Advertisement

Dairy farmers: ಪ್ರೋತ್ಸಾಹಧನ ವಿಳಂಬ- ಹೈನುಗಾರರು ಸಂಕಷ್ಟದಲ್ಲಿ

12:34 AM Aug 10, 2023 | Team Udayavani |

ಮಂಗಳೂರು: ಹೈನುಗಾರರಿಗೆ ಪ್ರತಿ ಲೀಟರ್‌ ಹಾಲಿಗೆ ನೀಡಲಾಗುವ 5 ರೂ. ಪ್ರೋತ್ಸಾಹಧನವು ಐದು ತಿಂಗಳಿಂದ ಸರಕಾರ ಬಿಡುಗಡೆ ಮಾಡಿಲ್ಲ.

Advertisement

ರಾಜ್ಯದ ಎಲ್ಲ ಹಾಲು ಒಕ್ಕೂಟಗಳ ವ್ಯಾಪ್ತಿಯಲ್ಲಿ ಮಾರ್ಚ್‌ ನಿಂದ ಜುಲೈವರೆಗಿನ ಪ್ರೋತ್ಸಾಹ  ಧನ ಇನ್ನೂ ಬಿಡುಗಡೆಯಾಗಿಲ್ಲ. ಪ್ರತಿ ತಿಂಗಳು ಪ್ರೋತ್ಸಾಹಧನ ಬಿಡುಗಡೆಯಾದರೆ ಹೈನುಗಾರರಿಗೆ ಪ್ರಯೋಜನ. 2-3 ತಿಂಗಳಿಗೊಮ್ಮೆ ಬಿಡುಗಡೆಯಾಗುತ್ತಿದ್ದ ಪ್ರೋತ್ಸಾಹ ಧನ ಈ ಬಾರಿ ಅದೂ ಇಲ್ಲ. ಹಣ ಬಿಡುಗಡೆಗೆ ವಿಳಂಬ ಮಾಡಬೇಡಿ ಎಂದು ವಿವಿಧ ಒಕ್ಕೂಟ ಗಳು ಕೆಎಂಎಫ್‌ ಹಾಗೂ ರಾಜ್ಯ ಸರಕಾರದ ಗಮನ ಸೆಳೆದಿವೆ. ಆದರೂ ಸರಕಾರ ಇನ್ನೂ ಸ್ಪಂದಿಸಿಲ್ಲ.

ಪಶು ಆಹಾರ ದುಬಾರಿ
ಹೈನುಗಾರರೊಬ್ಬರು “ಉದಯವಾಣಿ” ಜತೆಗೆ ಮಾತ ನಾಡಿ, “ಪ್ರತಿ ತಿಂಗಳ ಬದಲು ಹಿಂದೆ 2-3 ತಿಂಗಳಿ ಗೊಮ್ಮೆ ಹಣ ಬಿಡುಗಡೆ ಆಗುತ್ತಿತ್ತು. ಆದರೆ ಈ ಬಾರಿ 5 ತಿಂಗಳಾದರೂ ಸಿಕ್ಕಿಲ್ಲ. ಹಾಲು ಉತ್ಪಾದನೆಯೇ ಕಡಿಮೆ ಆಗಿರುವಾಗ ಪ್ರೋತ್ಸಾಹಧನ ಸಕಾಲದಲ್ಲಿ ಸಿಗದಿದ್ದರೆ ನ್ನಷ್ಟು ಕಷ್ಟ ಎದುರಾಗಲಿದೆ. ಆದ್ದರಿಂದ ತಿಂಗಳಿಗೊಮ್ಮೆ ಪ್ರೋತ್ಸಾಹಧನದ ಮೊತ್ತ ಲಭಿಸಬೇಕು ಎಂದಿದ್ದಾರೆ.

“ಮೊದಲು 2 ರೂ. ಪ್ರೋತ್ಸಾಹಧನ ಸಿಗುತ್ತಿತ್ತು. ಈಗ 5 ರೂ. ಗೇರಿದೆ. ಇದನ್ನು ನಿಯಮಿತ ವಾಗಿ ಬಿಡುಗಡೆ ಮಾಡಿದರೆ ಅನುಕೂಲವಾದೀತು ಎನ್ನುತ್ತಾರೆ ಕೆಎಂಎಫ್‌ ನಿರ್ದೇಶಕ ಕಾಪು ದಿವಾಕರ ಶೆಟ್ಟಿ.

ಹೆಚ್ಚುವರಿ ಮೊತ್ತ ಖಾತೆಗೆ
ಇತ್ತೀಚೆಗೆ ಹೆಚ್ಚುವರಿಯಾಗಿ ಗ್ರಾಹಕರಿಂದ ಪಡೆದ 3 ರೂ.ಗಳನ್ನು ಒಕ್ಕೂಟದಿಂದ ಆಯಾಯ ಸೊಸೈಟಿಗೆ ನೀಡಲಾಗುತ್ತದೆ. ಸೊಸೈಟಿಯು 10 ದಿನಕ್ಕೊಮ್ಮೆ ಅದನ್ನು ಹೈನುಗಾರರ ಖಾತೆಗೆ ವರ್ಗಾ ಯಿಸುತ್ತದೆ. ಈ ಪ್ರಕ್ರಿಯೆ ಸದ್ಯ ನಡೆಯುತ್ತಿದೆ ಎನ್ನುತ್ತಾರೆ ಒಕ್ಕೂಟದ ಪ್ರಮುಖರು.

Advertisement

ಕರಾವಳಿಗೆ 30 ಕೋ.ರೂ. ಬಾಕಿ!
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ 60 ಸಾವಿರ ಹೈನುಗಾರರಿಂದ ಸರಾಸರಿ 4 ಲಕ್ಷ ಲೀ. ಹಾಲು ಲಭ್ಯವಾಗುತ್ತಿದೆ. ದಕ್ಷಿಣ ಕನ್ನಡದಲ್ಲಿ 396 ಹಾಗೂ ಉಡುಪಿಯಲ್ಲಿ 339 ಸಹಿತ ಒಟ್ಟು 735 ಹಾ. ಉ.ಸ.ಸಂಘಗಳಿವೆ. ದಕ್ಷಿಣ ಕನ್ನಡ ಜಿಲ್ಲಾ ಸ. ಹಾ.ಉತ್ಪಾದಕರ ಒಕ್ಕೂಟ ವ್ಯಾಪ್ತಿಗೆ ಮಾರ್ಚ್‌ಲ 6.13 ಕೋ.ರೂ., ಎಪ್ರಿಲ್‌ನ 5.78 ಕೋ.ರೂ., ಮೇ ತಿಂಗಳ 6.12 ಕೋ.ರೂ ಸಹಿತ ಜೂನ್‌-ಜುಲೈ ತಿಂಗಳ ಪ್ರೋತ್ಸಾಹಧನ ಸೇರಿ ಸುಮಾರು 30 ಕೋ.ರೂ.ಗಳಷ್ಟು ಸರಕಾರದಿಂದ ಬರಬೇಕಿದೆ.

 ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next