Advertisement
ತೆರಿಗೆ ಪಾವತಿದಾರರು ಮತ್ತು ಕನ್‌ಸಲ್ಟೆಂಟ್‌ಗಳ ಒತ್ತಡಕ್ಕೆ ಮಣಿದು ಸರಕಾರ ಐಟಿ ರಿಟರ್ನ್ ಸಲ್ಲಿಕೆಯ ಗಡುವನ್ನು ಆ.31ರ ವರೆಗೆ ವಿಸ್ತರಿಸಿದೆ.
Related Articles
Advertisement
ಈ ಬಾರಿ 1.25 ಕೋಟಿ ಹೊಸ ಆದಾಯ ತೆರಿಗೆ ಪಾವತಿದಾರರನ್ನು ಸೇರಿಸಿಕೊಳ್ಳುವುದು ಸರಕಾರದ ಗುರಿಯಾಗಿದೆ. ಕಳೆದ ವರ್ಷ 1.06 ಕೋಟಿ ಹೊಸ ಐಟಿ ಪಾವತಿದಾರರನ್ನು ಸೇರಿಸಿಕೊಳ್ಳಲಾಗಿತ್ತು.
ತಡವಾಗಿ ಐಟಿ ರಿಟರ್ನ್ ಸಲ್ಲಿಸುವವರಿಗೆ ದಂಡ ಶುಲ್ಕ ಹೇರುವ ಸರಕಾರದ ಕ್ರಮದಿಂದಾಗಿ ಈ ಬಾರಿ ತ್ವರಿತ ಗತಿಯಲ್ಲಿ ಅತ್ಯಧಿಕ ಸಂಖ್ಯೆಯ ಐಟಿ ರಿಟರ್ನ್ ಗಳು ಸಲ್ಲಿಕೆಯಾಗಿವೆ ಎಂದು ಮೂಲಗಳು ತಿಳಿಸಿವೆ.
ಕಳೆದ ಗುರುವಾರದ ವರೆಗೆ ಸಲ್ಲಿಕೆಯಾಗಿರುವ ಇ-ಐಟಿ-ರಿಟರ್ನ್ ಸಂಖ್ಯೆ 3.07 ಕೋಟಿ . 2017ರ ಜು.26ರ ವರಗೆ ಸಲ್ಲಿಸಲ್ಪಟ್ಟಿದ್ದ ಐಟಿ ರಿಟರ್ನ್ಗಳ ಸಂಖ್ಯೆ 1.07 ಕೋಟಿ. ಎಂದರೆ ಈ ಬಾರಿ ಶೇ.82ರ ಹೆಚ್ಚಳವನ್ನು ಸಾಧಿಸಲಾಗಿದೆ.
2016-17ರ ಹಣಕಾಸು ವರ್ಷದಲ್ಲಿ ಸಲ್ಲಿಸಲಾಗಿದ್ದ ಐಟಿ ರಿಟರ್ನ್ ಸಂಖ್ಯೆ 1.4 ಕೋಟಿ; 2017-18ರ ಹಣಕಾಸು ವರ್ಷದಲ್ಲಿ ಸಲ್ಲಿಕೆಯಾಗಿರುವ ಐಟಿ ರಿಟರ್ನ್ ಸಂಖ್ಯೆ 2.96 ಕೋಟಿ.