Advertisement

ಹಿಜಾಬ್ -ಕೇಸರಿ ವಿವಾದ: ಶಿಕ್ಷಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾದ ಗುಂಪು

05:56 PM Feb 08, 2022 | Team Udayavani |

ರಬಕವಿಬನಹಟ್ಟಿ : ಹಿಜಾಬ್ ಮತ್ತು ಕೇಸರಿ ವಿವಾದವು ಭಾರೀ ಪ್ರತಿಭಟನೆಗೆ ಕಾರಣವಾಗಿ ಕಲ್ಲು ತೂರಾಟಗಳೂ ನಡೆದಿದ್ದವು. ಪ್ರತಿಭಟನೆ ನಂತರ ಅತಿಥಿ ಶಿಕ್ಷಕನೋರ್ವನ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬನಹಟ್ಟಿಯಲ್ಲಿ ಮಂಗಳವಾರ ನಡೆದಿದೆ.

Advertisement

ಹಳಿಂಗಳಿಯ ಅಲ್ಲಮಪ್ರಭು ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಮಂಜುನಾಥ ನಾಯಕ ಎಂಬುವರ ಮೇಲೆ ಏಕಾಏಕಿ ಹಲ್ಲೆ ನಡೆಸಿದರ ತಲೆಗೆ ಭಾರಿ ಪೆಟ್ಟು ಬಿದ್ದ ಕಾರಣ ರಬಕವಿ-ಬನಹಟ್ಟಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನಡೆಸಿದ ನಂತರ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಕಳಿಸಲಾಗಿದೆ.

ವಿವರ: ನಗರದ ಮಹಾತ್ಮಾಗಾಂಧಿ ವೃತ್ತದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು ಸಮೀಪ ಪ್ರತಿಭಟನಾನಿರತರಿಂದ ನಡೆದ ರಸ್ತೆ ತಡೆ ನಂತರ ಮಧ್ಯಾಹ್ನ ಹೊತ್ತಿಗೆ ಪ್ರತಿಭಟನೆ ಅಂತ್ಯವಾಗುತ್ತಿದಂತೆ 3 ಗಂಟೆ ಸುಮಾರಿಗೆ ರಸ್ತೆ ಬದಿ ಇದ್ದ ಮಂಜುನಾಥ ನಾಯಕ ಎಂಬುವರ ಮೇಲೆ ನಾಲ್ಕೈದು ಜನರಿಂದ ಕಬ್ಬಿಣದ ರಾಡ್ ಸೇರಿದಂತೆ ಇತರೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಸ್ಥಳದಿಂದ ತಕ್ಷಣವೇ ಕಾಲ್ಕಿತ್ತಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಮಂಗಳವಾರದಂದು ನಡೆದ ಇಡೀ ಘಟನೆ ಕುರಿತು ಪೊಲೀಸರು ತೀಕ್ಷ್ಣವಾಗಿ ಪರಿಗಣಿಸಿದ್ದು, ಅಹಿತಕರ ಘಟನೆಗೆ ಅವಕಾಶ ನೀಡಿದವರನ್ನು ವಿಡಿಯೋ ಹಾಗೂ ಫೋಟೊಗಳ ಸಹಾಯದಿಂದ ಸೆರೆ ಹಿಡಿಯಲಾಗುವುದೆಂದು ಎಂದು ಪೊಲೀಸರು ತಿಳಿಸಿದ್ದಾರೆ.

ಒಟ್ಟಾರೆ ಮಂಗಳವಾರದ ಘಟನೆಯಿಂದ ಬನಹಟ್ಟಿ ಪಟ್ಟಣವು ಬೂದಿ ಮುಚ್ಚಿದ ಕೆಂಡವಾಗಿದ್ದು, ಪರಿಸ್ಥಿತಿ ತಿಳಿಗೊಳಿಸಲು ಪೊಲೀಸ್ ಹಾಗು ಜಿಲ್ಲಾಡಳಿತ ಹರಸಾಹಸ ಮಾಡುತ್ತಿದೆ.

Advertisement

ಹಿಂದು ಸಂಘಟನೆಯಿಂದ ಖಂಡನೆ: ಈ ಘಟನೆಯನ್ನು ಹಿಂದುಪರ ಸಂಘಟನೆಗಳು ಬಲವಾಗಿ ಖಂಡಿಸಿವೆ. ಶಾಲಾ-ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಕೆಲವು ಗೂಂಡಾಗಳು ಸೇರಿಕೊಂಡು ಶಾಂತಿಭಂಗಕ್ಕೆ ಯತ್ನಿಸಿದರಲ್ಲದೆ, ಅತಿಥಿ ಶಿಕ್ಷಕರೊಬ್ಬರನ್ನು ಮನಬಂದಂತೆ ಥಳಿಸಿ, ಮಾರಣಾಂತಿಕ ಹಲ್ಲೆಯನ್ನು ತೀವ್ರವಾಗಿ ಖಂಡಿಸಲಾಗುವದೆಂದು ಹಿಂದುಪರ ಸಂಘಟನೆ ಮುಖಂಡ ಶಿವಾನಂದ ಗಾಯಕವಾಡಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next