Advertisement

ಎಟಿಎಂ ಸಿಸ್ಟಂ ಹ್ಯಾಂಗ್‌ ಮಾಡಿ ಹಣ ಕಳವು

12:51 PM Mar 03, 2021 | Team Udayavani |

ಬೆಂಗಳೂರು: ಎಚ್ಚರ ಎಚ್ಚರ ಈಗ ಬಂದಿದೆ ಸೈಬರ್‌ ಕ್ರೈಂ ಹೊಸ ಟೆಕ್ನಿಕ್‌.. ಎಟಿಎಂ ಕಾರ್ಡ್‌ ಬಳಕೆದಾರರು ಮತ್ತು ಬ್ಯಾಂಕ್‌ಗಳಿಗೆ ಮಹಾ ವಂಚನೆ ಮಾಡುವ ಜಾಲ ಇದೆ ಎಚ್ಚರ! ಪೊಲೀಸರು ಬಯಲಿಗೆಳೆದಿರುವ ಪ್ರಕರಣವೊಂದರಲ್ಲಿ ಅಮಾಯಕರಿಂದ ಎಟಿಎಂ ಕಾರ್ಡ್‌ ಗಳನ್ನು ಪಡೆದು ಅವುಗಳನ್ನು ಎಟಿಎಂ ಕೇಂದ್ರದಲ್ಲಿ ಬಳಸಲಾಗುತ್ತಿತ್ತು. ಆ ವೇಳೆಯಲ್ಲಿ ಎಟಿಎಂ

Advertisement

ಯಂತ್ರದ ಹಣ ಬರುವ ಕಿಂಡಿ ತೆರೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಕೈ ಬೆರಳುಗಳಿಂದ ಕರೆನ್ಸಿ ನೋಟು ಗಳನ್ನು ತೆಗೆದು ಅಲ್ಲಿನ ಸೆನ್ಸಾರ್‌ಗೆ ಅಡ್ಡಿಪಡಿಸಲಾಗುತ್ತಿತ್ತು. ಇದರಿಂದ ಎಟಿಎಂ ಸಿಸ್ಟಂ “ಹ್ಯಾಂಗ್‌’ (ತಟಸ್ಥ) ವಾಗುವುದರಿಂದ ಬ್ಯಾಂಕ್‌ನವರಿಗೆ ಮತ್ತು ಕಾರ್ಡ್‌ದಾರರಿಗೆ ಹಣ ನಗದೀಕರಣಗೊಂಡಿ ರುವ ಮಾಹಿತಿ (ಮೆಸೇಜ್‌) ಹೋಗುತ್ತಿರಲಿಲ್ಲ!

ಎಟಿಎಂ ಹಣ ಪಡೆದ ಬಳಿಕ ಮತ್ತೆ ಬ್ಯಾಂಕ್‌ಗಳಿಗೆ ತನಗೆ ಹಣ ಸಿಕ್ಕಿಲ್ಲ ಎಂದು ಆನ್‌ಲೈನ್‌ ದೂರು ನೀಡಿ ಬಳಕೆದಾರರಿಗೆ ಹಣ ಹೆಚ್ಚುವರಿಯಾಗಿ ಸಿಗುತ್ತಿತ್ತು. ಈ ರೀತಿ ಹಣ ಕೊಳ್ಳೆ ಹೊಡೆ ಯು ತ್ತಿದ್ದ ತಂಡದ ಬೆನ್ನು ಹತ್ತಿದ ನಗರ ಪೊಲೀಸರ ಬಲೆಗೆ ಓರ್ವ ಸಿಕ್ಕಿ ಬಿದ್ದಿದ್ದಾನೆ. ಇನ್ನೂ ಮೂವರು ತಲೆಮರೆಸಿಕೊಂಡಿದ್ದಾರೆ. ಜಾಲದಲ್ಲಿ ಇನ್ನೆಷ್ಟು ಮಂದಿ ಇದ್ದಾರೆ ಎನ್ನುವುದರ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಉತ್ತರ ಪ್ರದೇ ಶದ ದೀಪ ಕ್‌ (20) ಬಂಧಿತ. ಆತ ನಿಂದ ವಿವಿಧ ಬ್ಯಾಂಕ್‌ ಗಳ 48 ಎಟಿ ಎಂ ಕಾರ್ಡ್‌ ಗಳು ಹಾಗೂ 52 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು. ಆರೋಪಿ, ಉತ್ತ ರ ಪ್ರದೇಶದ ವಿವಿಧ ಬ್ಯಾಂಕ್‌ ಗಳ ಎಟಿಎಂ ಕಾರ್ಡ್‌ಗಳನ್ನು ಬಳಸಿಕೊಂಡು ಬೆಂಗಳೂರಿನ ಎಟಿಎಂ ಕೇಂದ್ರ ಗಳಲ್ಲಿ ಬಳಸಿ, ಹಣ ಬರುವಾಗ ಕೈಬೆರಳುಗಳನ್ನು ಇಟ್ಟು ಸಿಸ್ಟಂ ಹ್ಯಾಂಗ್‌ ಮಾಡಿ, ಬಳಿಕ ಬ್ಯಾಂಕ್‌ ಗಳಿಗೆ ಆನ್‌ ಲೈನ್‌ ಮೂಲಕ ದೂರು ನೀಡಿ ಅಕ್ರಮವಾಗಿ ಹಣ ಪಡೆ ಯು ತ್ತಿದ್ದ ಆರೋಪಿಯೊಬ್ಬ ರಾಜಾಜಿನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಆರೋಪಿ ಇತ್ತೀಚೆಗೆ ಡಾ.ರಾಜ್‌ಕುಮಾರ್‌ ರಸ್ತೆಯಲ್ಲಿರುವ ಬ್ಯಾಂಕ್‌ ವೊಂದರ ಎಟಿಎಂ ಕೇಂದ್ರದಲ್ಲಿ ಹಣ ಪಡೆಯಲು ಮುಂದಾಗಿದ್ದ. ಅನುಮಾನದ ಮೇರೆಗೆ ಎಟಿಎಂ ತಾಂತ್ರಿಕ ನಿರ್ವ ಹಣೆ ಸಿಬ್ಬಂದಿ ವಶಕ್ಕೆ ಪಡೆದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ.

Advertisement

ವಂಚನೆ ಹೇಗೆ?: ಉತ್ತ ರ ಪ್ರ ದೇಶದ ಹಮೀರ್‌ಪುರ ಜಿಲ್ಲೆಯ ದೀಪಕ್‌ ಫೆ.15ರಂದು ಬೆಂಗಳೂರಿಗೆ ಬಂದು ದೊಡ್ಡ ಕಲ್ಲ ಸಂದ್ರದಲ್ಲಿ ರೂಮ್‌ ಮಾಡಿಕೊಂಡಿದ್ದ. ತನ್ನ ಊರಿ ನಿಂದ ಬರುವಾಗ ಕಮಿಷನ್‌ ಕೊಡುವುದಾಗಿ ಪರಿಚಯಸ್ಥರಿಂದ ವಿವಿಧ ಬ್ಯಾಂಕ್‌ಗಳ 48 ಎಟಿಎಂ ಕಾರ್ಡ್‌ ಗ ಳನ್ನು ತಂದಿದ್ದಾ ನೆ. ದೊಡ್ಡ ಕಲ್ಲ ಸಂದ್ರದ, ಬಿಟಿಎಂ ಲೇಔಟ್‌, ರಾಜಾಜಿನಗರದ ವಿವಿಧ ಬ್ಯಾಂಕ್‌ನ ಎಟಿಎಂ ಸೆಂಟರ್‌ ಗಳಿಗೆ ಹೋಗಿ, ಎಟಿಎಂಯಂತ್ರದಲ್ಲಿ ಕಾರ್ಡ್ ಹಾಕಿ ಹಣ ಡ್ರಾ ಮಾಡಲು ಪಿನ್‌ ಒತ್ತಿ ನಂತರ ಹಣ ಬರಲು ಒಂದೆರಡು ಸೆಕೆಂಡ್‌ ಗಳು ಇರುವ ಮೊದಲೇ ಕೈ ಬೆರಳುಗಳನ್ನು ಅಡ್ಡ ಇಟ್ಟು, ಹಣ ಪಡೆದು ಕೊಳ್ಳುತ್ತಿದ್ದ. ಆಗ ಸಿಸ್ಟಂನಲ್ಲಿರುವ

ಸೆನ್ಸಾರ್ ಏಕಾಏಕಿ ಹ್ಯಾಂಗ್‌ ಆಗುತ್ತದೆ. ಜತೆಗೆ ಎಟಿ ಎಂ ಕಾರ್ಡ್‌ದಾರನಿಗೂ ಹಣ ಡ್ರಾ ಆಗಿರುವ ಸಂದೇಶ ಹೋಗುವುದಿಲ್ಲ. ಬಳಿಕ ಆನ್‌ ಲೈನ್‌ ಮೂಲಕ= ಸಂಬಂಧಿಸಿದ ಬ್ಯಾಂಕ್‌ನ ಸಹಾಯವಾಣಿಗೆ ಹಣ ಬಂದಿಲ್ಲ ಎಂದು ದೂರು ನೀಡಿ, ಬ್ಯಾಂಕ್‌ ನಿಂದ ಜಮೆ ಮಾಡಿಸಿಕೊಳ್ಳುತ್ತಿದ್ದ. ಈ ಹಣವನ್ನು ಮತ್ತೂಂದು ಖಾತೆಗೆ ಜಮೆ ಮಾಡಿಕೊಳ್ಳುತ್ತಿದ್ದ ಆರೋಪಿ, ಬೇರೆ ಎಟಿಎಂ ಕೇಂದ್ರಕ್ಕೆ ಹೋಗಿ ಮತ್ತೆ ಅದೇ ರೀತಿ ವಂಚಿಸಿ ಹಣಗಳಿಸುತ್ತಿದ್ದ ಎಂದು ಪೊಲೀಸರು ಹೇಳಿದರು.

ಸಿಕ್ಕಿ ಬಿದ್ದಿದ್ದು ಹೇಗೆ?: ಹಲವು ದಿನಗಳಿಂದ ವಿವಿಧ ಬ್ಯಾಂಕ್‌ ಗಳ ಎಟಿಎಂ ಕೇಂದ್ರದಲ್ಲಿ ಈ ರೀತಿ ಲೋಪ ದೋಷಗಳು ಕಂಡು ಬರುತ್ತಿದ್ದವು. ಹೀಗಾಗಿ ಎಟಿಎಂಗಳ ತಾಂತ್ರಿಕ ನಿರ್ವ ಹಣೆ ನಿರ್ವಹಿಸುವ ಎಂಫಾಸಿಸ್‌ ಏಜೆನ್ಸಿಯ ಉಮಾಮಹೇಶ್‌, ಡಾ.ರಾಜ್‌ ಕುಮಾರ್‌ ರಸ್ತೆಯಲ್ಲಿರುವ ಎಂಟಿಎಂ ಕೇಂದ್ರಕ್ಕೆ ಬಂದಿದ್ದರು. ಆಗ ಆರೋಪಿ ಅನುಮಾನಾಸ್ಪದವಾಗಿ ಕೇಂದ್ರ ದಲ್ಲಿ ಹಣ ಪಡೆಯಲು ಮುಂದಾಗಿರುವ ಸುಳಿವು ಸಿಕ್ಕಿದೆ. ಕೂಡಲೇ ಕೇಂದ್ರ ರೋಲಿಂಗ್‌ ಶೆಟರ್‌ ಎಳೆದು ಆರೋಪಿಯನ್ನು ಕೂಡಿ ಹಾಕಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ಇನ್‌ ಸ್ಪೆಕ್ಟರ್‌ ಎನ್‌. ಆರ್‌. ವೆಂಕಟೇಶ್‌ ಮತ್ತು ಪಿಎ ಸ್‌ಐ ಎಂ.ಸುಬ್ರಮಣಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡು, ಪರಿಶೀಲಿಸಿದಾಗ ಈತನ ಜೇಬಿ ನಲ್ಲಿಯೇ 10 ಎಟಿಎಂ ಕಾರ್ಡ್‌ ಗಳಿದ್ದವು. ರೂಂ ನಲ್ಲಿ ಸುಮಾರು 38 ಕಾರ್ಡ್‌ ಗಳನ್ನು ವಶಕ್ಕೆ ಪಡೆಯಲಾಗಿದೆ. ವಿಚಾ ರಣೆ ವೇಳೆ ಆರೋಪಿ ಇದು ವರೆಗೂ ನಗರದ ಸುಮಾರು ಆರೇಳು ಎಟಿಎಂ ಕೇಂದ್ರ ಗ ಳಲ್ಲಿ ಎಟಿಎಂ ಕಾರ್ಡ್‌ ಗಳನ್ನು ಬಳಸಿ 4-5 ಲಕ್ಷ ರೂ. ವಂಚಿಸಿರುವುದಾಗಿ ಹೇಳಿ ದ್ದಾ ನೆ ಎಂದು ಪೊಲೀಸರು ಹೇಳಿದರು.

ಕಮಿಷನ್‌ ಕೊಡುತ್ತಿದ್ದ: ಬೆಂಗಳೂರಿನಲ್ಲಿ ಹಣ ವಂಚಿಸಿ ಉತ್ತರ ಪ್ರದೇಶಕ್ಕೆ ಹೋಗುತ್ತಿದ್ದ ಆರೋಪಿ ಎಟಿಎಂ ಕಾರ್ಡ್‌ದಾರ ರಿಗೆ 2-3 ಸಾವಿರ ರೂ. ಕಮಿಷನ್‌ ಕೊಡುತ್ತಿದ್ದ. ಮುಂಗಡವಾಗಿ ಹಣ ಹಾಕಿದ ಕಾರ್ಡ್‌ದಾರರಿಂದ ಹಣ ಪಡೆದುಕೊಳ್ಳುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

4ನೇ ಬಾರಿಗೆ ಬೆಂಗಳೂರಿಗೆ :

ಈಗಾಗಲೇ ಆರೋಪಿ ಮೂರು ಬಾರಿ ಬೆಂಗಳೂರಿಗೆ ಬಂದು ವಿವಿಧ ಬ್ಯಾಂಕ್‌ ಗಳ ಎಟಿಎಂ ಕೇಂದ್ರ ಗಳಿಂದ ಸುಮಾರು 2-3 ಲಕ್ಷ ರೂ. ವಂಚಿಸಿ ಊರಿಗೆ ಹೋಗಿದ್ದಾನೆ. ಬಳಿಕ ಹೃದಯ ಸಂಬಂಧಿ ಅನಾರೋಗ್ಯದಿಂದ ಬಳಲುತ್ತಿದ್ದ ಸಹೋದರಿಯ ಚಿಕಿತ್ಸೆ ಆ ಹಣ ಬಳಸಿಕೊಂಡಿದ್ದಾನೆ. ಆದರೆ, ಆಕೆ ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾಳೆ. ಇದೀಗ ಮತ್ತೆ ಬೆಂಗಳೂರಿಗೆ ಬಂದು ವಂಚಿಸಲು ಮುಂದಾದಾಗ ಸಿಕ್ಕಿ ಬಿದ್ದಿದ್ದಾನೆ ಎಂದು ಪೊಲೀಸರು ಹೇಳಿದರು.

ವಂಚನೆ ತಂತ್ರ ಕಲಿತಿದ್ದು ಹೇಗೆ? :

ವ್ಯವಸಾಯ ಮಾಡಿಕೊಂಡಿದ್ದ ದೀಪಕ್‌ ಈ ಹಿಂದೆ ಉತ್ತರ ಪ್ರದೇಶದಲ್ಲಿ ಒಮ್ಮೆ ಎಟಿಎಂ ಕೇಂದ್ರಕ್ಕೆ ಹೋಗಿ ಕಾರ್ಡ್‌ ಬಳ ಸು ವಾಗ ತಮಾಷೆಗೆ ನೋಡಲು ಹಣ ಬರುವ ಜಾಗದಲ್ಲಿ ಕೈಬೆರಳನ್ನು ಇಟ್ಟು ಹಣ ಪಡೆದುಕೊಂಡಿದ್ದಾನೆ. ಆನಂತರ ಮನೆಗೆ ಹೋಗಿ ನೋಡಿದಾಗ ತನ್ನ ಖಾತೆಯಿಂದ ಹಣ ಡ್ರಾ ಆಗಿರುವ ಯಾವುದೇ ಮಾಹಿತಿ ಬಂದಿಲ್ಲ. ಬಳಿಕ ಮತ್ತೂಮ್ಮೆ ಬಳಸಿ ಖಚಿತ ಪಡಿಸಿ ಕೊಂಡಿದ್ದಾನೆ. ಆನಂತರ ಆರೋ ಪಿ ಪರಿಚಯಸ್ಥರ ಎಟಿಎಂ ಕಾರ್ಡ್‌ಗಳನ್ನು ತಂದು ವಂಚಿಸಿದ್ದಾನೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next