Advertisement

ಉದ್ದಿನ ಬೇಳೆಗೆ ಬೇಡಿಕೆ ಹೆಚ್ಚಳ: ಪ್ರತಿಕೂಲ ನೀತಿ ಜಾರಿಗೆ ಆಗ್ರಹ

11:39 PM Jun 01, 2019 | mahesh |

ಭಾರತದಲ್ಲಿ ಉದ್ದಿನ ಬೇಳೆಗೆ ಬೇಡಿಕೆ ಹೆಚ್ಚುತ್ತಿರುವ ಕಾರಣ ಇದಕ್ಕೆ ಪ್ರತಿಕೂಲ ನೀತಿಗಳು ಜಾರಿಯಾಗಬೇಕು ಎಂಬ ಆಗ್ರಹ ಎಲ್ಲೆಡೆ ಕೇಳಿಬರುತ್ತಿದೆ. ಭಾರತದ ಆಹಾರ ಪದ್ದತಿಯಲ್ಲಿ ಉದ್ದಿನಬೇಳೆಗೆ ಅತೀ ಹೆಚ್ಚು ಪ್ರಾಮುಖ್ಯತೆಯಿದೆ. ಭಾರತ‌ ಸೇರಿದಂತೆ ಮ್ಯಾನ್ಮಾರ್‌ ಥಾಯ್ಲೆಂಡ್‌, ಸಿಂಗಾಪುರ, ಶ್ರೀಲಂಕಾ ಮತ್ತು ಪಾಕಿಸ್ಥಾನದಲ್ಲೂ ಉದ್ದಿನ ಬೇಳೆಯನ್ನು ಬೆಳೆಯುತ್ತಾರೆ. ಈ ಪದಾರ್ಥದ ಪ್ರಪಂಚದ ಉತ್ವಾದನೆಯಲ್ಲಿ ಭಾರತ ಶೇ. 70 ರಷ್ಟು ಕೊಡುಗೆ ನೀಡಿದೆ. ನಮ್ಮಲ್ಲಿ 3.24 ಹೆಕ್ಟರ್‌ ಭೂಮಿಯಲ್ಲಿ ಉದ್ದಿನ ಬೇಳೆ ಬೆಳೆಯಲಾಗುತ್ತದೆ. 2010-11ರಲ್ಲಿ ಖಾರಿಫ್ ಋತುವಿನಲ್ಲಿ 1.4 ಮಿಲಿಯನ್‌ ಟನ್‌ ಉತ್ವಾದನೆಯಾದರೆ, ರಾಬಿ ಋತುವಿನಲ್ಲಿ 0.42 ಮಿಲಿಯನ್‌ ಟನ್‌ ಬೆಳೆಯಲಾಗಿತ್ತು. ಒಟ್ಟಾರೆ ಈ ಅವಧಿಯಲ್ಲಿ ಭಾರತ ಬೆಳೆದ ಒಟ್ಟು ಉದ್ದಿನ ಬೇಳೆ 1.42 ಮಿಲಿಯನ್‌ ಟನ್‌ .

Advertisement

ಉದ್ದಿನ ಬೇಳೆ ಬೆಳೆಯುವ ಪ್ರಮುಖ ರಾಜ್ಯಗಳು ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ತಮಿಳುನಾಡು, ಬಿಹಾರ, ಉತ್ತರ ಪ್ರದೇಶ. ಉತ್ತರಖಂಡ ಮತ್ತು ಪಶ್ಚಿಮ ಬಂಗಾಲ. ಬಿಹಾರ ಅತಿ ಹೆಚ್ಚು ಉದ್ದಿನಬೇಳೆ ಬೆಳೆಯುವ ರಾಜ್ಯವಾಗಿದೆ. ಅನಂತರದ ಸ್ಥಾನಗಳಲ್ಲಿ ಉತ್ತರಕಾಂಡ ಮತ್ತು ಪಶ್ಚಿಮ ಬಂಗಾಲ ರಾಜ್ಯಗಳಿವೆ. ಮುಂಬಯಿ, ಜಾಲ್‌ಗಾನ್‌, ದಿಲ್ಲಿ, ಗುಂಟೂರು, ಚೆನ್ನೈ, ಅಂಕೋಲಾ ಮತ್ತು ಗುಲ್ಬರ್ಗದಲ್ಲಿ ಉದ್ದಿನ ಪ್ರಮುಖ ವ್ಯಾಪಾರ ಕೇಂದ್ರಗಳಿವೆ. ಪ್ರಸಕ್ತ ಬಜೆಟ್‌ನಲ್ಲಿ ಕೇಂದ್ರ ಸರಕಾರ ಉದ್ದಿನಬೇಳೆಗೆ 300 ಕೋಟಿ ರೂ. ಬಜೆಟ್‌ನ್ನು ಮೀಸಲಿರಿದೆ. ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್‌ಗೆ 3,300 ರೂ. ಘೋಷಣೆ ಮಾಡಲಾಗಿದೆ. ದೇಶೀಯವಾಗಿಯೂ ಮತ್ತು ರಫ್ತುಗೂ ಎರಡಕ್ಕೂ ಬೇಡಿಕೆ ಇರುವುದರಿಂದ ಪೂರೈಕೆಯೂ ಹೆಚ್ಚಳವಾಗುತ್ತಿದೆ. ಈ ನಿಟ್ಟಿನಲ್ಲಿ ಈ ಬೆಳೆಗೆ ಪ್ರತಿಕೂಲ ನೀತಿಯನ್ನು ಜಾರಿಗೊಳಿಸಬೇಕೆಂಬ ಕೂಗು ಸದ್ಯ ಕೇಳಿಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next