹಾಯ ಸದಾ ಲಭಿಸಲಿದೆ’ ಎಂಬುದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿಕೆ. ಇಂಥ ದ್ವಿಪಕ್ಷೀಯ ಸರಣಿಗಳಿಗೆ ಹೆಚ್ಚಿನ ಆದ್ಯತೆ ನೀಡಿ ಇದನ್ನು ಆರ್ಥಿಕವಾಗಿ ಸಬಲಗೊಳಿಸುವುದೂ ಬಿಸಿಸಿಐ ಉದ್ದೇಶ ಎಂಬುದಾಗಿ ಜಯ್ ಶಾ ಅವರು ಹೇಳಿದರು.