Advertisement

ಸಾಮಾನ್ಯಕ್ಕಿಂತ 0.5 ಡಿಗ್ರಿ ತಾಪಮಾನ ಹೆಚ್ಚಳ

10:48 PM Apr 01, 2019 | Team Udayavani |

ನವದೆಹಲಿ: ಕರ್ನಾಟಕದ ಕರಾವಳಿ ಹಾಗೂ ಉತ್ತರ ಒಳನಾಡು ಭಾಗಗಳಲ್ಲಿ ಸಾಮಾನ್ಯಕ್ಕಿಂತ ತಾಪಮಾನ 0.5 ಡಿಗ್ರಿ ಹೆಚ್ಚಳ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏಪ್ರಿಲ್‌ ಮತ್ತು ಜೂನ್‌ ಮಧ್ಯೆ ಉತ್ತರ ಹಾಗೂ ಕೇಂದ್ರ ಭಾರತದಲ್ಲಿ ಹೆಚ್ಚಳವಾಗಲಿದ್ದು, ದೇಶದ ಉಳಿದ ಭಾಗಗಳಲ್ಲಿ ಸಾಮಾನ್ಯವಾಗಿರಲಿದೆ.

Advertisement

ಮೂಲ ಉಷ್ಣ ಅಲೆ ಸಾಗುವ ಭಾಗದಲ್ಲಿ ಈ ಹೆಚ್ಚಳ ಕಂಡುಬರಲಿದೆ. ಮಹಾರಾಷ್ಟ್ರದ ವಿದರ್ಭ ಮತ್ತು ಮರಾಠವಾಡ, ಆಂಧ್ರ ಪ್ರದೇಶದ ರಾಯಲಸೀಮೆ ಹಾಗೂ ತೆಲಗಾಣದಲ್ಲೂ ಉಷ್ಣತೆ ಹೆಚ್ಚಳ ಕಂಡುಬರಲಿದೆ. ಪೆಸಿಫಿಕ್‌ ಸಮುದ್ರದ ಭಾಗದಲ್ಲಿ ಕ್ಷೀಣ ಎಲ್‌ ನಿನೋ ಸ್ಥಿತಿ ಮುನ್ಸೂಚನೆಯಿದೆ ಎಂದೂ ಹವಾಮಾನ ಇಲಾಖೆ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next