Advertisement
ತಾಲೂಕನ ಕಳಲೆ ಗ್ರಾಮದಲ್ಲಿ ಕಳಲೆ ಶಕ್ತಿ ಕೇಂದ್ರದ ಪಕ್ಷದ ವಿಸ್ತಾರಕ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ 1902 ಕಾರ್ಯಕರ್ತರು ಭಾಗಿಯಾಗಿ 234 ಬೂತ್‌ನಲ್ಲಿ ಕೆಲಸ ಮಾಡಿದ್ದಾರೆ ಎಂದರು.
Related Articles
Advertisement
ಜನರ ಸಮಸ್ಯೆ ಅರಿಯಿರಿ:ತಾಲೂಕು ವಿಸ್ತಾರಕ ಕಾರ್ಯಕ್ರಮದ ಉಸ್ತುವಾರಿ, ರಾಜ್ಯ ಸ್ಲಂ ಮೋರ್ಚಾ ಉಪಾಧ್ಯಕ್ಷ ಕೌಟಿಲ್ಯ ರಘು ಮಾತನಾಡಿ, ಈ ಕಾರ್ಯಕ್ರಮದಿಂದ ಜನರ ಹತ್ತಿರ ಹೋಗಲಿಕ್ಕೆ ಸಾಧ್ಯವಾಗಿದೆ. ಇದರಿಂದ ಸಮುದಾಯ, ವಿವಿಧ ವರ್ಗಗಳ ಸಮಸ್ಯೆ ಅರಿಯಲು ಸಹಕಾರಿಯಾಗಿದೆ. ಅಲ್ಲದೇ ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆಗೆ ಪರಿಣಾಮಕಾರಿ ಪ್ರಣಾಳಿಕೆ ತಯಾರಿಸಿ ಬಿ.ಎಸ್. ಯಡಿಯೂರಪ್ಪಅವರನ್ನು ಮುಖ್ಯಮಂತ್ರಿ ಮಾಡಲು ಅನುಕೂಲವಾಗುತ್ತದೆ ಎಂದರು.
ಯುವಕರು, ಮಹಿಳೆಯರು ಮೊಬೈಲ್ ಮೂಲಕ ಪಕ್ಷದ ಸದಸ್ಯರಾಗುತ್ತಿದ್ದಾರೆ. ಕಳೆದ ಉಪಚುನಾವಣೆಯಲ್ಲಿ ನಡೆದ ಕಾಂಗ್ರೆಸ್‌ನ ಪಿತೂರಿಯು ಮುಂದಿನ ಚುನಾವಣೆಯಲ್ಲಿ ನಡೆಯುವುದಿಲ್ಲ. ಮೋದಿ ಕಾರ್ಯಕ್ರಮದಿಂದ ಜನರು ಬಿಜೆಪಿ ಕಡೆ ಒಲವು ತೋರಿಸಿದ್ದಾರೆ.
ನಿರಂತರವಾಗಿ ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅದನ್ನು ಬಗೆಹರಿಸಲು ಶ್ರಮಿಸಬೇಕು ಎಂದು ಮನವಿ ಮಾಡಿದರು. ಶಕ್ತಿ ಕೇಂದ್ರ ವಿಸ್ತಾರಕ ಉಸ್ತುವಾರಿ, ಹಾಪ್‌ಕಾಮ್ಸ್ ಜಿಲ್ಲಾಧ್ಯಕ್ಷ ಡಿ.ಪಿ.ಬೋರೇಗೌಡ ಮಾತನಾಡಿ, ಕಳಲೆ ಶಕ್ತಿ ಕೇಂದ್ರದಲ್ಲಿ ಈ ಕಾರ್ಯಕ್ರಮ ನಿರೀಕ್ಷೆಗೆ ಮೀರಿ ಯಶಸ್ವಿಯಾಗಿದೆ ಎಂದರು.
ಸಮಾರಂಭದಲ್ಲಿ ಬಿಜೆಪಿ ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಅಶೋಕ್, ಪ್ರಧಾನ ಕಾರ್ಯದರ್ಶಿ ಫಣೀಶ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಸುಬ್ಬಣ್ಣ, ಕೃಷ್ಣಪ್ಪ, ಬಿಜೆಪಿ ತಾಲೂಕು ಅಧ್ಯಕ್ಷ ಕೆಂಡಗಣ್ಣಪ್ಪ, ಮಾರ್ಬಳ್ಳಿ ಮೂರ್ತಿ, ಜಿಪಂ ಮಾಜಿ ಸದಸ್ಯ ಎಸ್.ಎಂ. ಕೆಂಪಣ್ಣ, ಕೇಬಲ್ ಸಿದ್ದರಾಜು, ಎಪಿಎಂಸಿ ಸದಸ್ಯ ಗುರುಸ್ವಾಮಿ, ಕಳಲೆ ಶಕ್ತಿ ಕೇಂದ್ರದ ಅಧ್ಯಕ್ಷ ಮಹದೇವಪ್ಪ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಮುಖಂಡರು ಕಾರ್ಯಕರ್ತರು ಗ್ರಾಮದಲ್ಲಿ ಸಸಿ ನೆಡುವಿಕೆ ಹಾಗೂ ಸ್ವತ್ಛತಾ ಕಾರ್ಯ ನೆರವೇರಿಸಿದರು.