Advertisement

ಬಾಡಿಗೆ ಹೆಚ್ಚಿಸಿ: ಮೋದಿ ಸಂಬಂಧಿಯ ಬೇಡಿಕೆ

07:31 PM Apr 22, 2020 | Team Udayavani |

ಹೊಸದಿಲ್ಲಿ: ಪ್ರಧಾನಿ ಮೋದಿ ಸಂಬಂಧಿ ತನ್ನ ಜಮೀನಿನಲ್ಲಿ ಸರಕಾರಿ ಕಟ್ಟಡದ ಬಾಡಿಗೆ ಹೆಚ್ಚಿಸದಿರುವುದರ ಬಗ್ಗೆ ಮಾಹಿತಿ ಕೇಳಿ ಸಲ್ಲಿಸಿದ RTI ಅರ್ಜಿಗೆ ಸೂಕ್ತ ಮಾಹಿತಿ ಲಭ್ಯವಾಗದ್ದರಿಂದ ಮಾಹಿತಿ ಆಯೋಗವನ್ನು ಸಂಪರ್ಕಿಸಿದ್ದಾರೆ. 90 ವರ್ಷದ ದಹಿಬೆನ್‌ ನರೋತ್ತಮದಾಸ್‌ ಮೋದಿ ಹೇಳುವಂತೆ, 1983ರಲ್ಲಿ 600 ರೂ. ಬಾಡಿಗೆಗಾಗಿ ಬೀಡಿ ಕಾರ್ಮಿಕರ ಕಲ್ಯಾಣ ನಿಧಿ ಕಚೇರಿ ಕಟ್ಟಡಕ್ಕೆ ನೀಡಲಾಗಿತ್ತು. 1998ರವರೆಗೂ ಬಾಡಿಗೆ ಏರಿಸಿ 1500 ರೂ. ನೀಡಲಾಗುತ್ತಿತ್ತು. ಆದರೆ ಅನಂತರ ಬಾಡಿಗೆ ಏರಿಕೆ ಮಾಡಲಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next