Advertisement

ಚಿರತೆ ದಾಳಿ : ಎರಡು ಕುರಿ ಬಲಿ

12:38 PM Oct 09, 2021 | Team Udayavani |

ಕುಣಿಗಲ್ : ಮನೆಯ ಕೋಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಕುರಿಗಳ ಮೇಲೆ ಚಿರತೆ ದಾಳಿ ಮಾಡಿ ಎರಡು ಕುರಿಗಳನ್ನು ಕೊಂದು ಹಾಕಿರುವ ಘಟನೆ ತಾಲೂಕಿನ ಹುತ್ರಿದುರ್ಗ ಹೋಬಳಿ ಎಡೆಹಳ್ಳಿ ಚನ್ನಯ್ಯನಪಾಳ್ಯ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ.

Advertisement

ಚನ್ನಯ್ಯನಪಾಳ್ಯ ಗ್ರಾಮದ ಹೊನ್ನಗಂಗಯ್ಯ ಅವರಿಗೆ ಸೇರಿದ ಎರಡು ಕುರಿಗಳ ಮೇಲೆ ಚಿರತೆ ದಾಳಿ ಮಾಡಿದೆ.

 ಘಟನೆ ವಿವರ : ಎಂದಿನಂತೆ ಹೊನ್ನಗಂಗಯ್ಯ ಕುರಿಗಳನ್ನು ಮೇಯಿಸಿ ಮನೆಯ ಸಮೀಪದ ಕೋಟ್ಟಿಗೆಯಲ್ಲಿ  ಕಟ್ಟಿ ಹಾಕಿದರು ಬೆಳಗಿನ ಜಾವ ಮೂರು ಗಂಟೆ ಸಮಯದಲ್ಲಿ ಚಿರತೆ ದಾಳಿ‌ ಮಾಡಿ ಎರಡು ಕುರಿಗಳನ್ನು ಕೊಂದು ಹಾಕಿದೆ.

ಬೋನ್ ಇಡಲು ಒತ್ತಾಯ : ಹುತ್ರಿದುರ್ಗ ಹೋಬಳಿಯ ಚನ್ನಯ್ಯನಪಾಳ್ಯ, ಅಂದಾನಿಗೌನ ಪಾಳ್ಯ, ಯಲಚವಾಡಿ. ಹುಣಸೇಕುಪ್ಪೆ, ನಾಗನಹಳ್ಳಿ ಭಾಗದಲ್ಲಿ ಚಿರತೆ ಉಪ್ಪಟಳ ಹೆಚ್ಚಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಈ ಸಂಬಂಧ ಕ್ರಮಕೈಗೊಂಡು, ಬೋನ್ ಇಟ್ಟು ಚಿರತೆ ಸೆರೆಗೆ ಕ್ರಮಕೈಗೊಳ್ಳಬೇಕೆಂದು, ಗ್ರಾಮಸ್ಥರು ಆಗ್ರಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next