ಪರಮಹಂಸ, ಶಾರದಾಮಾತೆ ಇವರ ಕೊಡುಗೆ ಅಪಾರವಾದುದು ಎಂದು ಹೊಸನಗರ ಮೂಲೆಗದ್ದೆ ಮಠ ಸದಾನಂದ ಶಿವಯೋಗ
ಆಶ್ರಮದ ಶ್ರೀಚನ್ನಬಸವ ಸ್ವಾಮೀಜಿ ಹೇಳಿದರು.
Advertisement
ಸಮೀಪದ ಅನುಪಿನಕಟ್ಟೆ ಶ್ರೀರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್‌ನ ಶ್ರೀರಾಮಕೃಷ್ಣ ಆಂಗ್ಲ ಮಾಧ್ಯಮ ಗುರುಕುಲ ವಸತಿ ವಿದ್ಯಾಲಯದಲ್ಲಿಹಮ್ಮಿಕೊಂಡಿದ್ದ ಶ್ರೀಸತ್ಯನಾರಾಯಣ ಪೂಜೆ, ಜನ್ಮದಾತರಿಗೆ ಪಾದಪೂಜೆ ಹಾಗೂ ಮಕ್ಕಳಿಂದ ರಂಗೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಭವ್ಯ ಭಾರತಕ್ಕೆ ಘನತೆ, ಗೌರವ ದೊರಕಿರುವುದು ಶ್ರೀಮಂತರು ಕೂಡಿಟ್ಟಿರುವ ಆಸ್ತಿಯಿಂದಲ್ಲ. ಬದಲಿಗೆ ಸ್ವಾಮಿ ವಿವೇಕಾನಂದ, ಬಸವಣ್ಣ, ರಾಮಕೃಷ್ಣ ಪರಮಹಂಸ, ಶಾರದಾಮಾತೆ ಮುಂತಾದ ಮಹಾತ್ಮರು ಹಾಕಿಕೊಟ್ಟ ಆದರ್ಶ ಸಿದ್ಧಾಂತಗಳಿಂದ ಎಂದರು. ಸುಶಿಕ್ಷಿತರ ಸಂಖ್ಯೆ ಹೆಚ್ಚಿದಷ್ಟು ದೇಶ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ದೇಶದ ಪ್ರತಿಯೊಬ್ಬ ನಾಗರಿಕರು ಶಿಕ್ಷಣ ಪಡೆಯಬೇಕು. ಮುಕ್ತವಾಗಿ ದೇಶದ ಅಭಿವೃದ್ಧಿ ಕೈಜೋಡಿಸಬೇಕೆಂದು ಹೇಳಿದರು.
ಕಾರಣಕ್ಕೂ ಅವರ ಮನಸ್ಸನ್ನು ನೋಯಿಸುವ ಕೆಲಸ ಮಾಡಬಾರದು. ತಂದೆ-ತಾಯಿಯನ್ನು ಗೌರವದಿಂದ ಕಂಡರೆ, ಮುಂದಿನ ಜೀವನ ಕೂಡ ಉತ್ತಮವಾಗಿರುತ್ತದೆ ಎಂದರು. ಶ್ರೀರಾಮಕೃಷ್ಣ ಗುರುಕುಲ ಶಾಲೆ ಮಕ್ಕಳಿಗೆ ಆದ್ಯಾತ್ಮದ ಮೂಲಕ ಅವಶ್ಯಕ ಬೋಧನ, ಬದುಕಿನ ಅನಿವಾರ್ಯತೆಗಳನ್ನು ಹೇಳಿಕೊಡುತ್ತಾ, ದೇಶದ ಸತ್ಪಜ್ರೆಗಳನ್ನು, ಭಾರತಾಂಭೆಯ ಹೆಮ್ಮೆಯ ಮಕ್ಕಳನ್ನು ರೂಪಿಸುತ್ತಿದೆ ಎಂದು ಶ್ಲಾಘಿಸಿದರು. ಟ್ರಸ್ಟ್ ಅಧ್ಯಕ್ಷ ಡಾ| ಡಿ.ಆರ್.ನಾಗೇಶ್ ಮಾತನಾಡಿದರು. ಇದೇ ಸಂದರ್ಭದಲ್ಲಿ ವಸತಿ ವಿದ್ಯಾಲಯದ 10ನೇ ತರಗತಿ ವಿದ್ಯಾರ್ಥಿನಿ
ಕುಮಾರಿ ಹರ್ಷಿತಾ ಅವರ ತೊದಲು ನುಡಿಯೊಳಗೆ ಚಿಗುರಿದ ಕವನ ಎಂಬ ಪುಸ್ತಕವನ್ನು ಶ್ರೀಗಳು ಲೋಕಾರ್ಪಣೆಗೊಳಿಸಿದರು. ಟ್ರಸ್ಟಿ
ಶೋಭಾ ವೆಂಕಟರಮಣ, ಡಿ.ಎಂ.ದೇವರಾಜ್ ಇದ್ದರು.