Advertisement
ಹಗಲು ವೇಳೆ 32ಡಿಗ್ರಿಯಿಂದ 36 ಡಿಗ್ರಿ ತನಕ ಉಷ್ಣಾಂಶವಿದ್ದರೆ ರಾತ್ರಿ 26 ಡಿಗ್ರಿಯಷ್ಟು ಉಷ್ಣಾಂಶ ಕಂಡು ಬಂದಿದ್ದು, ಕಳೆದ ಕೆಲವು ದಿನಗ ಹಿಂದೆ ಬೀಸುತ್ತಿದ್ದ ತಂಗಾಳಿಯು ಮಾಯವಾಗಿ ಬಿಸಿಗಾಳಿ ಆವರಿಸಿದೆ. ಸ್ವಲ್ಪ ಮಟ್ಟಿನ ಮಳೆಯಾಗಿದ್ದರೆ ಈ ಬಿಸಿಲ ಧಗೆ ಸ್ವಲ್ಪ ದಿನಗಳ ಮಟ್ಟಗೆ ಮಾಯವಾಗುತ್ತಿತ್ತು ಕಳೆದ ಕೆಲವು ದಿನಗಳಿಂದ ಮೋಡ ಹಾಗೂ ಬಿಸಿಲು ಕಣ್ಣು ಮುಚ್ಚಾಲೆಯಾಡುತ್ತಿದ್ದು, ಜನರು ಮಳೆಗಾಗಿ ಹಾತೊರೆಯುತ್ತಿದ್ದಾರೆ. ಮೋಡ ಮುಸುಕಿದ ವಾತಾವರಣದಿಂದಾಗಿ ತಾಪಮಾನ ಏರಿಕೆಯಾಗುತ್ತಿದೆ.
ಗ್ರಾಮೀಣ ಭಾಗದ ಕೆರೆ ಬಾವಿಗಳು ಬತ್ತಿ ನೀರಿನ ಬರವನ್ನು ಕಾಣುತ್ತಿವೆ. ಮಾರ್ಚ್ ತಿಂಗಳ ಮೊದಲಲ್ಲೇ ಮದಗ ಕೆರೆಗಳು ಬಾಯೆ¤ರೆದು ನಿಂತಿವೆ. ತಾಲೂಕಿನ ವಿಸ್ತಾರವಾದ ಕೆರೆಗಳು, ಮದಗಗಳು ನೀರಿಲ್ಲದೇ ಬತ್ತಿಹೋಗಿವೆೆ. ತಾಲೂಕಿನ ಕೆಲವು ಕೆರೆಗಳು ಬತ್ತಿಹೋಗಿರುರುವುದರಿಂದ ಪರಿಸರದ ಬಾವಿಗಳಲ್ಲಿ ನೀರಿನ ಸೆಲೆಗಳು ಕಳೆದುಕೊಂಡು ಕುಡಿಯುವ ನೀರಿಗಾಗಿ ಹಪಹಪಿಸುವ ಕಾಲ ಒಂದಿದೆ. ಕೆರೆಗಳ ಅಂತರ್ಜಲ ಕುಸಿತ ಗೊಂಡಿರುವುದರಿಂದ ಭೂಮಿಯಲ್ಲಿ ತಂಪಿರದೇ ಇರುವುದರಿಂದ ಉಷ್ಣಾಂಶದಲ್ಲಿ ಏರಿಕೆಯಾಗುತ್ತಿದೆ. ತಾಲೂಕಿನ ಕೆಲವು ಭಾಗಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದ್ದು ಈ ಭಾಗಗಳಿಗೆ ಆಯಾ ಗ್ರಾ.ಪಂ.ನಿಂದ ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ತಾಲೂಕು ಆಡಳಿತ ವ್ಯವಸ್ಥೆ ಮಾಡಲಾಗುತ್ತಿದೆ. ಹಕ್ಲಾಡಿ ಗ್ರಾಮದ ತೊಪುÉ, ಬಗ್ವಾಡಿ, ಸೇನಾಪುರ, ಆಲೂರು, ಕರ್ಕುಂಜೆ ಗ್ರಾ.ಪಂ. ವ್ಯಾಪ್ತಿಯ ನೇರಳಕಟ್ಟೆ, ಗುಲ್ವಾಡಿ ಬಿಜೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕಳಿಹಿತ್ಲು , ಯಡ್ತರೆ ಗ್ರಾ.ಪಂ., ಬೆಳ್ವೆ ಗ್ರಾ.ಪಂ., ಕಾವ್ರಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಈಗಾಗಲೇ ಕುಡಿಯುವ ನೀರಿನ ಅಭಾವ ಕಂಡು ಬಂದಿದೆ. ಈ ಹಿಂದಿನ ಸಾಲಿನಲ್ಲಿ ತಾಲೂಕಿನ ಸುಮಾರು 31 ಗ್ರಾ.ಪಂ. ವ್ಯಾಪ್ತಿಯಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗಿತ್ತು.
Related Articles
Advertisement
ಬಹುಗ್ರಾಮ ಕುಡಿಯುವ ನೀರಿನ ಪ್ರಸ್ತಾವನೆ ಹಾಗೂ ಬೇಡಿಕೆಯನ್ನು ಈಗಾಗಲೇ ಇಲಾಖೆಗೆ ನೀಡಿದ್ದರೂ ಈ ತನಕ ಯಾವುದೇ ಫಲ ದೊರಕಿಲ್ಲ. ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ಟ್ಯಾಂಕ್‌ಗಳನ್ನು ಬಳಸಿಕೊಂಡು ಪೈಪ್‌ಲೈನ್‌ಗಳ ಮೂಲಕ ನೀರು ಸರಬರಾಜು ಮಾಡುವ ಯೋಜನೆಯನ್ನು ಸಿದ್ಧಪಡಿಸಿದ್ದಲ್ಲಿ ಮುಂದಿನ ವರ್ಷಕ್ಕಾದರೂ ಕುಡಿಯುವ ನೀರಿನ ಸಮಸ್ಯೆಯನ್ನು ತಡೆಯಬಹುದಾಗಿದೆ. ತಜ್ಞರ ಅಭಿಪ್ರಾಯಗಳನ್ನು ತೆಗೆದುಕೊಂಡು ನೀರಿನ ಸೆಲೆಯಿರುವ ಪ್ರದೇಶಗಳಿಂದ ನೀರು ಅಭಾವವಿರುವ ಪ್ರದೇಶಗಳಿಗೆ ಸರಬರಾಜು ಮಾಡುವ ಸಂಕಲ್ಪವನ್ನು ಮಾಡಬೇಕು.ಧಿಧಿ- ಕೆಂಚನೂರು ಸೋಮಶೇಖರ ಶೆಟ್ಟಿ, ಪ್ರಗತಿಪರ ಕೃಷಿಕ – ಉದಯ ಆಚಾರ್ ಸಾಸ್ತಾನ