Advertisement

ರಾಜಕೀಯ ಸ್ವಾರ್ಥಕ್ಕಾಗಿ ಮೂಕ ಪ್ರಾಣಿಗೆ ಶಿಕ್ಷೆ

04:17 PM Apr 05, 2021 | Team Udayavani |

ಕುಣಿಗಲ್‌: ರಾಜಕೀಯ ಸ್ವಾರ್ಥಕ್ಕಾಗಿ ಮೂಕ ಪ್ರಾಣಿಯಾದ ಎತ್ತಿಗೆ ತಿನ್ನಲು ಆಹಾರ, ಕುಡಿಯಲು ನೀರಿಲ್ಲದೆ ಉರಿ ಬಿಸಿಲಿನಲ್ಲಿ ಉಪವಾಸದ ಶಿಕ್ಷೆ ಅನುಭವಿಸಿದ ಅಮಾನವೀಯ ಘಟನೆ ಪಟ್ಟಣದಲ್ಲಿ ನಡೆದಿದೆ.

Advertisement

ಯಾವ ತಪ್ಪೂ ಮಾಡದ ಮೂಕ ಪ್ರಾಣಿ ಎತ್ತಿಗೆ ಬಿಜೆಪಿ ಹಾಗೂ ಕಾಂಗ್ರೆಸ್‌ ಮುಖಂಡರು ರಾಜಕೀಯ ಲಾಭಕ್ಕಾಗಿ ಪೊಲೀಸ್‌ ಠಾಣಾ ಮೆಟ್ಟಿಲು ಏರಿ ಪ್ರಕರಣ ದಾಖಲಿಸಿದ್ದಾರೆ. ತಾಲೂಕಿನ ಇತಿಹಾಸ ಪ್ರಸಿದ್ಧ ಬೆಟ್ಟದರಂಗನಾಥ ಸ್ವಾಮಿ ದೇವಾಲಯಕ್ಕೆ ಸೇರಿದ ಬಸವಣ್ಣ ಕಳೆದೆರಡು ದಿನಗಳಿಂದ ಕುಣಿಗಲ್‌ ಪಟ್ಟಣದ ಪೊಲೀಸ್‌ ಠಾಣೆಯ ಗೋಡೆ ಪಕ್ಕದಲ್ಲಿ ಬಂಧಿಯಾಗಿದ್ದನ್ನುಪೊಲೀಸರು ಭಾನುವಾರ ಮಧ್ಯಾಹ್ನ ತಾಲೂಕಿನ ಬಿದನಗೆರೆ ಬಸವೇಶ್ವರ ಮಠಕ್ಕೆ ಬಿಟ್ಟಿದ್ದಾರೆ.

ಮಡಿಕೆಹಳ್ಳಿ ತಾಪಂ ಸದಸ್ಯ ಗಂಗರಂಗಯ್ಯ ಅಲಿಯಾಸ್‌ ರಾಜು ಹಾಗೂ ಕುಮಾರ, ಲೋಕೇಶ್‌,ರೂಪೇಶ್‌, ಬೋರಯ್ಯ ಎಂಬುವರು ಬಸವಣ್ಣನನ್ನು ಮಡಿಕೆಹಳ್ಳಿ ಗ್ರಾಮದ ರೀಯಾಜ್‌ ಎಂಬ ವ್ಯಕ್ತಿಗೆ ಕದ್ದು ಮಾರಾಟ ಮಾಡಿ, ಹತ್ಯೆಗೆ ಯತ್ನಿಸಿದರು. ಇದನ್ನು ಪ್ರಶ್ನೆ ಮಾಡಿದಕ್ಕೆ ಆರೋಪಿಗಳು ಹಾಗೂ ಕುಮಾರನ ಪತ್ನಿಸುಶೀಲಮ್ಮ, ಲೋಕೇಶ್‌ ಪತ್ನಿ ಗಂಗಮ್ಮ, ಅಕ್ರಮ ಕೂಟಕಟ್ಟಿಕೊಂಡು ನನ್ನನು ಹಾಗೂ ನನ್ನ ಹೆಂಡತಿ, ಮಗಳನ್ನು ನಿಂದಿಸಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದುಕೊತ್ತಗೆರೆ ಹೋಬಳಿ ತಿರುಮಲಯ್ಯನಪಾಳ್ಯ ಗ್ರಾಮದ ಹುಚ್ಚೀರಯ್ಯ ಅಲಿಯಾಸ್‌ ರಾಜಣ್ಣ ಕುಣಿಗಲ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಪ್ರತಿ ದೂರು: ಪೊಲೀಸ್‌ ಠಾಣೆಗೆ ಪ್ರತಿ ದೂರುನೀಡಿರುವ ಗಂಗಮ್ಮ ಹಾಗೂ ಲೋಕೇಶ್‌ ಬಸವಣ್ಣನನ್ನು ಕದ್ದು ಮಾರಾಟ ಮಾಡಿಲ್ಲ. ಬಸವ ಗ್ರಾಮದಲ್ಲಿನಹಸುಗಳಿಗೆ ಬಹಳ ದಿನಗಳಿಂದ ತೊಂದರೆ ನೀಡುತ್ತಿತ್ತು.ಹಾಗಾಗಿ ಅದನ್ನು ಕುಣಿಗಲ್‌ನ ಸಂತೇ ಮೈದಾನದಲ್ಲಿಬಿಡಲಾಗಿತ್ತು. ವಿನಃ ಮಾರಾಟ ಮಾಡಿಲ್ಲಹಾಗೂ ಹುಚ್ಚವೀರಯ್ಯ ಹಾಗೂ ಇತರರು ನನ್ನಮಾನಭಂಗಕ್ಕೆ ಯತ್ನಿಸಿ ಹಲ್ಲೆ ನಡೆಸಿದ್ದಾರೆ ಎಂದು ಪ್ರತಿ ದೂರಿನಲ್ಲಿ ತಿಳಿಸಿದ್ದಾರೆ.

ತಾಲೂಕಿನ ಮೆಣಸೀನಹಳ್ಳಿ ಸೇರಿದಂತೆ ವಿವಿಧ ಗ್ರಾಮಸ್ಥರು ಬೆಟ್ಟದರಂಗನಾಥಸ್ವಾಮಿ ದೇವಾಲಯಕ್ಕೆಸೇರಿದ ಬಸವಣ್ಣನನ್ನು ಪೂಜಿಸುತ್ತಿದ್ದರು.ಆದರೆ, ಕೆಲ ವ್ಯಕ್ತಿಗಳು ಬಸವಣ್ಣನನ್ನು ಕದ್ದುಮಾರಾಟ ಮಾಡಿ ಹತ್ಯಗೆ ಯತ್ನಿಸಿದ್ದಾರೆ ಎಂದು ದೂರು ಕೇಳಿ ಬಂದಿದೆ. ಹಾಗಾಗಿ ಆವ್ಯಕ್ತಿಗಳ ವಿರುದ್ಧ ತನಿಖೆ ನಡೆಸಿ ಆರೋಪಿಯಾರೇ ಆಗಿರಲಿ ಅಂಥವರ ವಿರುದ್ಧ ಕಠಿಣ ಕ್ರಮ ಪೊಲೀಸರು ಕೈಗೊಳ್ಳಬೇಕು. ●ದಿಲೀಪ್‌ಗೌಡ, ಬಿಜೆಪಿ ಪ್ರಧಾನ ಕಾರ್ಯದರ್ಶಿ

Advertisement

ಹಿಂದುಗಳ ಆರಾಧ್ಯ ದೈವ ಬಸವಣ್ಣನನ್ನು ಕದ್ದು ಮಾರಾಟ ಮಾಡುವ ದುರ್ಗತಿ ನನ್ನಗೆ ಬಂದಿಲ್ಲ. ನನ್ನ ರಾಜಕೀಯ ಅಭಿವೃದ್ಧಿಯನ್ನು ಸಹಿಸಲಾರದ ಬಿಜೆಪಿಯ ಕೆಲ ವ್ಯಕ್ತಿಗಳು ರಾಜಕೀಯದುರುದ್ದೇಶದಿಂದ ನನ್ನ ವಿರುದ್ಧ ಠಾಣೆಗೆ ದೂರು ಕೊಡಿಸಿ ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನಿಸಿದ್ದಾರೆ. ಕುಣಿಗಲ್‌ನಲ್ಲಿ ಬಿಡಲಾಗಿದ್ದ ಬಸವಣ್ಣನನ್ನು ನಮ್ಮವರು ಪೊಲೀಸರ ವಶಕ್ಕೆ ನೀಡಿದ್ದಾರೆ.  ●ಗಂಗರಂಗಯ್ಯ, ತಾಪಂ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next