Advertisement

ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಖಂಡನೆ

04:55 PM Nov 11, 2020 | Suhan S |

ಮಂಡ್ಯ: ಗೋದಾಮುಗಳಲ್ಲಿ ಕೊಳೆಯುತ್ತಿರುವ  ಆಹಾರ ಧಾನ್ಯಗಳ ರಕ್ಷಣೆಗೆ ಸೂಕ್ತ ಕ್ರಮ, ಬಿಸಿಯೂಟ ಫ‌ಲಾನುಭವಿಗಳಿಗೆ ಸಮರ್ಪಕ ಧಾನ್ಯ ವಿತರಣೆ ಹಾಗೂ ಅಗತ್ಯ ವಸ್ತುಗಳಬೆಲೆ ಏರಿಕೆ ಖಂಡಿಸಿ ಅಖೀಲ ಭಾರತ ಜನವಾದಿ ಮಹಿಳಾ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಅಗತ್ಯವಸ್ತುಗಳಾದ ಈರುಳ್ಳಿ, ಬೆಳ್ಳುಳ್ಳಿ, ಟೊಮೆಟೋ, ಗ್ಯಾಸ್‌ ಸಿಲಿಂಡರ್‌ ಸೇರಿ ವಿವಿಧ ವಸ್ತುಗಳನ್ನಿಟ್ಟು ವಿನೂತನವಾಗಿ ಪ್ರತಿಭಟನೆ ನಡೆಸಿದರು. ಅಲ್ಲದೇ,ಗ್ಯಾಸ್‌ ಸಿಲಿಂಡರ್‌ ಬೆಲೆ ಏರಿಕೆ ಆಗಿರುವುದರಿಂದ ಹಿಂದೆ ಸೌದೆ ಒಲೆಯಲ್ಲಿ ಆಹಾರ ತಯಾರಿಸುವ ಸ್ಥಿತಿಗೆ ಕೇಂದ್ರ ಸರ್ಕಾರ ಬಡವರ ಮೇಲೆ ಪ್ರಹಾರ ನಡೆಸಲು ಮುಂದಾಗಿದೆ ಎಂದು ಒಲೆ ಹಚ್ಚಿ ಅಡುಗೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಕ್ರಮ ಕೈಗೊಳ್ಳಿ: ಕೋವಿಡ್ ದಿಂದ ಲಾಕ್‌ಡೌನ್‌ಸಂದರ್ಭದಲ್ಲಿ ಸಾಕಷ್ಟು ಮಂದಿ ಉದ್ಯೋಗಕಳೆದು ಕೊಂಡರು. ಆರ್ಥಿಕವಾಗಿ ಸಂಕಷ್ಟ ಎದುರಾಯಿತು. ಅಲ್ಲದೆ, ಶಾಲಾ, ಅಂಗನವಾಡಿ ಕೇಂದ್ರಗಳನ್ನು ತೆರೆಯದ ಪರಿಣಾಮ ಮಕ್ಕಳು ಬಿಸಿಯೂಟದಿಂದ ವಂಚಿತವಾದವು. ಇದು ಸರ್ಕಾರಕ್ಕೆ ಗೊತ್ತಿದ್ದರೂ ಆಹಾರ ಧಾನ್ಯಗಳನ್ನು ಮನೆ ಪೂರೈಸದೆ ನಿಲ್ಲಿಸಿದೆ. ಇದರಿಂದ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಗೋದಾಮುಗಳಲ್ಲಿ ಅಪಾರ ಪ್ರಮಾಣದ ಆಹಾರ ಧಾನ್ಯ ಕೊಳೆತುನಾರುತ್ತಿದೆ. ಹೀಗಾಗಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಾನವೀಯತೆ ಇಲ್ಲ:  43258 ಟನ್‌ ಅಕ್ಕಿ, 1716ಟನ್‌ ಗೋಧಿ, 12,046 ಟನ್‌ ತೊಗರಿಬೇಳೆ, ಖಾದ್ಯ ತೈಲ ಮನುಷ್ಯರ ಬಳಕೆಗೆ ಯೋಗ್ಯವಲ್ಲದ ಸ್ಥಿತಿ ತಲುಪಿವೆ. ಇದು ಮಾನವ ನಿರ್ಮಿತ ದುರಂತ. ಗೋದಾಮುಗಳಲ್ಲಿ ಆಹಾರಧಾನ್ಯ ಸಂಗ್ರಹ ವಿದ್ದೂ ವಿತರಿಸದಂತೆ ತಡೆ ಹಿಡಿದ ಆರ್ಥಿಕ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಉಪಯೋಗಕ್ಕೆ ಬಳಸಬಹುದಾದ ಧಾನ್ಯಗಳನ್ನು ಅಗತ್ಯವಿರುವವರಿಗೆ ಹೆಚ್ಚುವರಿ ವಿತರಿಸಬೇಕು ಎಂದು ಒತ್ತಾಯಿಸಿದರು.

ಸುಗ್ರಿವಾಜ್ಞೆ ಹಿಂಪಡೆಯಿರಿ: ತಕ್ಷಣವೇ ಕೇರಳ ಮಾದರಿಯಲ್ಲಿ ಮಧ್ಯಾಹ್ನದ ಬಿಸಿಯೂಟದ ಎಲ್ಲಾ ಫ‌ಲಾನುಭವಿಗಳಿಗೂ ತಾರತಮ್ಯವಿಲ್ಲದೆ ಹಂಚ ಬೇಕು. ಘೋಷಣೆಗೆ ಮತ್ತು ಪ್ರಚಾರಕ್ಕೆ ಕೆಲವೆಡೆ ಹಂಚಿಬಿಟ್ಟ ಹಿಂದಿನ ಅನುಭವ ಮರುಕಳಿಸದಂತೆ ಎಚ್ಚರ ವಹಿಸಬೇಕು. ವಿದ್ಯುತ್‌ದರ, ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸಬೇಕು. ಕೃಷಿ ಸುಗ್ರಿವಾಜ್ಞೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

Advertisement

ಅಖೀಲ ಭಾರತ ಜನವಾದಿ ಸಂಘಟನೆರಾಜ್ಯಾಧ್ಯಕ್ಷೆ ದೇವಿ, ಜಿಲ್ಲಾಧ್ಯಕ್ಷೆ ಶೋಭಾ, ಮಂಜುಳಾ, ಸುಶೀಲಾ, ಡಿ.ಕೆ.ಲತಾ, ಪ್ರೇಮಾ, ಜಯಶೀಲಾ, ಸುಮಿತ್ರಾ ಮತ್ತಿತರರಿದ್ದರು.

ಶಾಲೆ, ಅಂಗನವಾಡಿ ಕೇಂದ್ರಗಳನ್ನು ಬಂದ್‌ ಮಾಡಿದ್ದರಿಂದ ಮಕ್ಕಳು ಬಿಸಿಯೂಟದಿಂದ ವಂಚಿತರಾಗಿವೆ. ಇತ್ತ ಆಹಾರ ಧಾನ್ಯ ಗೋದಾಮುಗಳಲ್ಲಿ ಹುಳು ಹಿಡಿಯುತ್ತಿವೆ.ಕೂಡಲೇ ಸರ್ಕಾರ ಎಚ್ಚೆತ್ತು ಬಿಸಿಯೂಟಯೋಜನೆ ಫ‌ಲಾನುಭವಿಗಳಿಗೆ ಆಹಾರವಿತರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು. ದೇವಿ, ರಾಜ್ಯಾಧ್ಯಕ್ಷೆ, ಅಖೀಲ ಭಾರತ ಜನವಾದಿ ಸಂಘಟನೆ

Advertisement

Udayavani is now on Telegram. Click here to join our channel and stay updated with the latest news.

Next