ವಿಜಯಪುರ: ಜಿಲ್ಲೆಯ ಏತ ನೀರಾವರಿ ಯೋಜನೆಯ ಮುಖ್ಯ ಕಾಲುವೆಯ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿ ಸಹೋದರರಿಬ್ಬರು ಕಾಣೆಯಾದ ಘಟನೆ ವರದಿಯಾಗಿದೆ.
ಕೊಲ್ಹಾರ ತಾಲೂಕಿನ ಹಳ್ಳದ ಗೆಣ್ಣೂರ ಗ್ರಾಮದ ಸಹೋದರರಿಬ್ಬರು ಮುಳವಾಡ ಏತ ನೀರಾವರಿಯ ಕಾಲುವೆಯ ಪಕ್ಕದಲ್ಲಿ ಇರುವ ಜಮೀನಿಗೆ ನೀರು ಹಾಯಿಸಲು ಹೋಗಿದ್ದರು. ಈ ಸಂದರ್ಭದಲ್ಲಿ ಕಾಲುವೆ ನೀರಿನ ರಭಸಕ್ಕೆ ಇಬ್ಬರೂ ಕೊಚ್ಚಿಕೊಂಡು ಹೋಗಿದ್ದಾರೆ.
ಇದನ್ನೂ ಓದಿ: ದೆಹಲಿ: ನಾಲ್ವರಿಂದ ಲೈಂಗಿಕ ದೌರ್ಜನ್ಯ ನಡೆಸಿ ಹಲ್ಲೆ; 12 ರ ಬಾಲಕ ಗಂಭೀರ
ನಾಲೆಯ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿರುವ ಸಹೋದರರನ್ನು ಸುನೀಲ ಕಲ್ಲಪ್ಪ ಮಾದರ್ (18) ಅನಿಲ ಕಲ್ಲಪ್ಪ ಮಾದರ (20) ಎಂದು ಗುರುತಿಸಲಾಗಿದೆ.
ವಿಷಯ ತಿಳಿಯುತ್ತಲೇ ಸ್ಥಳೀಯರು ನಾಲೆಯ ಹರಿಯುವ ನೀರಿನಲ್ಲಿ ಕಾಣೆಯಾದ ಯುವಕರ ಪತ್ತೆಗೆ ತೊಡಗಿದ್ದಾರೆ. ಸುದ್ದಿ ತಿಳಿದ ಕೊಲ್ಹಾರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.