Advertisement

ವೈದ್ಯರಿಗೆ ಆದಾಯ ತೆರಿಗೆ ನೋಟಿಸ್‌ ಜಾರಿ ಇಂದು

09:11 AM Dec 04, 2017 | |

ಬೆಂಗಳೂರು: ಇತ್ತೀಚೆಗೆ ಪ್ರಸಿದ್ಧ ಸ್ತ್ರೀ ರೋಗ ತಜ್ಞೆ ಡಾ. ಕಾಮಿನಿ ಎ.ರಾವ್‌ ಮತ್ತು ಇತರೆ ಎರಡು ಐವಿಎಫ್ ಕ್ಲಿನಿಕ್‌ ಹಾಗೂ 5 ಡಯಾಗ್ನೊಸ್ಟಿಕ್‌ ಸೆಂಟರ್‌ಗಳ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಾಮಿನಿ ರಾವ್‌ ಹಾಗೂ ಇತರೆ ವೈದ್ಯರು, ಡಯಾಗ್ನೊಸ್ಟಿಕ್‌ ಸೆಂಟರ್‌ಗಳ ಮಾಲೀಕರಿಗೆ ವಿಚಾರಣೆಗೆ ಹಾಜರಾಗುವಂತೆ ಸೋಮವಾರ ನೋಟಿಸ್‌ ಜಾರಿ ಮಾಡಲಿದ್ದಾರೆ. ನ.29 ರಂದು ಸ್ತ್ರೀ ರೋಗ ತಜ್ಞೆ ಡಾ.ಕಾಮಿನಿ ರಾವ್‌ ಒಡೆತನದ ಆಸ್ಪತ್ರೆ, ಡಯಾಗ್ನೊಸ್ಟಿಕ್‌ ಸೆಂಟರ್‌ಗಳು ಹಾಗೂ ಇತರೆ ಎರಡು ಐವಿಎಫ್ ಕ್ಲಿನಿಕ್‌ ಹಾಗೂ 5 ಡಯಾಗ್ನೊಸ್ಟಿಕ್‌ ಸೆಂಟರ್‌ಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 100 ಕೋಟಿ ರೂ. ಅಘೋಷಿತ ಆದಾಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದರು. 

Advertisement

ಇದೇ ವೇಳೆ ಡಯಾಗ್ನೊಸ್ಟಿಕ್‌ ಸೆಂಟರ್‌ಗಳಿಂದ ವೈದ್ಯರಿಗೆ ನಾಲ್ಕು ಮಾರ್ಗಗಳಲ್ಲಿ 200 ಕೋಟಿ ರೂ. ನಗದು ಸಂದಾಯವಾಗಿದೆ ಎಂಬ ಮಾಹಿತಿಯನ್ನು ಬಹಿರಂಗ ಪಡಿಸಿದ್ದರು. ಈ ಸಂಬಂಧ ವಿಚಾರಣೆಗೆ ಹಾಜರಾಗಿ ತಮ್ಮ ಆದಾಯ ಮೂಲಗಳು ಹಾಗೂ ಅವ್ಯವಹಾರ ಕುರಿತು ವಿವರಣೆ ನೀಡುವಂತೆ ಕಾಮಿನಿ ಎ.ರಾವ್‌ ಸೇರಿ ಕೆಲ ವೈದ್ಯರು, ಡಯಾಗ್ನೊಸ್ಟಿಕ್‌ ಸೆಂಟರ್‌ನ ಮಾಲೀಕರಿಗೆ ನೋಟಿಸ್‌ ನೀಡಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.

3 ದಿನಗಳ ದಾಳಿಯಲ್ಲಿ ದಾಖಲೆ ಇಲ್ಲದ 1.40 ಕೋಟಿ ರೂ. ನಗದು, 3.5 ಕೆ.ಜಿ. ಚಿನ್ನಾಭರಣ, ಕೊಟ್ಯಂತರ ರೂ. ಮೌಲ್ಯದ ವಿದೇಶಿ ಕರೆನ್ಸಿ ಹಾಗೂ ವಿದೇಶಿ ಬ್ಯಾಂಕ್‌ಗಳಲ್ಲಿ ಗೌಪ್ಯವಾಗಿ ಕೊಟ್ಯಂತರ ರೂ. ಠೇವಣಿಯಿಟ್ಟಿರುವ ರಸೀದಿಗಳು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ನೊಟೀಸ್‌ ನೀಡಿ ಇವುಗಳ ಬಗ್ಗೆ ವಿಚಾರಣೆ ನಡೆಸಿ ಐಟಿ ಅಧಿಕಾರಿಗಳು ಮಾಹಿತಿ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next