Advertisement
ವೇತನದಾರರಿರಬಹುದು, ಸ್ವ ಉದ್ಯೋಗಿಗಳಿರಬಹುದು, ಪ್ರತಿವರ್ಷ ವರಮಾನ ತೆರಿಗೆ ಲೆಕ್ಕಾಚಾರದ ಗಣಿತ ಮಾಡುವಾಗ ತಮ್ಮ ಒಟ್ಟಾರೆ ಟ್ಯಾಕ್ಸೆಬಲ್ ಇನ್ ಕಮ್ ಮೊತ್ತದಲ್ಲಿ, ಒಂದೂವರೆ ಲಕ್ಷ ರೂಪಾಯಿಗಳನ್ನು ವರಮಾನ ತೆರಿಗೆ ಕಾಯಿದೆಯ 80 ಸಿಸಿಇ ಅಡಿಯಲ್ಲಿ ಕಟಾವಣೆ ಮಾಡುವುದಕ್ಕೆ ಅವಕಾಶವಿರುತ್ತದೆ. ಅಂದರೆ ಆ ಮೊತ್ತವನ್ನು ಕಾಯಿದೆಯಲ್ಲಿ ಹೇಳಲಾದ ನಿರ್ದಿಷ್ಟ ಹೂಡಿಕೆಗಳಲ್ಲಿ ನಿಯೋಜನೆ ಮಾಡಿರಬೇಕು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.
Related Articles
Advertisement
ಐವತ್ತು ಸಾವಿರ ರೂಪಾಯಿಗಳನ್ನು ಕಟಾವಣೆ ಮಾಡಿಕೊಂಡು ತೆರಿಗೆ ಲೆಕ್ಕ ಸಲ್ಲಿಸುವುದಕ್ಕೆ ಸೆಕ್ಷನ್ 80ಸಿಸಿಡಿ ಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಆದರೆ ಇಲ್ಲೊಂದು ಅಂಶವನ್ನು ಗಮನಿಸಬೇಕಿದೆ. ಒಂದುವೇಳೆ ಎನ್.ಪಿ.ಎಸ್‌ಗೆ ಹೂಡಿಕೆ ಮಾಡುವ ಮೊತ್ತವು ಉದ್ಯೋಗದಾತ ಕಂಪೆನಿಯಿಂದ ಅಥವಾ ಮಾಲೀಕನಿಂದ ಕೊಡುಗೆಯಾಗಿ ಬಂದಿದ್ದಲ್ಲಿ, ಅದನ್ನು ಸೆಕ್ಷನ್ 80ಸಿಸಿಡಿ ಅಡಿಯಲ್ಲಿ ಪರಿಗಣಿಸುವಂತಿಲ್ಲ ಮತ್ತು ಹೆಚ್ಚುವರಿ ಐವತ್ತುಸಾವಿರ ಮೊತ್ತ ಕಟಾವಣೆಯ ಅರ್ಹತೆ ಪಡೆಯುವುದಕ್ಕೆ ಅವಕಾಶರುವುದಿಲ್ಲ.
ಹಾಗಿದ್ದರೆ ಈ ಎನ್.ಪಿ.ಎಸ್. ಅಂದರೇನು?: ನ್ಯಾಶನಲ್ ಪೆನ್‌ಶನ್ ಸ್ಕೀಂ ಎಂಬ ಹೆಸರಿನ ಈ ಯೋಜನೆ ಒಂದು ಸ್ವಾಯುತ್ತ ಯೋಜನೆಯಾಗಿದ್ದು ಪ್ರಸ್ತುತ ಜನಪ್ರಿಯತೆ ಪಡೆದಿದೆ. ಇದೊಂದು ನಿವೃತ್ತಿ ಪಿಂಚಣಿ ಯೋಜನೆಯಾಗಿದ್ದು, ಇದರಲ್ಲಿ ವ್ಯಕ್ತಿಗತವಾಗಿ ಹೂಡಿಕೆ ಮಾಡಲ್ಪಡುವ ಮೊತ್ತಗಳನ್ನು ಈಕ್ವಿಟಿ ಮಾರುಕಟ್ಟೆ ಮತ್ತು ಇತರೆ ಸರಕಾರಿ ಫಂಡುಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಇದರಲ್ಲಿ ನಿರ್ದಿಷ್ಟವಾದ ಕೆಲವು ಪ್ರಯೋಜನಗಳಿವೆ.
ಬೇರೆ ಹೂಡಿಕೆ ಫಂಡುಗಳಲ್ಲಿ ಮ್ಯಾನೇಜ್‌ಮೆಂಟ್ ಶುಲ್ಕ ಎಂದು ವಿಧಿಸಲಾಗುವ ಶೇಕಡಾವಾರು ಪ್ರಮಾಣ ದುಬಾರಿಯಾಗಿದ್ದರೆ, ಎನ್.ಪಿ.ಎಸ್‌ನಲ್ಲಿ ಅದು ತುಂಬಾ ಅಗ್ಗ. ಇಲ್ಲಿ ಅಂತಹ ಶುಲ್ಕ ಶೇ.0.01ರನ್ನೂ ಮೀರುವುದಿಲ್ಲ. ಬೇರೆ ಫಂಡುಗಳಲ್ಲಿ ಇದರ ಐದುಪಟ್ಟು ಹೆಚ್ಚಿಗೆ ಶುಲ್ಕ ವಿಧಿಸಲ್ಪಡುತ್ತದೆ. ಹೀಗಾಗಿ ಖರ್ಚುಕಡಿಮೆಯಾಗುವ ಕಾರಣ ಹೂಡಿಕೆದಾರನಿಗೆ ಇಲ್ಲಿ ಲಾಭ ಹೆಚ್ಚು.
ಹೂಡಿಕೆದಾರ ತನಗೆ ಅರವತ್ತು ವರ್ಷಗಳಾದಾಗ ಒಟ್ಟಾರೆಯಾಗಿ ಹೂಡಿಕೆ ಮಾಡಿದ ಮೊತ್ತದ ಫಂಡ್‌ವ್ಯಾಲ್ಯೂನಲ್ಲಿ ಶೇ. ಅರವತ್ತರಷ್ಟನ್ನು ಹಿಂಪಡೆಯಬಹುದು. ಉಳಿದ ಮೊತ್ತವನ್ನು ಹಿಂಪಡೆಯಲು ಆಗುವುದಿಲ್ಲ. ಅದನ್ನು ನಿವೃತ್ತಿ ನಂತರ ಪಿಂಚಣಿ ರೂಪದಲ್ಲಿ ಪಡೆಯುವ ಸವಲತ್ತಿಗೆ ಮೀಸಲಿಡಬೇಕಾಗುತ್ತದೆ. ಇತ್ತೀಚಿನ ಬಜೆಟ್‌ನಲ್ಲಿ ಎನ್.ಪಿ.ಎಸ್‌ಯಲ್ಲಿ ಹಿಂಪಡೆಯುವ ಮೊತ್ತವು ಭಾಗಶಃ ತೆರಿಗೆಮುಕ್ತ ಎಂದು ಘೋಷಿಸಲ್ಪಟ್ಟಿದ್ದು, ಈ ಮೊತ್ತಕ್ಕೆ ಅಗತ್ಯ ತೆರಿಗೆಯಲ್ಲಿ ಶೇ.40 ವಿನಾಯಿತಿಯನ್ನು ನಿಗದಿಪಡಿಸಲಾಗಿದೆ.
ಎನ್.ಪಿ.ಎಸ್. ಯಾರಿಗೆ ಸೂಕ್ತ?: ಹೂಡಿಕೆ ಯೋಜನೆಗಳನ್ನು ತಾವೇ ಸ್ವತಃ ನಿಭಾಯಿಸಲು ವ್ಯವಧಾನ ಅಥವಾ ಸಾಮರ್ಥಯ ಇಲ್ಲದವರು ಮತ್ತು ದೀರ್ಘಕಾಲೀನ ಅವಧಿಯಲ್ಲಿ ಉತ್ತಮ ಇಳುವರಿ ಪಡೆಯಲು ಬಯಸುವವರು, ತೆರಿಗೆನಾಯಿತಿ ಸೌಲಭ್ಯ ಬಯಸುವವರು ಎನ್.ಪಿ.ಎಸ್. ನಲ್ಲಿ ಹೂಡಿಕೆ ಮಾಡಬಹುದು. 25-30ರ ವಯೋಮಾನದಲ್ಲಿ ಎನ್.ಪಿ.ಎಸ್. ಹೂಡಿಕೆ ಆರಂಭ ಮಾಡುವುದು ಒಳ್ಳೆಯ ಕ್ರಮ.
ಏಕೆಂದರೆ ನಿವೃತ್ತಿ ವಯಸ್ಸಿಗೆ ಬಂದಾಗ ಅಲ್ಲಿ ಸಾಕಷ್ಟು ಮೊತ್ತ ಜಮಾವಣೆಯಾಗುತ್ತದೆ ಮತ್ತು ಅದರಿಂದ ಸಿಗುವ ಇಳುವರಿ, ಪಿಂಚಣಿ ಕೂಡ ನಿವೃತ್ತಿಯ ನಂತರದ ಬದುಕಿಗೆ ಸಹಾಯಕವಾಗುತ್ತದೆ. ವಾರ್ಷಿಕವಾಗಿ ಎನ್.ಪಿ.ಎಸ್. ಹೂಡಿಕೆಗೆ ಸಿಗುತ್ತಿರುವ ಬಡ್ಡಿ ಕೂಡ ಆಕರ್ಷಕವಾಗಿದೆ.
* ನಿರಂಜನ