Advertisement

ಚಂದ್ರಂಪಳ್ಳಿ ಜಲಾಶಯದ ಒಳಹರಿವು ಹೆಚ್ಚಳ

01:16 PM Jul 24, 2022 | Team Udayavani |

ಚಿಂಚೋಳಿ: ತಾಲೂಕಿನ ಚಂದ್ರಂಪಳ್ಳಿ ಜಲಾಶಯ ಅಚ್ಚುಕಟ್ಟು ಪ್ರದೇಶದಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವುದರಿಂದ ಜಲಾಶಯದಲ್ಲಿ ನಿರಂತರವಾಗಿ ಒಳ ಹರಿವು ಹೆಚ್ಚುತ್ತಿದೆ. ಜಲಾಶಯವು ಯಾವುದೇ ಕ್ಷಣದಲ್ಲಿ ಭರ್ತಿಯಾಗುವುದರಿಂದ ಜಲಾಶಯದ ಗರಿಷ್ಠ ಮಟ್ಟದ ನಂತರ ಹೆಚ್ಚಿನ ನೀರನ್ನು ಗೇಟಿನ ಮೂಲಕ ಹರಿದು ಬಿಡಲಾಗುವುದು. ನದಿ ಪಾತ್ರದ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕೆಂದು ಎಇಇ ಚೇತನ ಕಳಸ್ಕರ ತಿಳಿಸಿದ್ದಾರೆ.

Advertisement

ಚಂದ್ರಂಪಳ್ಳಿ ಜಲಾಶಯದ ಕೆಳಭಾಗದ ಐನೋಳಿ, ಫತ್ತೇಪುರ, ಚಿಂಚೋಳಿ ಗ್ರಾಮಸ್ಥರು ರೈತರು, ಮಹಿಳೆಯರು ನದಿಯತ್ತ ಹೋಗಬಾರದು. ಮಹಿಳೆಯರು ಬಟ್ಟೆ ಒಗೆಯಲಿಕ್ಕೆ ಹೋಗಬಾರದು. ದನಕರುಗಳಿಗೆ ನೀರು ಕುಡಿಸುವುದಕ್ಕಾಗಿ ಯಾವುದೇ ಕಾರಣಕ್ಕೂ ನದಿಗೆ ಇಳಿಯಬಾರದು ಎಂದು ಚಂದ್ರಂಪಳ್ಳಿ ಜಲಾಶಯ ಎಇಇ ಚೇತನ ಕಳಸ್ಕರ ಎಚ್ಚರಿಕೆ ನೀಡಿ ಮನವಿ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next