Advertisement

ಅಧಿಕಾರ-ಪ್ರಶಸ್ತಿಯಿಂದ ಜವಾಬ್ದಾರಿ ಹೆಚ್ಚಳ

12:48 PM Jan 05, 2022 | Team Udayavani |

ಶಹಾಬಾದ: ವ್ಯಕ್ತಿಗೆ ದೊರೆಯುವ ಅಧಿಕಾರ ಮತ್ತು ಪ್ರಶಸ್ತಿಗಳು ಆತನ ಜವಾಬ್ದಾರಿ ಹೆಚ್ಚಿಸುತ್ತವೆ ಎಂದು ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಜಿಲ್ಲಾ ಅಧ್ಯಕ್ಷ ಬಸವರಾಜ ಮದ್ರಿಕಿ ಹೇಳಿದರು.

Advertisement

ಹೊನ್ನಕಿರಣಗಿ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಕಲಬುರಗಿ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಗುರುಬಸಪ್ಪ ಸಜ್ಜನಶೆಟ್ಟಿ, ಸಂತಕವಿ ಶಿಶುನಾಳ ಷರೀಫ್‌ ಪ್ರಶಸ್ತಿ ಪುರಸ್ಕೃತ ದೇವು ಸಜ್ಜನ ಅವರಿಗೆ ತೋನಸನಹಳ್ಳಿ(ಎಸ್‌) ಗ್ರಾಮದ ಗೆಳೆಯರ ಬಳಗದ ವತಿಯಿಂದ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರಶಸ್ತಿಗಳು ಕರ್ತವ್ಯದಲ್ಲಿರುವ ಪ್ರತಿ ಹೆಜ್ಜೆಯಲ್ಲೂ ಎಚ್ಚರಿಸುತ್ತವೆ. ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿದರೆ ಪ್ರಶಸ್ತಿಗಳು ತಾನಾಗಿಯೇ ಹುಡುಕಿಕೊಂಡು ಬರುತ್ತವೆ ಎನ್ನುವುದಕ್ಕೆ ದೇವು ಸಜ್ಜನ್‌ ಅವರೇ ಸಾಕ್ಷಿ. ಅಲ್ಲದೇ ಕನ್ನಡ ಪರವಾದ ಸೇವೆ ಮಾಡುವ ಮೂಲಕ ಜಿಲ್ಲೆಯಲ್ಲಿ ಹೆಸರುವಾಸಿಯಾದ ಗುರುಬಸಪ್ಪ ಸಜ್ಜನಶೆಟ್ಟಿ ಕಸಾಪ ಕಲಬುರಗಿ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರ ಅಧಿಕಾರದ ಅವಯಲ್ಲಿ ಇನ್ನೂ ಕನ್ನಡ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಜಿಲ್ಲೆಯ ತುಂಬೆಲ್ಲಾ ಕನ್ನಡದ ವಾತಾವರಣವನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯೋನ್ಮುಖ ಆಗಬೇಕೆಂದು ಹೇಳಿದರು.

ತೋನಸನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಬೆಳ್ಳೆಪ್ಪಾ ಖಣದಾಳ, ಸಿದ್ಧು ಸಜ್ಜನ, ಹನಮಂತ ಸಾಲಿ, ಶಿವು ಮಾಲಕ ತರ್ನಳ್ಳಿ, ಶರಣು ಭಂಡಾರಿ, ಅಂಬರೀಶ್‌ ಕಲಬುರಗಿ, ಶಿವು ನಾಟಿಕಾರ, ಪಿಂಟುಗೌಡ ಸರಡಗಿ, ನಾಗು ಸಜ್ಜನಶೆಟ್ಟಿ ಹಾಗು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next