Advertisement

ಸ್ಟಾರ್‌ ಹೊಟೇಲ್‌ಗೆ 25 ಲಕ್ಷ ರೂ. ನಾಮ!

11:36 PM Sep 02, 2021 | Team Udayavani |

ನವೀ ಮುಂಬಯಿ: ತ್ರೀ ಸ್ಟಾರ್‌ ಹೊಟೇಲೊಂದರಲ್ಲಿ ಎಂಟು ತಿಂಗಳ ಹಿಂದೆ ಎರಡು ಕೊಠಡಿಗಳನ್ನು ಬುಕ್‌ ಮಾಡಿದ್ದ ಮುಂಬಯಿಯ ಅಂಧೇ ರಿಯ ನಿವಾಸಿಯಾದ ಮುರಳಿ ಕಾಮತ್‌ ಎಂಬಾತ, ಒಟ್ಟು 25 ಲಕ್ಷ ರೂ. ಬಾಡಿಗೆ ಯಾಗುವವರೆಗೆ ಅಲ್ಲಿಯೇ ಇದ್ದು, ಬಿಲ್‌ ಚುಕ್ತಾ ಮಾಡುವ ಸಂದರ್ಭ ಬಂದಾಗ ತಾನಿದ್ದ ಕೊಠಡಿಯ ಬಾತ್‌ರೂಂ ಕಿಟಕಿ ಮುರಿದು ಪರಾರಿಯಾಗಿರುವ ಘಟನೆ ಇತ್ತೀಚೆಗೆ ನವೀ ಮುಂಬಯಿಯಲ್ಲಿ ನಡೆದಿದೆ.

Advertisement

2020 ನವೆಂಬರ್‌ನಲ್ಲಿ  ಹೊಟೇಲ್‌ಗೆ ಆಗಮಿಸಿದ್ದ. ತಾನೊಬ್ಬ ಚಿತ್ರರಂಗದ ವ್ಯಕ್ತಿಯೆಂದು ಹೇಳಿಕೊಂಡಿದ್ದ ಆತ ಎರಡು ಸೂಪರ್‌ ಡೀಲಕ್ಸ್‌ ಕೊಠಡಿ ಗಳನ್ನು ಬಾಡಿಗೆಗೆ ಪಡೆದಿದ್ದ. ತಿಂಗಳ ಅನಂತರ ಕೊಠಡಿಗಳ ಬಾಡಿಗೆ ನೀಡು ವು ದಾಗಿ ಹೇಳಿ, ಬಾಡಿಗೆ ಖಾತ್ರಿಗಾಗಿ ತನ್ನ ಪಾಸ್‌ಪೋರ್ಟನ್ನು ಹೊಟೇಲ್‌ನವರಿಗೆ ಒಪ್ಪಿಸಿದ್ದ. ಪದೇ ಪದೆ ಕೇಳಿದರೂ ಬಾಡಿಗೆ ನೀಡದ ಆತನನ್ನು ವಿಚಾರಣೆ ನಡೆಸಲು ಕೊಠಡಿಗೆ ಬಂದ ಸಿಬಂದಿಗೆ ಆತ ಪರಾರಿ ಯಾಗಿರುವುದು ಬಹಿರಂಗ ವಾಗಿದೆ. ದೂರು ದಾಖಲಿಸಿ ಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next