Advertisement

ಡಾ.ಅಂಬೇಡ್ಕರ್‌ ಸಮಗ್ರ ಸಂಪುಟಕ್ಕೆ ಹೆಚ್ಚಿದ ಬೇಡಿಕೆ

12:04 PM Mar 22, 2021 | Team Udayavani |

ಬೆಂಗಳೂರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿಸಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ “ಬರೆಹಗಳು ಮತ್ತು ಭಾಷಣಗಳು’ ಕುರಿತ ಸಮಗ್ರ ಸಂಪುಟಕ್ಕೆ ಸಾಹಿತ್ಯವಲಯದಿಂದ ಬೇಡಿಕೆ ಹೆಚ್ಚಿದೆ. ಆ ಹಿನ್ನೆಲೆಯಲ್ಲಿ ಅಂಬೇಡ್ಕರ್‌ “ಬರೆಹಗಳು ಮತ್ತು ಭಾಷಣಗಳು’ ಕುರಿತ 22 ಸಂಪುಟಗಳಮರು ಮುದ್ರಣಕ್ಕೆ ಕುವೆಂಪು ಭಾಷಾ ಭಾರತಿಪ್ರಾಧಿಕಾರ ಮುಂದಾಗಿದೆ. ಈಗಾಗಲೇ ಐದುಮುದ್ರಣಗಳನ್ನು ಕಂಡಿರುವ ಈ ಸಂಪುಟ ಆರನೇ ಮುದ್ರಣಕ್ಕೆ ಸಿದ್ಧವಾಗಿದೆ.

Advertisement

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹಲವು ರೀತಿಯ ಅನುವಾದಿತ ಪುಸ್ತಕಗಳನ್ನು ಪ್ರಕಟಿಸಿ ಮಾರಾಟ ಮಾಡುತ್ತಿದೆ.ಆದರೆಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಬರೆಹಗಳುಮತ್ತು ಭಾಷಣಗಳು ಸಂಪುಟಗಳಿಗೆ ಹೆಚ್ಚುಬೇಡಿಕೆಯಿದೆ. ಈಗಾಗಲೇ ಪ್ರಕಟವಾದ ಎಲ್ಲಾಪುಸ್ತಕಗಳು ಮಾರಾಟವಾಗಿದ್ದು, ಆ ಸಂಪುಟಗಳಿಗಾಗಿ ಓದುಗ ವಲಯದಿಂದ ಬೇಡಿಕೆಉಂಟಾಗಿದೆ. ಆ ಹಿನ್ನೆಲೆಯಲ್ಲಿ ಆರನೇ ಮುದ್ರಣಕ್ಕಾಗಿ ಎಲ್ಲಾ ರೀತಿಯ ಸಿದ್ಧತೆಗಳೂ ನಡೆದಿದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪುಸ್ತಕದ ಮರುಮುದ್ರಣದ ಕುರಿತ ಕಾಯಕ ಶುರುವಾಗಿದೆ. ಟೆಂಡರ್‌ ಪ್ರಕ್ರಿಯೆಗೂ ಚಾಲನೆನೀಡಲಾಗಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲ್ಲಿದ್ದು,ಶೀಘ್ರದಲ್ಲೆ ಮುದ್ರಣ ಕಾರ್ಯ ನಡೆಯಲಿದೆಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಅಧ್ಯಕ್ಷ ಅಜಕ್ಕಳ ಗಿರೀಶ್‌ ಭಟ್‌ ಹೇಳಿದ್ದಾರೆ.

ಒಂದೊಂದು ಸಂಪುಟ ಸುಮಾರು 800 ಪುಟಗಳನ್ನು ಒಳಗೊಳ್ಳಲಿದೆ. ಒಟ್ಟು 1ಸಾವಿರಪುಸ್ತಕಗಳ ಹೊರತರುವ ಆಲೋಚನೆ ಪ್ರಾಧಿಕಾರಕ್ಕಿದೆ ಎಂದು ತಿಳಿಸಿದ್ದಾರೆ.

ಸಂಪುಟಗಳಲ್ಲಿ ಯಾವೆಲ್ಲಾ ಅಂಶಗಳಿವೆ: ಸಮಗ್ರ ಸಂಪುಟಗಳಲ್ಲಿ ಹಲವು ಅನುಪಮವಿಷಯಗಳು ಅಡಕವಾಗಿದೆ. ಕೇಂದ್ರದಲ್ಲಿಕಾನೂನು ಸಚಿವರಾಗಿದ್ದಾಗ ಅಂಬೇಡ್ಕರ್‌ಅವರು ಸಂಸತ್‌ನಲ್ಲಿ ಮಾಡಿದ ಭಾಷಣಗಳು,ಸಂಸತ್‌ನಲ್ಲಿ ಅಂಬೇಡ್ಕರ್‌ ಅವರ ಮಾತಿಗೆ ವಿರೋಧ ಪಕ್ಷದ ಪ್ರತಿಕ್ರಿಯೆ, ಸಂವಿಧಾನ ಪರಿಚಯ, ಹಿಂದು ಕೋಡ್‌, ಗಾಂಧೀಜಿ ಉಪವಾಸ ಸತ್ಯಾಗ್ರ, ಭಾರತೀಯ ಆರ್ಥಿಕ ಸಮಸ್ಯೆ ಹೀಗೆ ಹಲವು ವಿಚಾರಗಳ ಬಗ್ಗೆ ಈಸಮಗ್ರ ಸಂಪುಟಗಳಲ್ಲಿ ಲೇಖನಗಳಿವೆ.ಜಾತಿ ವ್ಯವಸ್ಥೆಯ ಬಗ್ಗೆ ಅಂಬೇಡ್ಕರ್‌ ನಿಲವು, ಅಸ್ಪ್ರಶ್ಯರು ಎದುರಿಬೇಕಾದ ಆರ್ಥಿಕ ಸವಾಲುಗಳು, ಈಸ್ಟ್‌ ಇಂಡಿಯಾ ಕಂಪನಿ ಆಡಳಿತಸೇರಿದಂತೆ ಇನ್ನೂ ಅನೇಕ ರೀತಿಯ ಕುತೂಹಲ ಮೂಡಿಸುವಂತಹ ಅಂಶ ಈ ಸಂಪುಟದಲ್ಲಿದೆ

Advertisement

ವಿದ್ಯಾರ್ಥಿಗಳಿಗೆ ಅನುಕೂಲ :

ಡಾ.ಬಿ.ಆರ್‌.ಅಂಬೇಡ್ಕರ್‌ ಅವರ “ಬರೆಹಗಳು ಮತ್ತು ಭಾಷಣಗಳು’ ಕುರಿತ ಸಮಗ್ರ ಸಂಪುಟ ರಾಜಕೀಯ ಶಾಸ್ತ್ರದವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ. ಅಲ್ಲದೆ ಅಂಬೇಡ್ಕರ್‌ ಅವರ ಜೀವನ ಕ್ರಮ ಕುರಿತು ಅಧ್ಯಯನ ಮಾಡುವವಿದ್ಯಾರ್ಥಿಗಳಿಗೂ ಈ ಸಂಪುಟ ಮಾರ್ಗದರ್ಶನ ನೀಡಲಿದೆ. ಜತೆಗೆ ರಾಜಕೀಯ ನಾಯಕರಿಗೂ ಉಪಯುಕ್ತ ಮಾಹಿತಿಗಳನ್ನು ನೀಡಲಿದೆ ಎಂದು ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಈ ಸಮಗ್ರ ಸಂಪುಟ ಅಂಬೇಡ್ಕರ್‌ ಕುರಿತಐತಿಹಾಸಿಕ ಮಾಹಿತಿಗಳನ್ನು ನೀಡಲಿದೆ. ಸಂವಿಧಾನ ಕುರಿತ ಜ್ಞಾನ ಭಂಡರ ಇದರಲ್ಲಿ ಅಡಗಿದೆ. ಹೀಗಾಗಿ ಈ ಸಂಪುಟ ಆರನೇ ಮುದ್ರಣದತ್ತ ಹೆಜ್ಜೆಯಿರಿಸಿದೆ ಎಂದು ತಿಳಿಸಿದ್ದಾರೆ.

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ “ಬರೆಹಗಳು ಮತ್ತು ಭಾಷಣಗಳು’ ಕುರಿತ ಸಮಗ್ರ ಸಂಪುಟಗಳಿಗೆ ಸಾಹಿತ್ಯವಲಯದಿಂದ ಅಪಾರ ಬೇಡಿಕೆ ಉಂಟಾಗಿದೆ. ಆ ಹಿನ್ನೆಲೆಯಲ್ಲಿ ಸುಮಾರು 80ಲಕ್ಷ ರೂ. ಯೋಜನಾ ವೆಚ್ಚ ದಲ್ಲಿ ಸಂಪುಟಗಳ ಮರುಮುದ್ರಣಕ್ಕೆ ಪ್ರಾಧಿಕಾರ ಮುಂದಾಗಿದೆ. ಶೀಘ್ರದಲ್ಲೇ ಈ ಪ್ರಕ್ರಿಯೆ ನಡೆಯಲಿದೆ. -ಡಾ.ಅಜಕ್ಕಳ ಗಿರೀಶ್‌ ಭಟ್‌, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ

 

-ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next