Advertisement
ಹೌದು ಎನ್ನುತ್ತಿದೆ ಪೊಲೀಸ್ ಇಲಾಖೆಯ ಅಂಕಿ ಅಂಶಗಳ ಮಾಹಿತಿ!. ಕಳೆದ 3 ವರ್ಷಗಳ ಆಗಸ್ಟ್‌ವರೆಗಿನ ಅಪಘಾತ ಪ್ರಮಾಣ ಪರಿಶೀಲಿಸಿದರೆ ಬೆಂಗಳೂರು ನಗರ ಹಾಗೂ ರಾಜಧಾನಿಗೆ ಹೊಂದಿಕೊಂಡಿರುವ ಬೆಂ. ಗ್ರಾಮಾಂತರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳ ವ್ಯಾಪ್ತಿಯಲ್ಲೇ ಹೆಚ್ಚು ರಸ್ತೆ ಅಪಘಾತ ಸಂಭವಿಸಿವೆ. ಇಡೀ ರಾಜ್ಯದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಪೈಕಿ ಈ 4 ಜಿಲ್ಲೆಗಳಲ್ಲೇ ಶೇ.25ರಷ್ಟು ಮಂದಿ ಸಾವಿಗೀಡಾಗಿದ್ದಾರೆ.
ಬೆಂಗಳೂರು ನಗರ, ರಾಜಧಾನಿಗೆ ಹೊಂದಿಕೊಂಡ 3 ಜಿಲ್ಲೆಗಳಲ್ಲಿ ಕಳೆದ 3 ವರ್ಷದ ಅವಧಿಯ ಆಗಸ್ಟ್ ಅಂತ್ಯಕ್ಕೆ ರಸ್ತೆ ಅವಘಡದಲ್ಲಿ 5,335 ಮಂದಿ ಸಾವಿಗೀಡಾಗಿದ್ದರೆ, ಇಡೀ ರಾಜ್ಯದಲ್ಲಿ ಈ ಅವಧಿಗೆ 23,738 ಮಂದಿ ಮೃತಪಟ್ಟಿದ್ದಾರೆ. ಈ ಭಾಗದಲ್ಲಿ ಹೆಚ್ಚಿನ ವಾಹನ ದಟ್ಟಣೆಯೇ ಅಪಘಾತ ಹೆಚ್ಚಳಕ್ಕೆ ಕಾರಣ ಎನ್ನಲಾಗುತ್ತಿದೆ. ಕಮಿಷನರೇಟ್‌ಗಳಲ್ಲಿ ಅಪಘಾತ ಹೆಚ್ಚು:
ರಾಜ್ಯದಲ್ಲಿ ಬೆಂಗಳೂರು ನಗರ ಸೇರಿ 6 ಪೊಲೀಸ್ ಕಮಿಷನ ರೇಟ್‌ಗಳಿವೆ. ಕಳೆದ 3 ವರ್ಷಗಳಲ್ಲಿ ಹುಬ್ಬಳ್ಳಿ ಮತ್ತು ಕಲಬುರಗಿ ಕಮಿಷನರೇಟ್ ಹೊರತುಪಡಿಸಿದರೆ ಬೆಂಗಳೂರು ನಗರ, ಮೈಸೂರು ನಗರ, ಹುಬ್ಬಳ್ಳಿ ಧಾರವಾಡ, ಬೆಳಗಾವಿ ವ್ಯಾಪ್ತಿಯಲ್ಲಿ ಅಪಘಾತ ಪ್ರಮಾಣ ಈ ಹಿಂದಿನ ಸಾಲಿಗಿಂತ ಈ ಬಾರಿ ಹೆಚ್ಚಾಗಿದೆ. ರಾಜ್ಯದ 32 ಪೊಲೀಸ್ ವಿಭಾಗಗಳ ಪೈಕಿ (ರೈಲ್ವೆ, ಕೆಜಿಎಫ್) ಸೇರಿ 15ರಲ್ಲಿ ಅಪಘಾತ ಪ್ರಮಾಣ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಹೆಚ್ಚಾಗಿದೆ. ಉಳಿದಂತೆ 17 ವಿಭಾಗಗಳಲ್ಲಿ ರಸ್ತೆ ಅಪಘಾತದಲ್ಲಿ ಮೃತರ ಪ್ರಮಾಣ ಕಡಿಮೆಯಾಗಿದೆ.
Related Articles
ಪ್ರಸಕ್ತ ವರ್ಷದ ಆಗಸ್ಟ್ ವರೆಗೆ ಅತಿ ಹೆಚ್ಚು ರಸ್ತೆ ಅಪಘಾತ ಸಂಭವಿಸಿದ ವಿಭಾಗಗಳ ಈ ವಿವರ ಇಂತಿದೆ. ಬೆಂಗಳೂರು ನಗರ 564, ತುಮಕೂರು 470, ಬೆಂಗಳೂರು ಗ್ರಾಮಾಂತರ . 454, ಬೆಳಗಾವಿ 450, ಮಂಡ್ಯ 340 ರಸ್ತೆ ಅಪಘಾತಗಳು ಸಂಭವಿಸಿವೆ.
Advertisement
ರಾಜ್ಯದಲ್ಲಿ ತಗ್ಗಿದ ಅಪಘಾತ ಮರಣ ಸಂಖ್ಯೆರಾಜ್ಯದಲ್ಲಿ ರಸ್ತೆ ಅಪಘಾತದಲ್ಲಿ ಸಾವಿಗೀಡಾಗು ವವರ ಸಂಖ್ಯೆ ಕಳೆದ 3 ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ ಕಡಿಮೆಯಾಗಿದೆ. 2022ರಲ್ಲಿ ಆಗಸ್ಟ್‌ವರೆಗೆ 7,996 ಮಂದಿ, 2023ರಲ್ಲಿ ಈ ಸಂಖ್ಯೆ 8,146 ಇತ್ತು. ಈ ವರ್ಷದ ಆಗಸ್ಟ್ ಅಂತ್ಯಕ್ಕೆ 7,596 ಮಂದಿ ಮೃತಪಟ್ಟಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 550 ಸಾವಿನ ಪ್ರಮಾಣ ಕಡಿಮೆಯಾಗಿದೆ.
-ಅಲೋಕ್‌ಕುಮಾರ್, ಎಡಿಜಿಪಿ ರಸ್ತೆ ಸುರಕ್ಷತೆ ಮತ್ತು ಸಂಚಾರ -ಸು.ನಾ.ನಂದಕುಮಾರ್