Advertisement
ನಗರಸಭೆ ವ್ಯಾಪ್ತಿಯಲ್ಲಿ ಈ ಹಿಂದೆ ಪ್ಲಾಸ್ಟಿಕ್ ಬಳಕೆ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿತ್ತು. ಆದರೆ ಲಾಕ್‌ಡೌನ್ ಬಳಿಕ ನಗರದಲ್ಲಿ ಏಕಾಏಕಿಯಾಗಿ ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚಾಗಿದೆ. ಕೋವಿಡ್ ಸಂದರ್ಭ “ಯೂಸ್ ಆ್ಯಂಡ್ ತ್ರೋ’ ಸಾಮಗ್ರಿ ಬಳಕೆ ಮಾಡುವಂತೆ ಸಲಹೆ ನೀಡಲಾಗಿತ್ತು. ಆದರೆ ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್ ವಸ್ತುಗಳಲ್ಲೇ ಆಹಾರ ನೀಡುತ್ತಿರುವುದರಿಂದ ಪ್ಲಾಸ್ಟಿಕ್ ತ್ಯಾಜ್ಯ ಏರಿಕೆಯಾಗಿದೆ ಎನ್ನಲಾಗಿದೆ.
ಇತರ ತ್ಯಾಜ್ಯಗಳನ್ನು ತುಂಬಿ ರಸ್ತೆ ಬದಿ ಎಸೆಯುವವರಿದ್ದು ಇವರ ಮೇಲೂ ಕಣ್ಗಾವಲು ಇರಿಸಲಾಗಿದೆ. ತಿಂಗಳಿಗೆ 28.35 ಮೆ. ಟನ್ ಪ್ಲಾಸ್ಟಿಕ್ ನಗರಸಭೆ ವ್ಯಾಪ್ತಿಯಲ್ಲಿ ಆಗಸ್ಟ್‌ನಲ್ಲಿ ಸುಮಾರು 68.98 ಮೆಟ್ರಿಕ್ ಟನ್ ಒಣ ತ್ಯಾಜ್ಯ, 130 ಮೆಟ್ರಿಕ್ ಟನ್ ಹಸಿ ತ್ಯಾಜ್ಯ, 3 ಮೆಟ್ರಿಕ್ ಟನ್ ಸ್ಯಾನಿಟರಿ ತ್ಯಾಜ್ಯ, 120 ಮೆಟ್ರಿಕ್ ಟನ್ ಮಿಶ್ರ ಕಸ , 4.2 ಮೆಟ್ರಿಕ್ ಟನ್ ಗ್ಲಾಸ್ ಹಾಗೂ ಇ ವೇಸ್ಟ್ ಸೇರಿದಂತೆ ಇತರ ಒಟ್ಟು 370 ಮೆಟ್ರಿಕ್ ಟನ್ ಕಸ ಕೇವಲ 17 ವಾರ್ಡ್‌ಗಳಲ್ಲಿ ಉತ್ಪತ್ತಿಯಾಗಿದೆ. ಅದರಲ್ಲಿ 28.35 ಮೆಟ್ರಿಕ್ ಟನ್‌ನಷ್ಟು ಪ್ಲಾಸ್ಟಿಕ್ ತ್ಯಾಜ್ಯವಿದೆ. 1.76 ಲ.ರೂ. ದಂಡ !
2019ರ ಎಪ್ರಿಲ್‌ನಿಂದ 2020ರ ಮಾರ್ಚ್ ಅಂತ್ಯದ ವರೆಗೆ ಮರುಬಳಕೆಯಾಗದ 39.9 ಟನ್ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಿಮೆಂಟ್ ಕಾರ್ಖಾನೆಗೆ ರವಾನಿಸಲಾಗಿದೆ. ನಿಷೇಧಿತ ಪ್ಲಾಸ್ಟಿಕ್ ಬಳಕೆ ತಡೆಗೆ ರಾಷ್ಟ್ರೀಯ ಹಸುರು ಪೀಠವು 2019ರ ಆ.27ರಂದು ಆದೇಶ ಹೊರಡಿಸಿತ್ತು. ಇದರ ವಸ್ತುಗಳ ಮಾರಾಟ ಕಂಡುಬಂದರೆ ಮೊದಲ ಬಾರಿಗೆ 1,000 ರೂ., ಎರಡನೇ ಬಾರಿಗೆ 2,000 ರೂ. ದಂಡ ವಿಧಿಸಿ ನಿಷೇಧಿತ ಪ್ಲಾಸ್ಟಿಕ್‌ಗಳನ್ನು ವಶಪಡಿಸಿ ಉದ್ದಿಮೆ ಪರವಾನಿಗೆ ರದ್ದುಗೊಳಿಸುವ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ. ನಗರಸಭೆ ಅಧಿಕಾರಿಗಳು ಇಲ್ಲಿಯವರೆಗೆ ವಿವಿಧ ಅಂಗಡಿ ಮುಂಗಟ್ಟುಗಳಿಗೆ ದಾಳಿ ನಡೆಸಿ, ಪ್ಲಾಸ್ಟಿಕ್ ಬಳಕೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ, 1.76 ಲ.ರೂ. ದಂಡ ಸಂಗ್ರಹಿಸಿದ್ದಾರೆ.
Related Articles
ನಗರಸಭೆ ಪ್ಲಾಸ್ಟಿಕ್ ಬಳಕೆ ಯಿಂದಾಗುವ ತೊಂದರೆಗಳ ಕುರಿತು ಜನರಿಗೆ ವಿವಿಧ ರೀತಿಯಲ್ಲಿ ಅರಿವು ಮೂಡಿಸಲಾಗುತ್ತಿದೆ. ಇದರೊಂದಿಗೆ ಚಿಟಾ³ಡಿಯಲ್ಲಿ 855, ವಂಡಭಾಂಡೇಶ್ವರದಲ್ಲಿ 824 ಬಟ್ಟೆ ಚೀಲಗಳನ್ನು ವಿತರಿಸಲಾಗಿದೆ. ಅಧಿಕಾರಿಗಳು 244 ಅಂಗಡಿಗಳಿಗೆ ಭೇಟಿ ಅವರಲ್ಲಿ ಪ್ಲಾಸ್ಟಿಕ್ ಬಳಸದಂತೆ ಮನವಿ ಮಾಡಿದ್ದಾರೆ.
Advertisement
ದಿಢೀರ್ ಕಾರ್ಯಾಚರಣೆ ನಡೆಸಿ ದಂಡನಗರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ಮಾಡದಂತೆ ಎಚ್ಚರ ವಹಿಸಲಾಗುತ್ತಿದೆ. ಕಾಲಕಾಲಕ್ಕೆ ಅಂಗಡಿಗಳ ಮೇಲೆ ದಿಢೀರ್ ಕಾರ್ಯಾಚರಣೆ ನಡೆಸಿ ದಂಡ ವಿಧಿಸಲಾಗಿದೆ. ಅದರ ಹೊರತಾಗಿಯೂ ಮನೆಗಳಿಂದ ಬರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಪ್ರತ್ಯೇಕಿಸಿ ಅದನ್ನು ಸಿಮೆಂಟ್ ಫ್ಯಾಕ್ಟರಿಗೆ ಕಳಹಿಸಲಾಗುತ್ತಿದೆ.
-ಸ್ನೇಹ, ಪರಿಸರ ಎಂಜಿನಿಯರ್, ಉಡುಪಿ ನಗರಸಭೆ