Advertisement

ರಿಟರ್ನ್ ಫಾರ್ಮ್ ಪರಿಷ್ಕರಣೆ ಮಾಡಿದ ಆದಾಯ ತೆರಿಗೆ ಇಲಾಖೆ

02:03 AM Apr 20, 2020 | Hari Prasad |

ನವದೆಹಲಿ: ಕೋವಿಡ್ ಹಿನ್ನೆಲೆಯಲ್ಲಿ ಸರಕಾರ ಜಾರಿಗೊಳಿಸಿದ ಹಲವು ಯೋಜನೆಗಳ ಅವಧಿ ವಿಸ್ತರಣೆಯ ಲಾಭವನ್ನು ತೆರಿಗೆ ಪಾವತಿದಾರರಿಗೆ ಒದಗಿಸಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ. ಈ ಸಂಬಂಧ 2019-20ರ ಆರ್ಥಿಕ ಸಾಲಿನ ‘ರಿಟರ್ನ್ ಫಾರ್ಮ್ಸ್’ ಅನ್ನು ಪರಿಷ್ಕರಿಸಿದೆ.

Advertisement

ಕೋವಿಡ್ 19 ವೈರಸ್ ಹಿನ್ನೆಲೆಯಲ್ಲಿ ತೆರಿಗೆ ಪಾವತಿದಾರರ ಸಂಕಷ್ಟಕ್ಕೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರಕಾರ 1961ರ ಆದಾಯ ತೆರಿಗೆ ಕಾಯ್ದೆಯಡಿ, ಹಲವು ಯೋಜನೆಗಳ ಅವಧಿಯನ್ನು 2020ರ ಜೂನ್‌ 30ರವರೆಗೆ ವಿಸ್ತರಿಸಿದೆ.

ಹೀಗಾಗಿ, ತೆರಿಗೆ ಪಾವತಿದಾರರು 2020ರ ಎಪ್ರಿಲ್‌ 1ರಿಂದ ಜೂನ್‌ 30ರವರೆಗೆ ನಡೆಸಿದ ವ್ಯವಹಾರ/ಹೂಡಿಕೆಗಳ ಮೇಲಿನ ಲಾಭವನ್ನು ಪಡೆಯಲು ಅನುಕೂಲವಾಗುವಂತೆ 2019-20ರ ಆರ್ಥಿಕ ಸಾಲಿನ ‘ರಿಟರ್ನ್ ಫಾರ್ಮ್ಸ್’ನಲ್ಲಿ ಸೂಕ್ತ ಪರಿಷ್ಕರಣೆ ಮಾಡಲಾಗುತ್ತಿದೆ.

ಅಗತ್ಯ ಬದಲಾವಣೆಗಳನ್ನು ಸೇರಿಸಿದ ನಂತರ ಮೇ 30ರೊಳಗೆ ರಿಟರ್ನ್ ಫೈಲಿಂಗ್‌ ಸೌಲಭ್ಯ ಸಿಗುವಂತೆ ಮಾಡಲಾಗುವುದು ಎಂದು ಸಿಬಿಡಿಟಿ (ಸೆಂಟ್ರಲ್‌ ಬೋರ್ಡ್‌ ಆಫ್ ಡೈರೆಕ್ಟ್ ಟ್ಯಾಕ್ಸಸ್‌) ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next