Advertisement
ಕೇವಲ ಒಂದೇ ವಾರದ ಅಂತರದಲ್ಲಿ ವಿದ್ಯುತ್ ಬೇಡಿಕೆ 10ರಿಂದ 15 ಮಿಲಿಯನ್ ಯೂನಿಟ್‌ನಷ್ಟು ಏರಿಕೆಯಾಗಿದ್ದು, ಇದು ದಾಖಲೆ ಪ್ರಮಾಣದ ವಿದ್ಯುತ್ ಬಳಕೆಯಾಗಿದೆ. ಈ ಮೂಲಕ ಮುಂಬರುವ ದಿನಗಳು ಇನ್ನಷ್ಟು ಭೀಕರ ಆಗಿರಲಿವೆ ಎಂಬ ಮುನ್ಸೂಚನೆ ಕಂಡು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಬೇಸಗೆ ನಿಭಾಯಿಸು ವುದು ಇಂಧನ ಇಲಾಖೆಗೆ ಸವಾಲಾಗಿದೆ.
Related Articles
Advertisement
ಬರದ ಮಧ್ಯೆಯೂ ಆಸರೆಯಾಗುತ್ತಿರುವ ಜಲಾಶಯಗಳು!: ಈ ನಡುವೆ ರಾಜ್ಯದ ಜಲಾ ಶಯಗಳೂ ಬರಿದಾಗಿವೆ. ಕೂಡ್ಲಿಗಿ ಉಷ್ಣ ವಿದ್ಯುತ್ ಸ್ಥಾವರ, ಯರಮರಸ್‌ನಿಂದ ಈಗಾಗಲೇ ಬರ ಬೇಕಿದ್ದ ವಿದ್ಯುತ್ ಇನ್ನೂ ಜಾಲಕ್ಕೆ ಸೇರ್ಪಡೆ ಯಾಗಿಲ್ಲ. ಇದರಿಂದ ಬೇಡಿಕೆ ನಿಭಾಯಿಸುವುದು ಮತ್ತಷ್ಟು ಸಮಸ್ಯೆಯಾಗಲಿದೆ. ಆದರೆ, ಮಳೆ ಕೈಕೊಟ್ಟಿದ್ದರಿಂದ ಜಲಾಶಯಗಳಲ್ಲಿ ನೀರಿನ ಲಭ್ಯತೆ ಕಡಿಮೆ ಇತ್ತು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬೇಸಗೆಗಾಗಿಯೇ ಜಲವಿದ್ಯುತ್ ಅನ್ನು ಮೀಸಲಿಡಲಾಗಿತ್ತು. ಜಲ ವಿದ್ಯುತ್‌ನಲ್ಲಿ ಸಿಂಹಪಾಲು ಹೊಂದಿರುವ ಶರಾವತಿ ವಿದ್ಯುದಾಗಾರದಿಂದ ನಿತ್ಯ 17 ಮಿ.ಯೂ. ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದ್ದು, ಶನಿ ವಾರಕ್ಕೆ ಲಿಂಗನಮಕ್ಕಿ ಜಲಾಶಯದ ನೀರಿನಮಟ್ಟ 1,777.50 ಅಡಿ ಇದೆ. ಇದೇ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸಿದರೂ ಇನ್ನೂ 75 ದಿನಗಳಿಗೆ ಸಾಕಾಗುತ್ತದೆ. ಅದೇ ರೀತಿ, ವರಾಹಿ, ಗೇರುಸೊಪ್ಪ, ಆಲಮಟ್ಟಿ, ಮುನಿರಾಬಾದ್, ಶಿವನಸಮುದ್ರ, ಸೂಪಾ, ಕೊಡಸಳ್ಳಿ, ಮಹಾತ್ಮಗಾಂಧಿ ವಿದ್ಯುತ್ ಘಟಕ, ಲಿಂಗನಮಕ್ಕಿ ಜಲ ವಿದ್ಯುತ್ ಉತ್ಪಾದನಾ ಘಟಕಗಳು ಸಹಿತ ಒಟ್ಟಾರೆ 40 ಮಿ.ಯೂ. ವಿದ್ಯುತ್ ಜಲ ಮೂಲದಿಂದ ದೊರೆಯುತ್ತಿದೆ ಎಂದು ಶರಾವತಿ ವಿದ್ಯುದಾಗಾರದ ಮೂಲಗಳು ತಿಳಿಸಿವೆ.
ವಿದ್ಯುತ್ ಬೇಡಿಕೆ ಹೆಚ್ಚಳವಾಗಿದ್ದು ನಿಜ. ಬೇಸಗೆಯಲ್ಲಿ ಉಂಟಾಗುವ ಈ ಬೇಡಿಕೆ ನಿರ್ವಹಣೆಗಾಗಿಯೇ ಮುಂದಾಲೋಚನೆಯಿಂದ ಜಲವಿದ್ಯುತ್ “ರಿಸರ್ವ್’ ಮಾಡಿಟ್ಟುಕೊಳ್ಳಲಾಗಿದೆ. ಒಂದೆರಡು ದಿನಗಳಲ್ಲಿ ಯರಮರಸ್ ಶಾಖೋತ್ಪನ್ನ ಘಟಕದಿಂದ 300 ಮೆ.ವಾ. ಬರಲಿದೆ. ಖಾಸಗಿ ಸೌರವಿದ್ಯುತ್ ಉತ್ಪಾದಕರಿಂದ 400ರಿಂದ 500 ಮೆ.ವಾ. ಹಾಗೂ ಅಲ್ಪಾವಧಿಗಾಗಿ 900 ಮೆ.ವಾ. ವಿದ್ಯುತ್ ಖರೀದಿಸಲಾಗುತ್ತಿದೆ. ಹಾಗಾಗಿ, ಸಮಸ್ಯೆ ಆಗದು ಎಂದು ಕೆಪಿಟಿಸಿಎಲ್ ನಿರ್ದೇಶಕ (ಪ್ರಸರಣ) ಎಚ್. ನಾಗೇಶ್ ವಿಶ್ವಾಸ ವ್ಯಕ್ತಪಡಿಸುತ್ತಾರೆ.
ವಿಜಯಕುಮಾರ್ ಚಂದರಗಿ