Advertisement

ಮೈಸೂರು, ಚಾ.ನಗರ ಡೀಸಿ ಅಮಾನತಿಗೆ ಸಾರಾ ಆಗ್ರಹ

03:49 PM May 05, 2021 | Team Udayavani |

ಮೈಸೂರು: ಚಾಮರಾಜನಗರದಲ್ಲಿ ಆಕ್ಸಿಜನ್‌ಲಭ್ಯವಾಗದೇ 24 ಮಂದಿ ಮೃತಪಟ್ಟಿರುವುದಕ್ಕೆಮೈಸೂರು ಮತ್ತು ಚಾಮರಾಜನಗರ ಜಿಲ್ಲಾಡಳಿತನಡುವಿನ ಸಮನ್ವಯತೆ ಕೊರತೆಯೇ ಕಾರಣವಾಗಿದ್ದು, ಅಮಾಯಕರ ಸಾವಿಗೆ ಕಾರಣರಾದ ಡ್ರಗ್‌ಕಂಟ್ರೋಲರ್‌, ಮೈಸೂರು, ಚಾಮರಾಜನಗರಡೀಸಿಗಳನ್ನು ಅಮಾನತು ಮಾಡಬೇಕು ಎಂದು ಶಾಸಕಸಾ.ರಾ.ಮಹೇಶ್‌ ಒತ್ತಾಯಿಸಿದರು.

Advertisement

ತಮ್ಮ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದಅವರು, ಚಾಮರಾಜನಗರದ ದುರಂತದಲ್ಲಿ ಮೃತಪಟ್ಟಕುಟುಂಬದವರಿಗೆ ನ್ಯಾಯ ದೊರೆಯಬೇಕಾದರೆ ಭ್ರಷ್ಟಾಚಾರಕಳಂಕ ರಹಿತ ನ್ಯಾಯಾಧೀಶರಿಂದ ತನಿಖೆ ಮಾಡಿಸಿ, ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

ಆಕ್ಸಿಜನ್‌ ಕೊರತೆಯಿಂದ ಮೂವರು ಮೃತಪಟ್ಟಿದ್ದಾರೆಂದುಸಚಿವರು ಹೇಳುತ್ತಾರೆ. ಹಾಗಾದರೆ ಅದು ಸಾವಲ್ಲವೇ? ಇಷ್ಟೆಲ್ಲಅದ್ವಾನದ ನಡುವೆಯೂ ಡೀಸಿಯನ್ನು ಯಾರಒತ್ತಡಕ್ಕೆ ಮಣಿದು ಇನ್ನೂ ಇಲ್ಲೇ ಉಳಿಸಿಕೊಂಡಿದ್ದೀರೋಗೊತ್ತಿಲ್ಲ. ತಕ್ಷಣ ಅವರನ್ನು ಅಮಾನತು ಮಾಡದೇಏನು ತನಿಖೆ ಮಾಡುತ್ತೀರಿ ಎಂದು ಪ್ರಶ್ನಿಸಿದರು.ಜಿಲ್ಲೆಗೆ ಸಚಿವರು ಅಥವಾ ಯಾವುದಾದರೂ ಕಮಿಟಿಗಳು ಬಂದರೆ ಅವರನ್ನು ಭೇಟಿಯಾಗಲು ಜಿಲ್ಲಾಧಿಕಾರಿಗೆ ಸಮಯ ಇರುವುದಿಲ್ಲ. ಆದರೆ,ಆಡಳಿತ ನಡೆಸುತ್ತಿರುವ ಪಕ್ಷದ ಅಧ್ಯಕ್ಷರು ಬಂದಾಗ ಅವರ ಭೇಟಿಯಾಗುತ್ತಾರೆ.

ಇದು ಜಿಲ್ಲೆಯ ದುರ್ದೆçವ ಎಂದರು.ಕೆ.ಆರ್‌.ನಗರದ ಕೋವಿಡ್‌ ರೋಗಿಗೆ ತಾಲೂಕು ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡದೆ, ಮೈಸೂರಿಗೆ ಕಳುಹಿಸಿದ್ದಕ್ಕೆಅಲ್ಲಿನ ತಹಶೀಲ್ದಾರ್‌ಗೆ ಜಿಲ್ಲಾಧಿಕಾರಿ ನೋಟಿಸ್‌ ನೀಡಿದ್ದರ ಸಂಬಂಧ ಪ್ರತಿಕ್ರಿಯಿಸಿ, ಅದು ಅವರ ಆಡಳಿತಕ್ಕೆ ಸಂಬಂಧಿಸಿದ ವಿಷಯ. ಆ ಬಗ್ಗೆ ನಾವು ತಲೆ ಹಾಕಲ್ಲ. ನಮಗೆ ವ್ಯವಸ್ಥೆಸರಿಯಾಗಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next