ಚಿಕ್ಕಬಳ್ಳಾಪುರ: ಜನತಾ ಕರ್ಫ್ಯೂ ಜಾರಿಗೊಳಿಸಿದಪರಿಣಾಮ ಪಕ್ಕದ ಬೆಂಗಳೂರಿನಲ್ಲಿ ಉದ್ಯೋಗ ಅರಿಸಿಹೋಗಿದ್ದ ಜಿಲ್ಲೆಯ ಜನರು ಸ್ವಗ್ರಾಮಗಳಿಗೆ ವಾಪಸ್ಸಾದ ಬಳಿಕ ಗ್ರಾಮೀಣ ಭಾಗದಲ್ಲಿ ಕೊರೊನಾಸೋಂಕಿತ ಪ್ರಕರಣ ಹೆಚ್ಚಾಗಿದ್ದು, ಜಿಲ್ಲಾಡಳಿತ ಕಾರ್ಯಪಡೆ ರಚಿಸಿ ತೀವ್ರ ನಿಗಾವಹಿಸಿದೆ. ಜಿಲ್ಲೆಯಲ್ಲಿ ದಿನೇದಿನೆ ಕೊರೊನಾ ಸೋಂಕಿತರಸಂಖ್ಯೆ ಹೆಚ್ಚಾಗುತ್ತಿದೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ರಚಿಸಿರುವ ಕೊರೊನಾ ಕಾರ್ಯ ಪಡೆ ಸಕ್ರಿಯವಾಗಿಕಾರ್ಯನಿರ್ವಹಿಸುತ್ತಿರುವ ಕಾರಣ ಕೊರೊನಾ ಸೋಂಕಿನಪ್ರಕರಣಗಳು ನಿಯಂತ್ರಣಕ್ಕೆ ಬರು ತ್ತಿವೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಹೇಳಿ ದ್ದಾರೆ.
ಮಾಸ್ಕ್ ಧರಿಸಿದೆ,ಅನಾಗತ್ಯವಾಗಿ ಓಡಾಡುವವರಿಗೆ ದಂಡವಿಧಿ ಸುವಮೂಲಕ ಪೊಲೀಸರು, ಪಿಡಿಒಗಳು ಕೊರೊನಾ ನಿಯಂತ್ರಣಕ್ಕೆ ಮುಂದಾಗಿದ್ದಾರೆ.ಜಿಲ್ಲೆಯು ಆಂಧ್ರ ಹಾಗೂ ಬೆಂಗಳೂರು ಗಡಿಗೆಹೊಂದಿಕೊಂಡಿದ್ದು, ಅಲ್ಲಿಂದ ಕಾರ್ಮಿಕರು ಜಿಲ್ಲೆಗೆವಲಸೆ ಬಂದಿದ್ದಾರೆ. ಇವರ ಜೊತೆಗೆ ಜಿಲ್ಲೆಯಲ್ಲಿರುವಜನರ ಕುಟುಂಬ ಸದಸ್ಯರೂ ಬಂದಿದ್ದಾರೆ. ಬೆಂಗಳೂರಿನಿಂದ ಜಿಲ್ಲೆಗೆ ಬಂದಿರುವ ಪ್ರತಿಯೊಬ್ಬರುಕಡ್ಡಾಯವಾಗಿ ಹೋಂಕ್ವಾರಂಟೈನ್ ಆಗಬೇಕೆಂದುಸೂಚನೆ ನೀಡಲಾಗಿದೆ.
ನೋಡಲ್ ಅಧಿಕಾರಿಗಳ ನೇಮಕ: ಜಿಲ್ಲೆಯಲ್ಲಿಕೊರೊನಾ ಸೋಂಕು ನಿಯಂತ್ರಿಸಲು ಜನತಾ ಕರ್ಫ್ಯೂನಿಯಮ ಕಟ್ಟುನಿಟ್ಟಾಗಿ ಜಾರಿಗೊಳಿಸುವ ಜೊತೆಗೆ ಪ್ರತಿತಾಲೂಕಿಗೆ ಜಿಲ್ಲಾ ಮಟ್ಟದ ಅ ಧಿಕಾರಿಗಳನ್ನು ನೋಡಲ್‌ಅಗಿ ನೇಮಕ ಮಾಡಲಾಗಿದೆ. ತಾಲೂಕು ಮಟ್ಟದಅ ಧಿಕಾರಿಗಳು, ನಗರ-ಗ್ರಾಮೀಣ ಕೊರೊನಾ ಕಾರ್ಯಪಡೆಗಳು ಸದಸ್ಯರು, ನೋಡಲ್ ಅ ಧಿಕಾರಿಗಳೊಂದಿಗೆನಿಕಟ ಸಂಪರ್ಕ ಸಾ ಧಿಸಿ ಕೋವಿಡ್‌ಗೆ ಸಂಬಂ ಧಿಸಿದಂತೆಮಾಹಿತಿ ಪಡೆಯುತ್ತಿದ್ದಾರೆ.
ವಾಹನಗಳ ಜಪ್ತಿ: ಜಿಲ್ಲೆಯಲ್ಲಿ ಜನತಾ ಕರ್ಫ್ಯೂಜಾರಿಗೊಳಿಸಿರುವ ಸಂದರ್ಭದಲ್ಲಿ ಅನಗತ್ಯವಾಗಿಮನೆಯಿಂದ ಹೊರಬರುವ ನಾಗರಿಕರ ವಾಹನಗಳನ್ನು ಜಪ್ತಿ ಮಾಡುವ ಕಾರ್ಯ ಪೊಲೀಸ್ ಅ ಧಿಕಾರಿಗಳು ಮಾಡುತ್ತಿದ್ದಾರೆ. ಎಸ್ಪಿ ಮಿಥುನ್‌ಕುಮಾರ್‌ನೇತೃತ್ವ ದಲ್ಲಿ ಚಿಕ್ಕಬಳ್ಳಾಪುರ ಡಿವೈಎಸ್ಪಿ ರವಿಶಂಕರ್,ಚಿಂತಾಮಣಿ ಡಿವೈಎಸ್ಪಿ ಲಕ್ಷ್ಮಯ್ಯ, ಜಿಲ್ಲೆಯ ಆರಕ್ಷಕವೃತ್ತ ನಿರೀಕ್ಷಕರು-ಉಪ ನಿರೀಕ್ಷಕರು ನಗರ ಮತ್ತುಗ್ರಾಮೀಣ ಪ್ರದೇಶದಲ್ಲಿ ಗಸ್ತು ನಡೆಸಿ ಸಂಚಲನಸೃಷ್ಟಿಸಿದ್ದಾರೆ.
ಹಳ್ಳಿಗಳ ಸ್ಯಾನಿಟೈಸ್: ಕೊರೊನಾ ಸೋಂಕುನಿಯಂತ್ರಿಸುವ ವಿಚಾರದಲ್ಲಿ ಜಿಲ್ಲಾಧಿ ಕಾರಿ ಆರ್.ಲತಾನೇತೃತ್ವದಲ್ಲಿ ಜಿಪಂ ಸಿಇಒ ಪಿ.ಶಿವಶಂಕರ್, ಅಪರಜಿಲ್ಲಾ ಧಿಕಾರಿ ಅಮರೇಶ್, ಜಿಲ್ಲಾ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಎಸಿ ರಘುನಂದನ್, ನೋಡಲ್ ಅ ಧಿಕಾರಿಗಳು ಹೊಂದಾಣಿಕೆಯಿಂದ ಸಾಮೂಹಿಕವಾಗಿ ಸೇವೆಸಲ್ಲಿಸುತ್ತಿದ್ದಾರೆ.
ಎಲ್ಲಾ ಇಲಾಖೆ ಅ ಧಿಕಾರಿಗಳು ಸಮನ್ವಯ ಸಾಧಿ ಸಿ ಯಾವ ಪ್ರದೇಶದಲ್ಲಿ ಸೋಂಕು ಕಾಣಿಸಿಕೊಳ್ಳುತ್ತದೆಯೋ ಅಲ್ಲಿ ಸ್ಯಾನಿಟೈಸ್ ಮಾಡಿಸುತ್ತಿದ್ದಾರೆ.ನಗರ ಪ್ರದೇಶದಲ್ಲಿ ಪೌರಾಯುಕ್ತರು, ಗ್ರಾಮಗಳಲ್ಲಿಪಿಡಿಒಗಳು ಹಗಲಿರುಳು ಶ್ರಮಿಸುತ್ತಿದ್ದಾರೆ.ಜನರು ಕೊರೊನಾ ಮಾರ್ಗಸೂಚಿಪಾಲಿಸಿ, ಮನೆಯಲ್ಲಿದ್ದರೇ ಜಿಲ್ಲೆಯಲ್ಲಿಸೋಂಕು ನಿಯಂತ್ರಣಕ್ಕೆ ಬರುತ್ತದೆ. ಎಲ್ಲಿಸೋಂಕಿತ ಪ್ರಕರಣ ಹೆಚ್ಚಾಗಿ ಕಂಡು ಬರುತ್ತದೆ. ಆ ಗ್ರಾಮಗಳಲ್ಲಿ ಸೋಂಕು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲಿಯೂಕಂಟೈನ್ಮೆಂಟ್ ವಲಯ ಮಾಡಿಲ್ಲ.
●
ಆರ್.ಲತಾ, ಜಿಲ್ಲಾಧಿ ಕಾರಿ,ಚಿಕ್ಕಬಳ್ಳಾಪುರ
ಎಂ.ಎ.ತಮೀಮ್ ಪಾಷ