ಉಪ್ಪುಂದ: ಕನ್ನಡವನ್ನು ಕಾಪಾಡಬೇಕು ಎನ್ನುವ 60 ಸಂವತ್ಸರ ಗಳ ಕೂಗು ಇನ್ನೂ ಇದೆ ಹೊರತು ಇದುವರೆಗೂ ಏಕೆ ಈಡೇರಿಲ್ಲ ಎನ್ನುವುದನ್ನು ಚರ್ಚಿಸಬೇಕಾಗಿದೆ. ಮೆಲ್ನೋಟಕ್ಕೆ ಎಲ್ಲವೂ ಇವೆ. ಆದರೆ ಸಾಹಿತ್ಯ ಬೆಳೆವಣಿಗೆ ಪೂರಕ ವಾತಾವರಣ ಈಗ ಇಲ್ಲ. ಪುಸ್ತಕ ಪ್ರೀತಿ ಕಡಿಮೆಯಾಗಿ ಮೊಬೈಲ್ ಪ್ರೀತಿ ಹೆಚ್ಚುತ್ತಿರುವುದು ಸಾಹಿತ್ಯ ಬೆಳವಣಿಗೆಗೆ ಆತಂಕಕಾರಿಯಾಗಿದೆ ಎಂದು ಹಿರಿಯ ಪತ್ರಕರ್ತ ಎ. ಈಶ್ವರಯ್ಯ ಹೇಳಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಕಂಬದಕೋಣೆ ಸ.ಪ.ಪೂ. ಕಾಲೇಜು ಆವರಣದಲ್ಲಿ ರವಿವಾರ ನಡೆದ ಉಡುಪಿ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನ ವರ್ಧಮಾನ-2018ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಭಾಷೆ ಉಳಿಯಬೇಕಾದರೆ ಹೊಸ ಪದಗಳ ಸೃಷ್ಟಿಯಾಗಬೇಕು, ಯುವ ಜನತೆಯಲ್ಲಿ ಭಾಷೆಯ ಮೇಲಿನ ಪ್ರೀತಿ ಮತ್ತು ಹೋರಾ ಡುವ ಕಿಚ್ಚು ಹೆಚ್ಚಾಗಬೇಕಿದೆ, ಸರಕಾರ ಕನ್ನಡದಲ್ಲಿ ಕಲಿತವರಿಗೆ ಉದ್ಯೋಗಾ ವಕಾಶದಂತಹ ಪ್ರೋತ್ಸಾಹ ಯೋಜನೆ ಗಳನ್ನು ರೂಪಿಸುವ ಅನಿವಾರ್ಯತೆ ಉಂಟಾಗಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸಮ್ಮೇಳನಾಧ್ಯಕ್ಷ ಡಾ| ಎಚ್. ಶಾಂತಾರಾಮ್, ವಿಶ್ರಾಂತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ, ಸಾಹಿತ್ಯ ಸಮ್ಮೇಳನದ ಕಾರ್ಯಾಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಕಂಬದಕೋಣೆ ಕಾಲೇಜು ಉಪಪ್ರಾಂಶುಪಾಲ ಉಮೇಶ ಎನ್. ರಾಯ್ಕರ್, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಗೋಕುಲ ಶೆಟ್ಟಿ, ಹಿರಿಯ ಸಹಕಾರಿ ಸಂತೋಷಕುಮಾರ ಶೆಟ್ಟಿ ಹಕ್ಲಾಡಿ, ತಾ.ಪಂ. ಸದಸ್ಯ ಜಗದೀಶ ದೇವಾಡಿಗ, ಉಡುಪಿ ಜಿಲ್ಲಾ ಗ್ರಂಥಾಲಯಾಧಿಕಾರಿ ನಳಿನಿ, ಉಡುಪಿ ಡಯಟ್ ಪ್ರಾಂಶುಪಾಲ ಚಂದ್ರಶೇಖರ, ಕೆರ್ಗಾಲು ಗ್ರಾ.ಪಂ.ಉಪಾಧ್ಯಕ್ಷ ಸುಂದರ ಕೊಠಾರಿ, ಉದ್ಯಮಿ ಕಂಬದಕೋಣೆ ಉದಯ ಕುಮಾರ ಶೆಟ್ಟಿ, ನಾಯ್ಕನಕಟ್ಟೆ ಹಾ.ಉ.ಸ.ಸಂಘ ಅಧ್ಯಕ್ಷ ರಮೇಶ ಪೈ ಉಪಸ್ಥಿತರಿದ್ದರು.
ಸಮ್ಮಾನ: ಜಿಲ್ಲೆಯ ವಿವಿಧ ಕ್ಷೇತ್ರಗಳ ಸಾಧಕರಾದ ಮುಲ್ಲಡ್ಕ ಗುರುಪ್ರಸಾದ ಸುಧಾಕರ ಶೆಟ್ಟಿ, ಎನ್. ಗುರುರಾಜ್ ಮಣಿಪಾಲ, ಗುರುವ ಕೊರಗ ಹಿರಿಯಡ್ಕ, ಕುಂದಾಪುರ ವೆಂಕಟೇಶ ಪೈ ಮುಂಬಯಿ, ಚಂದ್ರಾಕರ ಕಾಮತ್, ಯಾಕೂಬ್ ಖಾದರ್ ಗುಲ್ವಾಡಿ, ತಲ್ಲೂರು ಶಿವರಾಮ ಶೆಟ್ಟಿ, ಯು.ಎಸ್. ಶೆಣೈ, ಕುಂದಾಪುರ, ಸುಹೇಲ್ ಬಾಷಾ ಸಾಹೇಬ್, ಚಂದ್ರನಾಥ ಬಜಗೋಳಿ, ಮಂಜುನಾಥ ಮಧ್ಯಸ್ಥ, ಮ.ನಾ. ಹೆಬ್ಟಾರ್, ವಾಗೊjàತಿ ಶ್ರವಣ ದೋಷಪುಳ್ಳ ಮಕ್ಕಳ ವಸತಿ ಶಾಲೆ ಮೂಡುಬಗೆ ಇವರನ್ನು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್ ಸಮ್ಮಾನಿಸಿದರು.
ಡಾ| ಸುಧಾಕರ ದೇವಾಡಿಗ ಸ್ವಾಗತಿ ಸಿದರು. ಸುಬ್ರಹ್ಮಣ್ಯ ಜಿ. ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು. ಸುಬ್ರಹ್ಮಣ್ಯ ಬಾಸ್ರಿ ನಿರ್ವಹಿಸಿದರು. ಸುಧಾಕರ ಶೆಟ್ಟಿ ಸಮ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಸುಧಾಕರ ಶೆಣೈ ವಂದಿಸಿದರು.