Advertisement

ನರೇಗಾ ಕೂಲಿ ಮೊತ್ತ 600ರೂಗೆ ಹೆಚ್ಚಿಸಿ

11:52 AM Jun 30, 2020 | mahesh |

ಹಗರಿಬೊಮ್ಮನಹಳ್ಳಿ: ತಾಲೂಕು ಗ್ರಾಕೂಸ್‌ ಸಂಘಟನೆ ಪದಾಧಿಕಾರಿಗಳು ನರೇಗಾ ಹಕ್ಕು ದಿನವಾದ ಇಂದು ತಾಲೂಕಿನ ಮಾಲವಿ, ಅಲಬೂರು, ಹಲಗಾಪುರ, ಬ್ಯಾಸಿಗಿದೇರಿ, ಮೋರಿಗೇರಿ ಸೇರಿ ವಿವಿಧ ಗ್ರಾಮಗಳ ಕೂಲಿಕಾರ್ಮಿಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಚೆ ಮೂಲಕ ಪ್ರಧಾನ ಮಂತ್ರಿಗೆ ಕಳುಹಿಸಿದರು.

Advertisement

ಗ್ರಾಕೂಸ್‌ ಸಂಘಟನೆ ತಾಲೂಕು ಸಂಚಾಲಕಿ ಕೊಟ್ರಮ್ಮ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ 200ದಿನಗಳ ಕಾಲ ಕೆಲಸ ನೀಡಬೇಕು. ಕೂಲಿ ಮೊತ್ತವನ್ನು 600ರೂಗೆ ಹೆಚ್ಚಿಸಬೇಕು. ಕಾಮಗಾರಿಗಳನ್ನು ವಾರ್ಡ್‌ ಸಭೆ ಗ್ರಾಮಸಭೆಗಳಲ್ಲಿ ನಿರ್ಧರಿಸಬೇಕು. ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು. ಈಗಾಗಲೇ ಹಲವಾರು ಗ್ರಾ.ಪಂ.ಗಳಲ್ಲಿ ಬದು ನಿರ್ಮಾಣ ಕಾಮಗಾರಿಯನ್ನು ಕಾರ್ಮಿಕರು ಮಾಡುತ್ತಿದ್ದು, ಮಹಿಳ ಕಾರ್ಮಿಕರಿಗೆ ಬದು ನಿರ್ಮಾಣದ ಕಾಮಗಾರಿಯನ್ನು ಸರಳಿಕರಣಗೊಳಿಸಬೇಕು. ಕೆಲ ಪ್ರದೇಶಗಳಲ್ಲಿ ಭೂಮಿ
ಗಟ್ಟಿ ಇದ್ದು ಬದು ನಿರ್ಮಾಣ ಕಾಮಗಾರಿ ಮಹಿಳಾ ಕೂಲಿ ಕಾರ್ಮಿಕರಿಗೆ ಕಷ್ಠಕರವಾಗಿದ್ದನ್ನು ಸರಕಾರ ಗಮನಹರಿಸಬೇಕು.

ಸ್ಥಳಿಯ ಜನರು ನಿರ್ಧರಿಸಿದ ಕಾಮಗಾರಿಗಳನ್ನು ಮಾತ್ರ ಕೈಗೆತ್ತುಕೊಳ್ಳಬೇಕು ಎಂದು ತಿಳಿಸಿದರು. ಸಂಘಟನೆಯ ಅಕ್ಕಮಹಾದೇವಿ, ಸುಜಾತ, ಕನಕಮ್ಮ, ಶರಣಪ್ಪ, ಮಹೇಶ, ವಿಠಲ, ಗಂಗಮಾಳಮ್ಮ, ವಿಶ್ವನಾಥ, ನಿಂಗಮ್ಮ, ಹನುಮಂತಗೌಡ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next