Advertisement

ಆದಾಯ ತೆರಿಗೆ ಮಿತಿ 3 ಲಕ್ಷಕ್ಕೆ ಏರಿಕೆ?

06:30 AM Jan 23, 2018 | Team Udayavani |

ಹೊಸದಿಲ್ಲಿ: ಕೇಂದ್ರ ಸರಕಾರಿ ನೌಕರರಿಗೆ ಏಳನೇ ವೇತನ ಆಯೋಗದ ಶಿಫಾರಸುಗಳು ಜಾರಿಯಾಗಿರುವ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಮಿತಿಯನ್ನು 3 ಲಕ್ಷ ರೂ. ವರೆಗೆ ಹೆಚ್ಚಿಸಬೇಕು ಎಂದು ಎಸ್‌ಬಿಐನ “ಇಕೋರಾಪ್‌’ ವರದಿ ಶಿಫಾರಸು ಮಾಡಿದೆ. ಇದರಿಂದ ಸುಮಾರು 75 ಲಕ್ಷ ಮಂದಿಗೆ ನೆರವಾಗಲಿದೆ ಎಂದು ಹೇಳಿದೆ. ಇದರ ಜತೆಗೆ ಬ್ಯಾಂಕ್‌ ಠೇವಣಿಗಳಿಗೆ ಕೂಡಾ ತೆರಿಗೆ ವಿನಾಯಿತಿ ನೀಡುವುದರ ಬಗ್ಗೆ ಪರಿಶೀಲನೆ ನಡೆಸಬಹುದು ಎಂದು ಸಲಹೆ ಮಾಡಿದೆ. ಇದಲ್ಲದೆ ತೆರಿಗೆ ಉಳಿತಾಯಕ್ಕಾಗಿರುವ ನಿಗದಿತ ಠೇವಣಿಗಳ ಅವಧಿ ಮಿತಿಯನ್ನು ಈಗಿನ ಐದು ವರ್ಷಗಳಿಂದ ಮೂರು ವರ್ಷಗಳಿಗೆ ಇಳಿಕೆ ಮಾಡುವಂತೆಯೂ ವರದಿ ಸಲಹೆ ನೀಡಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next