Advertisement

ಜಪಾನ್‌ ಜತೆ ರಕ್ಷಣೆ ಇನ್ನಷ್ಟು ವೃದ್ಧಿ

08:05 AM Sep 08, 2017 | Harsha Rao |

ನವದೆಹಲಿ/ಟೋಕಿಯೋ: ಡೋಕ್ಲಾಂನಲ್ಲಿ ಬಿಕ್ಕಟ್ಟು ಕುರಿತಂತೆ ಕ್ಸಿಯಾಮೆನ್‌ನಲ್ಲಿ ಪ್ರಧಾನಿ ಮೋದಿ- ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಜತೆಗೆ ಶಾಂತಿ ಮಂತ್ರ ಪಠಿಸಿದ್ದಾಗಿದೆ. ಇದೀಗ ಜಪಾನ್‌ ಜತೆ ಹೊಂದಿರುವ ರಕ್ಷಣಾ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಟೋಕಿಯೋದಲ್ಲಿ ಜಪಾನ್‌ ಪ್ರಧಾನಿ ಶಿಂಜೋ ಅಬೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಮಾನವ ರಹಿತ ಯುದ್ಧ ವಿಮಾನ ಮತ್ತು ರೋಬೋಟಿಕ್‌ ತಂತ್ರಜ್ಞಾನದ ಬಗ್ಗೆ ಎರಡೂ ದೇಶಗಳು ಹೊಂದಬೇಕಾದ ಸಹಭಾಗಿತ್ವದ ಬಗ್ಗೆ ಚರ್ಚಿಸಿದರು. ಏಕೆಂದರೆ ಈ ತಂತ್ರಜ್ಞಾನದಲ್ಲಿ ಚೀನಾ ಪಾರಮ್ಯ ಸಾಧಿಸಿದೆ. ಇದರ ಜತೆಗೆ ಸಬ್‌ಮೆರಿನ್‌ ವಿರೋಧಿ ತಂತ್ರಜ್ಞಾನ ಅಭಿವೃದ್ಧಿ ಮಾಡುವ ಬಗ್ಗೆಯೂ ಅಬೆ-ಜೇಟ್ಲಿ ಚರ್ಚಿಸಿದ್ದಾರೆ. ಈ ತಿಂಗಳಲ್ಲೇ ಅಬೆ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. 

Advertisement

ಎರಡು ಯುದ್ಧ ಸಂಭವ: ಇದೇ ವೇಳೆ ಮಹತ್ವದ ಬೆಳವಣಿಗೆಯಲ್ಲಿ ಚೀನಾ ಭಾರತದ ವಿರುದ್ಧ ಪ್ರಚೋದನೆ ಮುಂದುವರಿಸಿದರೆ ಉತ್ತರ ಭಾಗದಲ್ಲಿ ಚೀನಾ ಜತೆ ಮತ್ತು ಪಶ್ಚಿಮದಲ್ಲಿ ಚೀನಾ ಜತೆ ಯುದ್ಧವಾಗುವ ಸಾಧ್ಯತೆ ಇದೆ. ಹೀಗೆಂದು ಭೂಸೇನಾ ಮುಖ್ಯಸ್ಥ ಜ.ಬಿಪಿನ್‌ ರಾವತ್‌ ಹೇಳಿದ್ದಾರೆ. ಇದರಿಂದಾಗಿ ಇತ್ತೀಚಿನ ವರ್ಷಗಳಲ್ಲಿಯೇ ಕಠಿಣ ಎನ್ನಬಹುದಾದ ಪರಿಸ್ಥಿತಿ ಎದುರಿಸಬೇಕಾದಿತು ಎಂದು ಎಚ್ಚರಿಸಿದ್ದಾರೆ. 

ಆದರೆ ಪಶ್ಚಿಮದಲ್ಲಿ ಉಂಟಾಗುವ ಅಂದರೆ ಪಾಕಿಸ್ತಾನದ ವಿರುದ್ಧ ಉಂಟಾಗುವ ಯುದ್ಧ ದೀರ್ಘ‌ ಕಾಲದ ವರೆಗೆ ನಡೆಯಲಿದೆ. ಏಕೆಂದರೆ ಅದಕ್ಕೆ ಚೀನಾ ನೆರವಾಗಲಿದೆ ಎಂದು ಭೂಸೇನಾ ಮುಖ್ಯಸ್ಥರು ಹೇಳಿದ್ದಾರೆ. ಚೀನಾ ಜತೆಗೆ ಮುಕ್ತಾಯವಾದದ್ದು ಪಾಕ್‌ ಜತೆಗಿನ ಸಂಘರ್ಷದ ಜತೆ ಮುಂದುವರಿಯಲಿದೆ ಎಂದು ಎಚ್ಚರಿಸಿದ್ದಾರೆ ಅವರು. ಈ ಹಿಂದೆ ಕೂಡ ಭೂಸೇನಾ ಮುಖ್ಯಸ್ಥರು ಈ ಮಾತುಗಳನ್ನಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next