ಟಿ.ದಾಸರಹಳ್ಳಿ: ರಾಜಧಾನಿಯಲ್ಲಿ ಹಿಂದೆ ನೂರಾರು ಕೆರೆಗಳಿದ್ದವು.ನಗರೀಕರಣದ ಭರಾಟೆಯಲ್ಲಿ ಕೆರೆಗಳ ಸಂಖ್ಯೆ ಕ್ಷೀಣಿಸಿದೆ. ಸ್ವಂತಜಲಮೂಲಗಳಿಲ್ಲದ ನಗರವು ಕ್ಷಿಪ್ರಗತಿಯಲ್ಲಿ ಬೆಳಯುತ್ತಿದ್ದು,ನೀರಿನ ಬೇಡಿಕೆ ತೀವ್ರ ಗೊಂಡಿದೆ.
ಕಾವೇರಿಯಿಂದ ಪ್ರತಿದಿನ ನಗರಕ್ಕೆ 1500 ದಶಲಕ್ಷಲೀ. ನೀರು ಸರಬರಾಜಾಗುತ್ತಿದ್ದರೂ ಬೇಸಿಗೆ ಯಲ್ಲಿ ನೀರಿಗೆ ಹಾಹಾಕಾರ ತಪ್ಪಿಲ್ಲ.ಶೆಟ್ಟಿಹಳ್ಳಿ, ಮಲ್ಲಸಂದ್ರ, ಬಾಗಲಗುಂಟೆ, ಟಿ.ದಾಸರ ಹಳ್ಳಿ, ಚೊಕ್ಕಸಂದ್ರ,ಪೀಣ್ಯ ಕೈಗಾರಿಕಾ ಪ್ರದೇಶ, ರಾಜ ಗೋಪಾಲನಗರ ಹಾಗೂ ಹೆಗ್ಗನಹಳ್ಳಿವಾರ್ಡುಗಳನ್ನು ಒಳಗೊಂಡಿರುವ ದಾಸರಹಳ್ಳಿ ವಲಯದಲ್ಲಿ ಕಾವೇರಿಸಂಪರ್ಕವಿಲ್ಲದ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ.
ಬಿಬಿಎಂಪಿ 110 ಹಳ್ಳಿಗಳ ವ್ಯಾಪ್ತಿಯಲ್ಲಿನ ಚಿಕ್ಕ ಸಂದ್ರ, ಮೇದರಹಳ್ಳಿ,ಅಬ್ಬಿಗೆರೆ, ಸಿಡೇದಹಳ್ಳಿ ಹಾಗೂ ಶೆಟ್ಟಿಹಳ್ಳಿಯ ಕೆಲವು ಭಾಗಗಳಲ್ಲಿ ನೀರಿಗೆಹಾಹಾಕಾರ ಶುರುವಾಗಿದೆ. ಈ ಭಾಗದ ಜನತೆ ಕೊಳವೆಬಾವಿ ಹಾಗೂಟ್ಯಾಂಕರ್ ನೀರನ್ನು ಅವಲಂಬಿಸಿದ್ದಾರೆ. ಬೇಸಿಗೆ ಸಮಯದಲ್ಲಿ ಹಲವೆಡೆಕೊಳವೆಬಾವಿಗಳು ಬತ್ತಿ ಹೋಗಿದ್ದು, ಜನತೆ ಅನಿವಾರ್ಯವಾಗಿ ಟ್ಯಾಂಕರ್‌ನೀರನ್ನು ಅವಲಂಬಿಸಬೇಕಾಗಿದೆ.
ಇದರಿಂದ ನೀರಿನ ಟ್ಯಾಂಕರ್ ಬೆಲೆಯೂಏಕಾಏಕಿ ಗಗನಕ್ಕೇರಿದೆ. ಒಂದು ಟ್ಯಾಂಕರ್‌ಗೆ ಕಡಿಮೆ ಎಂದರೂ 700 ರಿಂದ900 ರೂ. ಕೊಟ್ಟು ನೀರನ್ನು ಖರೀದಿಸಬೇಕು ಎನ್ನುತ್ತಾರೆ ಚಿಕ್ಕಸಂದ್ರ ನಿವಾಸಿಮಂಜುಳಮ್ಮ. ಕೊರೊನಾ ಕಾರಣದಿಂದ ವರ್ಷ ದಿಂದ ಸರಿ ಯಾಗಿಕೆಲಸವಿಲ್ಲ. ಗಗನಕ್ಕೇರುತ್ತಿ ರುವ ಬೆಲೆ ಹೆಚ್ಚಳದಿಂದ ಪರದಾಡು ವಂತಾಗಿದೆ.ಈ ಮಧ್ಯೆ ಕೇಳಿ ದಷ್ಟು ಕಾಸು ಕೊಟ್ಟು ಟ್ಯಾಂಕರ್ ನೀರನ್ನು ಕೊಳ್ಳಬೇಕಾದ ಸ್ಥಿತಿಎದುರಾಗಿದೆ ಎಂದು ಮೇದರಹಳ್ಳಿ ನಿವಾಸಿ ಚಂದ್ರ ಶೇಖರ್ ತಿಳಿಸಿದರು.
ಟ್ಯಾಂಕರ್ ನೀರಿನ ಬೆಲೆ ನಿಗದಿಯಾಗಲಿ
ದುಬಾರಿ ಬೆಲೆ ಕೊಟ್ಟು ಟ್ಯಾಂಕರ್ ನೀರು ಖರೀದಿಸಿದರೂ ಗುಣಮಟ್ಟದ ಖಾತ್ರಿ ಇಲ್ಲ.ನಿಗದಿತ ಬೆಲೆಯಂತೂ ಮೊದಲೇ ಇಲ್ಲ. ಹೆಚ್ಚು ಪ್ರಶ್ನೆ ಮಾಡಿದರೆ ಅನಿವಾರ್ಯಸಂದರ್ಭಗಳಲ್ಲಿ ನೀರು ಸಿಗುವುದಿಲ್ಲ. ಇವತ್ತು ನೀರು ಬೇಕು ಎಂದು ಕರೆ ಮಾಡಿದರೆಒಂದು ದಿನ ಅಥವಾ ಎರಡು ದಿನ ಕಾಯಬೇಕಾಗುತ್ತದೆ.
ಹಾಗಾಗಿ ಕಾವೇರಿ ನೀರುಪೂರೈಕೆಯಾಗದ ಪ್ರದೇಶಗಳಲ್ಲಿ ಟ್ಯಾಂಕರ್ ಬೆಲೆಯನ್ನು ನಿಗದಿಪಡಿಸಬೇಕು. ಜತೆಗೆಗುಣಮಟ್ಟದ ನೀರು ಪೂರೈಸುವಂತೆ ಸಂಬಂಧಪಟ್ಟವರಿಗೆ ತಾಕೀತು ಮಾಡಬೇಕು ಎಂದುಸಿಡೇದಹಳ್ಳಿಯ ಗೃಹಿಣಿ ವನಜಾಕ್ಷಿ ಬಿಬಿಎಂಪಿ ಅ ಧಿಕಾರಿಗಳನ್ನು ಆಗ್ರಹಿಸಿದರು.