ಮುಂಬಯಿ: ಉಪನಗರ ಲೋಕಲ್ ರೈಲುಗಳಲ್ಲಿ ಸೀಮಿತ ಸಂಖ್ಯೆಯ ಪ್ರಯಾಣಿಕರಿಗೆ ಅವಕಾಶವಿ ರುವ ಹಿನ್ನೆಲೆ ಟಿಕೆಟ್ ರಹಿತ, ಅನಧಿಕೃತ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿದೆ. ಇಂಥ ಅನಧಿಕೃತ ಪ್ರಯಾಣಿಕ ರನ್ನು ಪತ್ತೆಹಚ್ಚಲು ರೈಲ್ವೇ ಕಣ್ಗಾವಲು ಹೆಚ್ಚಿಸಿದ್ದು, ಟಿಕೆಟ್ ರಹಿತ ಪ್ರಯಾ ಣಿಕರಲ್ಲಿ ತೀವ್ರ ಏರಿಕೆ ಕಂಡುಬಂದಿದೆ. 2020ರ ಜುಲೈ ಮತ್ತು 2021ರ ಜ. 5ರ ನಡುವೆ ಲೋಕಲ್ ರೈಲುಗಳಲ್ಲಿ ಪ್ರಯಾಣಿಸಲು ಯತ್ನಿಸಿರುವ 77,500 ಅನಧಿಕೃತ ಪ್ರಯಾಣಿಕರ ವಿರುದ್ಧ ಮಧ್ಯ ರೈಲ್ವೇ ಕ್ರಮ ಕೈಗೊಂಡಿದೆ. ಲಾಕ್‌ಡೌನ್‌ಗೆ ಮುಂಚಿತವಾಗಿ 2020ರ ಮಾರ್ಚ್‌ನಲ್ಲಿ ದೈನಂದಿನ ಸುಮಾರು 4.5 ಮಿಲಿಯನ್ ಪ್ರಯಾ ಣಿಕರ ಪೈಕಿ ಟಿಕೆಟ್ ರಹಿತ ಪ್ರಯಾಣಿಕರ ಸಂಖ್ಯೆಯು 1,000ದಷ್ಟಿತ್ತು.
ಇದೀಗ ದೈನಂದಿನ ಪ್ರಯಾಣಿಕರ ಸಂಖ್ಯೆ 8,00,000ಕ್ಕೆ ಸೀಮಿತಗೊಳಿಸಿರುವಾಗ ಅನಧಿಕೃತ ಪ್ರಯಾಣಿಕರ ಸಂಖ್ಯೆ 1,500ಕ್ಕೆ ಏರಿಕೆಯಾಗಿದೆ. 2020ರ ಜುಲೈ ಮತ್ತು 2021ರ ಜ. 5ರ ನಡುವೆ ಟಿಕೆಟ್ ರಹಿತ ಪ್ರಯಾಣಿಕರಿಂದ 1.67 ಕೋಟಿ ರೂ.ಗಳ ದಂಡವನ್ನು ವಸೂಲಿ ಮಾಡಲಾಗಿದೆ. ಲಾಕ್‌ಡೌನ್ ಸಡಿಲ ಬಳಿಕ ಲೋಕಲ್ ರೈಲುಗಳಲ್ಲಿ ಅಗತ್ಯ ಸೇವಾ ಸಿಬಂದಿ, ವಿಶೇಷ ಚೇತನರು, ಕ್ಯಾನ್ಸರ್ ರೋಗಿಗಳಿಗೆ ಜು. 15ರಿಂದ ರೈಲು ಸೇವೆಗಳು ಪುನರಾರಂಭಗೊಂಡವು. ಮಹಿಳಾ ಮತ್ತು ವಕೀಲರಿಗೆ ಕೂಡ ನಿಗದಿತ ಸಮಯದಲ್ಲಿ ಪ್ರಯಾಣಿ ಸಲು ಅವಕಾಶವನ್ನು ನೀಡಲಾಗಿದೆ.
ಇದನ್ನೂ ಓದಿ:ಇಂಡೊನೇಷ್ಯಾ : ಟೇಕಾಫ್ ಆದ ಕೆಲಸಮಯದಲ್ಲೇ 62 ಪ್ರಯಾಣಿಕರನ್ನು ಹೊತ್ತ ವಿಮಾನ ನಾಪತ್ತೆ
ಆದಾಗ್ಯೂ ಅನಧಿಕೃತ ಪ್ರಯಾಣಿಕರ ಸಂಖ್ಯೆ ಇನ್ನೂ ದೊಡ್ಡದಾಗಿದ್ದು, ಇದೀಗ ಅಂಥ ಪ್ರಯಾಣಿಕರ ಸಂಖ್ಯೆ ಒಟ್ಟು ಪ್ರಯಾಣಿಕರಲ್ಲಿ ಶೇ. 30-40 ರಷ್ಟಿದೆ ಎಂದು ರೈಲ್ವೇ ಅಧಿಕಾರಿ ಗಳು ಹೇಳಿದ್ದಾರೆ. ವಲಯ ರೈಲ್ವೇಯು ಪ್ರಯಾಣಿಕರ ತಪಾಸಣೆಯನ್ನು ಹೆಚ್ಚಿಸಿದ್ದು, ಅನಿರೀಕ್ಷಿತ ಟಿಕೆಟ್ ಪರಿಶೀಲನೆಗಳನ್ನು ನಡೆಸುತ್ತಿದೆ.
ಜನವರಿಯಲ್ಲಿ ಮಧ್ಯ ರೈಲ್ವೇ ದೈನಂದಿನ 1,500 ಟಿಕೆಟ್ ರಹಿತ ಪ್ರಯಾಣದ ಪ್ರಕರಣಗಳನ್ನು ದಾಖಲಿಸಿದೆ. ನವೆಂಬರ್‌ನಿಂದ ಅನಧಿಕೃತ ಪ್ರಯಾಣದಲ್ಲಿ ಹೆಚ್ಚಳ ಕಂಡುಬಂದಿದೆ. ಸಾಮಾನ್ಯ ಜನರಿಗೆ ಲೋಕಲ್ ರೈಲುಗಳಲ್ಲಿ ಪ್ರಯಾಣಿಸಲು ರಾಜ್ಯ ಸರಕಾರವು ಅನುಮತಿ ನೀಡದ ಕಾರಣ ಜನರು ಬುಕಿಂಗ್ ಕಚೇರಿಯಲ್ಲಿ ಟಿಕೆಟ್ ನಿರಾಕರಿಸಿದ ಬಳಿಕವೂ ರೈಲಿನಲ್ಲಿ ಪ್ರಯಾಣಿಸುತ್ತಿರುವುದು ಕಂಡು ಬಂದಿದೆ. ಎಲ್ಲ ಉಪನಗರ ರೈಲ್ವೇ ತಪಾ ಸಣೆ ಹೆಚ್ಚಿಸಲಾಗಿದೆ ಎಂದು ಮಧ್ಯ ರೈಲ್ವೇ ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.