Advertisement
ಕೋಟ್ಯಂತರ ರೂಪಾಯಿ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಭಾನುವಾರ ರಾಥೋಢ್ ಹಾಗೂ ಮಾಜಿ ಕೌನ್ಸಿಲರ್ ರಾಜೇಶ್ ಕೇಸರವಾಣಿ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದರು ಎಂದು ವರದಿ ವಿವರಿಸಿದೆ.
Related Articles
Advertisement
ದಾಳಿ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಅಚ್ಚರಿ ಮೂಡಿಸಿದ್ದು, ರಾಥೋಡ್ ನಿವಾಸದೊಳಗಿನ ಚಿಕ್ಕ ಕೊಳದಲ್ಲಿ ಮೂರು ಮೊಸಳೆ ಪತ್ತೆಯಾಗಿರುವುದು. ನಂತರ ಈ ಬಗ್ಗೆ ವನ್ಯಜೀವಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಯ್ತು ಎಂದು ವರದಿ ತಿಳಿಸಿದೆ.
ಕೇಸರವಾಣಿ ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಹಲವಾರು ಬೇನಾಮಿ ಇಂಪೋರ್ಟೆಡ್ ಕಾರುಗಳು ಪತ್ತೆಯಾಗಿದ್ದವು. ಈ ಕಾರುಗಳ ಬಗ್ಗೆ ಮಾಹಿತಿ ನೀಡುವಂತೆ ಆದಾಯ ತೆರಿಗೆ ಇಲಾಖೆ ಸಾರಿಗೆ ಇಲಾಖೆಗೆ ಮನವಿ ಮಾಡಿಕೊಂಡಿದೆ.
ರಾಥೋಡ್ ಹಿರಿಯ ಬಿಜೆಪಿ ಮುಖಂಡ, ಉದ್ಯಮಿಯಾಗಿದ್ದಾರೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದರು. ರಾಥೋಢ್ ಅವರ ತಂದೆ ಹರ್ನಾಮ್ ಸಿಂಗ್ ರಾಥೋಢ್ ಅವರು ಮಧ್ಯಪ್ರದೇಶ ಸರ್ಕಾರದಲ್ಲಿ ಸಚಿವರಾಗಿದ್ದರು.