Advertisement

ಕಡಬ: ಮರ ಲೂಟಿ ಪ್ರಕರಣದ ದೂರು ನೀಡಿದ ವ್ಯಕ್ತಿಯ ಮನೆಗೆ ನುಗ್ಗಿ ದಾಂಧಲೆ ನಡೆಸಿದ ಅಧಿಕಾರಿಗಳು

02:15 PM Mar 03, 2021 | Team Udayavani |

ಕಡಬ:  ಐತ್ತೂರು  ರಕ್ಷಿತಾರಣ್ಯದಿಂದ ಮರ ಲೂಟಿ ಪ್ರಕರಣದ ದೂರು ದಾರನ ಮನೆಗೆ ರಾತ್ರೋ ರಾತ್ರಿ ನುಗ್ಗಿದ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಮನೆಯಲ್ಲಿ ದಾಂಧಲೆ ನಡೆಸಿದ ಘಟನೆ ಮಂಗಳವಾರ ತಡರಾತ್ರಿ ಸಂಭವಿಸಿದೆ.

Advertisement

ಮಂಗಳೂರು  ಅರಣ್ಯ ಸಂಚಾರಿ ದಳದ ಅಧಿಕಾರಿ ಸಂಧ್ಯಾ ಹಾಗೂ ಹದಿನೈದು ಮಂದಿ ಅಕ್ರಮವಾಗಿ ಮನೆಗೆ ನುಗ್ಗಿ  ದೂರುದಾರ ಪ್ರಸಾದ್ ಗಾಗಿ ಹುಡುಕಾಟ ನಡೆಸಿದ್ದಾರೆ. ಗಸ್ತು ದಳದವರ ಜೊತೆ ಮರಗಳ್ಳತನದ ಆರೋಪ ಹೊತ್ತಿರುವ ಅರಣ್ಯ ಅಧಿಕಾರಿ ಹಾಗೂ ಸಿಬಂದಿಗಳು ಕೂಡ ಇದ್ದರು ಎಂದು ತಿಳಿದುಬಂದಿದೆ. ಮನೆಗೆ ನುಗ್ಗಿದ ಅರಣ್ಯ ಅಧಿಕಾರಿಗಳು ಮನೆಯಲ್ಲಿ ಅಟ್ಟಕ್ಕೆ  ಮುಚ್ಚಿಗೆ  ಹಾಕಲಾಗಿದ್ದ ಮರದ   ಹಳೆ ಹಲಗೆಗಳನ್ನು ಹೊತ್ತೊಯ್ದಿದ್ದಾರೆ  ಎಂದು ಮನೆಯವರು ದೂರಿದ್ದಾರೆ.

ರಕ್ಷಿತಾರಣ್ಯದಲ್ಲಿ ಮರ ಲೂಟಿ ಬಗ್ಗೆ ದೂರು ನೀಡಿದ ಪ್ರಸಾದ್ ವಿರುದ್ದ ಅರಣ್ಯ ಇಲಾಖೆಯ ಅಧಿಕಾರಿಗಳು ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ ಎಂದು  ಸಾರ್ವಜನಿಕ ವಲಯದಲ್ಲಿ  ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ : ತೆರಿಗೆ ವಂಚನೆ ಆರೋಪ; ನಟಿ ತಾಪ್ಸಿ, ಅನುರಾಗ್ ಕಶ್ಯಪ್ ನಿವಾಸದ ಮೇಲೆ ಐಟಿ ದಾಳಿ

Advertisement

ದೂರುದಾರ ಪ್ರಸಾದ್ ಅವರ ವೃದ್ಧ ತಾಯಿಯ ಮೇಲೆ  ಅಧಿಕಾರಿಗಳು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ಮಹಿಳೆ ಪುತ್ತೂರು ಆಸ್ಪತ್ರೆ ಗೆ ದಾಖಲಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next