Advertisement

ಹನೂರು: ಡೋಲಿ ಕಟ್ಟಿ 8 ಕಿ.ಮೀ. ಗರ್ಭಿಣಿ ಹೊತ್ತೂಯ್ದರು!

10:33 PM Jun 30, 2022 | Team Udayavani |

ಹನೂರು: ಗರ್ಭಿಣಿಯನ್ನು ಹೆರಿಗೆಗಾಗಿ ಡೋಲಿ ಕಟ್ಟಿ 8 ಕಿ.ಮೀ. ದೂರ ಹೊತ್ತೂಯ್ದ ಘಟನೆ ಮಲೆ ಮಹದೇಶ್ವರ ಬೆಟ್ಟ ಸಮೀಪದ ದೊಡ್ಡಾಣೆ ಗ್ರಾಮದಲ್ಲಿ ಜರಗಿದೆ.

Advertisement

ದೊಡ್ಡಾಣೆ ಗ್ರಾಮದ ಶಾಂತಲಾ ಎಂಬಾಕೆಗೆ ಬುಧವಾರ ತಡರಾತ್ರಿ 2 ಗಂಟೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಚಿಕಿತ್ಸೆಗಾಗಿ ದೂರದ ಸುಳ್ವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಬೇಕಾಗಿತ್ತು. ಈ ವೇಳೆ ದಟ್ಟಕಾನನದ ನಡುವೆ ಕಾಡುಪ್ರಾಣಿಗಳ ದಾಳಿ ಭಯದಿಂದ ಕುಟುಂಬಸ್ಥರು ಡೋಲಿ ಕಟ್ಟಿ ಬ್ಯಾಟರಿ ಬೆಳಕಿನಲ್ಲಿ ಹೊತ್ತು ತಂದಿದ್ದಾರೆ. ದೊಡ್ಡಾಣೆ ಗ್ರಾಮದಿಂದ ಹೊರಟವರು ಬೆಳಗ್ಗೆ 6ರ ಸುಮಾರಿಗೆ ಸುಳ್ವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಲುಪಿದ್ದಾರೆ.

ನೆರವಿಗೆ ಬಾರದ ಜನವನ ಸಾರಿಗೆ: ಅರಣ್ಯ ಇಲಾಖೆಯಿಂದ ಕಾಡಂಚಿನ ಗ್ರಾಮಗಳ ಜನರ ಅನುಕೂಲಕ್ಕಾಗಿ ಜನ-ವನ ಹೆಸರಿನಡಿ ವಾಹನಗಳನ್ನು ಒದಗಿಸಲಾಗಿತ್ತು. ಆದರೆ, ದೊಡ್ಡಾಣೆ ಗ್ರಾಮದ ಶಾಂತಲಾಳಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಸಂಬಂಧಪಟ್ಟ ವಾಹನ ಚಾಲಕರು ಮತ್ತು ಅರಣ್ಯ ಇಲಾಖಾ ಅಧಿಕಾರಿಗಳಿಗೆ ಕರೆ ಮಾಡಿದಾಗ ಸ್ವಿಚ್‌ ಆಫ್ ಸಂದೇಶವಷ್ಟೇ ಲಭ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next