Advertisement

ಫೋಟೋಶೂಟ್ ಮಾಡುತ್ತಿದ್ದಾಗ ಜೇನು ನೊಣ ದಾಳಿ ; ಮೂವರು ಮಲಪ್ರಭಾ ಕಾಲುವೆಯಲ್ಲಿ ನಾಪತ್ತೆ

10:09 PM Jan 22, 2021 | Team Udayavani |

ಹುಬ್ಬಳ್ಳಿ: ಫೋಟೋ ಶೂಟಿಗಾಗಿ ತೆರಳಿದ್ದ ನಗರದ ಐವರ ಪೈಕಿ ಮೂವರು ಮಲಪ್ರಭಾ ಕಾಲುವೆಯಲ್ಲಿ ನಾಪತ್ತೆಯಾಗಿದ್ದು, ಸಾವಿನ ದವಡೆಯಲ್ಲಿದ್ದ ಯುವತಿಯನ್ನು ಸ್ಥಳದಲ್ಲಿ ಕುರಿಗಾಯಿಗಳು ರಕ್ಷಿಸಿದ ಘಟನೆ ತಾಲೂಕಿನ ಕಿರೆಸೂರು ಗ್ರಾಮದ ಬಳಿ ನಡೆದಿದೆ.

Advertisement

ಫೊಟೋ ಶೂಟಿಗಾಗಿ ನಗರದಿಂದ ಐವರು ತೆರಳಿದ್ದರು. ಈ ವೇಳೆ ಜೇನು ನೊಣಗಳು ದಾಳಿ ಮಾಡಿದ ಹಿನ್ನೆಲೆಯಲ್ಲಿ ಅವುಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಕಾಲುವೆಯಲ್ಲಿ ಮೂವರು ಯುವಕರು ಬಿದ್ದಿದ್ದಾರೆ. ಇನ್ನೋರ್ವ ಯುವಕರ ದಡದಲ್ಲಿ ಉಳಿದಿದ್ದ. ಅವರೊಂದಿಗೆ ತೆರಳಿದ್ದ ಯುವತಿ ಪೈಪ್ ಹಿಡಿದು ಜೋತಾಡುತ್ತಿದ್ದಳು. ಇದನ್ನು ಕಂಡ ಸ್ಥಳದಲ್ಲಿದ್ದ ಕುರಿಗಾಯಿಗಳು ಯುವತಿಯನ್ನು ರಕ್ಷಿಸಿದ್ದಾರೆ.

ಜೋಶಿ ಜಂಗಮ (21), ಸನ್ನಿ ಜಾಕ್ಸನ್ ಕಲ್ಲಕುಂಟ್ಲಾ (21), ಗಜಾನನ ರಾಜಶೇಖರ (21) ನೀರು ಪಾಲಾಗಿರುವ ಯುವಕರಾಗಿದ್ದಾರೆ. ನತಾಶಾ ಭಂಡಾರಿ (19), ಸಲ್ಮಾನ್ ಪಿಳ್ಳೆ (20 ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನೀರು ಪಾಲಾಗಿರುವ ಯವಕರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳಕ್ಕೆ ಗ್ರಾಮೀಣ ತಹಶೀಲ್ದಾರ ಪ್ರಕಾಶ ನಾಶಿ, ಇನ್‌ಸ್ಪೆಕ್ಟರ್ ಚಂದ್ರಶೇಖರ ಮಠಪತಿ, ಪಿಎಸ್‌ಐ ಜಯಪಾಲ ಪಾಟೀಲ ಆಗಮಿಸಿದ್ದು, ಸ್ಥಳೀಯರ ಸಹಕಾರದಿಂದ ಕಾರ್ಯಾಚರಣೆ ನಡೆಯುತ್ತಿದೆ.

Advertisement

(ಕುರಿಗಾಯಿ ಸಾಹಸದಿಂದ ಪ್ರಾಣಾಪಾಯದಿಂದ ಪಾರಾದ ಇಬ್ಬರು )

Advertisement

Udayavani is now on Telegram. Click here to join our channel and stay updated with the latest news.

Next