Advertisement

Asian Games ; ಭಾರತದ ಪುರುಷರ ಹಾಗೂ ವನಿತೆಯರ ಹಾಕಿ ತಂಡ ಪ್ರಕಟ

11:21 PM Aug 31, 2023 | Team Udayavani |

ಬೆಂಗಳೂರು: ಚೀನದ ಹ್ಯಾಂಗ್‌ಝೂನಲ್ಲಿ ನಡೆ ಯಲಿರುವ ಏಷ್ಯನ್‌ ಗೇಮ್ಸ್‌ಗೆ ತಲಾ 18 ಸದಸ್ಯರ ಭಾರತೀಯ ಪುರುಷರ ಹಾಗೂ ವನಿತೆಯರ ಹಾಕಿ ತಂಡವನ್ನು ಪ್ರಕಟಿಸಲಾಗಿದೆ. ವೆಟರನ್‌ ಸ್ಟ್ರೈಕರ್‌ ಆಕಾಶ್‌ದೀಪ್‌ ಸಿ,ಗ್‌ ಮತ್ತು ಯುವ ಕಾರ್ತಿ ಸೆಲ್ವಂ ಅವರನ್ನು ಕೈಬಿಡಲಾಗಿದ್ದರೆ ಅನುಭವಿ ಲಲಿತ್‌ ಉಪಾಧ್ಯಾಯ ತಂಡಕ್ಕೆ ಮರಳಿದ್ದಾರೆ.

Advertisement

ಡ್ರ್ಯಾಗ್‌ ಫ್ಲಿಕರ್‌ ಹರ್ಮನ್‌ಪ್ರೀತ್‌ ಸಿಂಗ್‌ ಮತ್ತು ಮಿಡ್‌ಫೀಲ್ಡರ್‌ ಹಾರ್ದಿಕ್‌ ಸಿಂಗ್‌ ಅವರು ಅನುಕ್ರಮವಾಗಿ ತಂಡದ ನಾಯಕ ಮತ್ತು ಉಪನಾಯಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಸವಿತಾ ಪೂನಿಯಾ ನಾಯಕಿ
18 ಸದಸ್ಯರ ವನಿತಾ ಹಾಕಿ ತಂಡವನ್ನು ಗೋಲ್‌ಕೀಪರ್‌ ಸವಿತಾ ಪೂನಿಯಾ ಮುನ್ನಡೆಸಲಿದ್ದಾರೆ. ಅನುಭವಿ ಸುಶೀಲಾ ಚಾನುಪುಖ್ರಂಬಮ್‌, ಬಲ್ಜೀತ್‌ ಕೌರ್‌ ಮತ್ತು ಜ್ಯೋತಿ ಚೇತ್ರಿ ಅವರನ್ನು ಕೈಬಿಡಲಾಗಿದೆ. ಈ ಮೂವರು ಕಳೆದ ತಿಂಗಳು ಜರ್ಮನಿ ಮತ್ತು ಸ್ಪೇನ್‌ ಪ್ರವಾಸದ ವೇಳೆ ತಂಡದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next