Advertisement

ಶಿವಳ್ಳಿ ಕುಟುಂಬ ಆಫ್ ನಾರ್ಥ್ ಅಮೆರಿಕ ಉದ್ಘಾಟನೆ

07:21 PM May 05, 2021 | Team Udayavani |

ಉತ್ತರ ಅಮೆರಿಕ

Advertisement

ದಕ್ಷಿಣ ಕನ್ನಡ, ಮಲಬಾರ್‌ ಸೇರಿದಂತೆ ಕರಾವಳಿ ಪ್ರದೇಶದಿಂದ ವಲಸೆ ಬಂದು ಉತ್ತರ ಅಮೆರಿಕದ ವಿವಿಧ ಪ್ರದೇಶಗಳಲ್ಲಿ ನೆಲೆಸಿರುವ ಶಿವಳ್ಳಿ ಮೂಲದ ಕುಟುಂಬಗಳು  ಎ. 17ರಂದು ಶನಿವಾರ ಸೌರಮಾನ ಯುಗಾದಿ ಹಬ್ಬದ ಆಚರಣೆ ಹಾಗೂ ಶಿವಳ್ಳಿ ಕುಟುಂಬ ಆಫ್ ನಾರ್ಥ್ ಅಮೆರಿಕ ಸಂಘಟನೆಯ ಉದ್ಘಾಟನೆ ಸಂಭ್ರಮದಲ್ಲಿ ಪಾಲ್ಗೊಂಡರು.

ಅಮೆರಿಕದಲ್ಲಿ ನೆಲೆಸಿರುವ ಮುಂದಿನ ತಲೆಮಾರಿನವರಿಗೂ ಶಿವಳ್ಳಿ ಸಂಪ್ರದಾಯ, ಸಂಸ್ಕೃತಿ ಮತ್ತು ಪರಂಪರೆಯ ಪರಿಚಯ ಮಾಡಿಸುತ್ತ ಆ ಸಂಪ್ರದಾಯ, ಪರಂಪರೆಯನ್ನು ಉಳಿಸಿ, ಬೆಳೆಸುವ ಸುದುದ್ದೇಶದಿಂದ ಹುಟ್ಟು ಹಾಕಿರುವ ಈ ಸಂಘಟನೆಯನ್ನು ಉದ್ಘಾಟನೆಗಾಗಿ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.

ಪ್ರಸ್ತುತ ಕೋವಿಡ್‌ ಕಾರಣದಿಂದ ಜೂಮ್‌ ಮೂಲಕ ವರ್ಚುವಲ್‌ ಆಗಿ ನಡೆದ ಈ ಕಾರ್ಯಕ್ರಮದಲ್ಲಿ ಸಂಘದ ಸಂಸ್ಥಾಪನ ಅವಧಿಗೆ ನೇಮಕಗೊಂಡ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಅವರ ಕುಟುಂಬದವರಲ್ಲದೆ ನಿರ್ದೇಶಕ ಮಂಡಳಿ, ಪ್ರಾದೇಶಿಕ ರಾಯಭಾರಿ ಮತ್ತು ಸಲಹಾ ಮಂಡಳಿಯ ಸದಸ್ಯರು ಮತ್ತು ಸುಮಾರು 400ಕ್ಕೂ ಅಧಿಕ ಕುಟುಂಬಗಳು ತಮ್ಮ ತಮ್ಮ ಮನೆಯ ಚಾವಡಿಯಿಂದಲೇ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಅಟ್ಲಾಂಟ ಶ್ರೀ ಕೃಷ್ಣ ವೃಂದಾವನದ ಮುಖ್ಯ ಅರ್ಚಕರಾದ ಜಯಪ್ರಸಾದ್‌ ಅಮ್ಮಣಾಯ ಅವರ ನೇತೃತ್ವದಲ್ಲಿ ನೆರವೇರಿದ ಮಂಗಳ ಸ್ತುತಿ, ಮಂಗಳಾರತಿ, ಪಂಚಾಗ ಶ್ರವಣ ಸೇರಿದಂತೆ ಯುಗಾದಿ ಹಬ್ಬದ ಆಚರಣೆಯನ್ನು ಕುಟುಂಬ ಸದಸ್ಯರೆಲ್ಲ ವರ್ಚುವಲ್‌ನಲ್ಲಿ ವೀಕ್ಷಿಸಿದರು.

Advertisement

ನೂತನ ಪದಾಧಿಕಾರಿಗಳು

ಮೊದಲ ದ್ವೆ„ವಾರ್ಷಿಕ ಅವಧಿಗೆ ಅಧ್ಯಕ್ಷರಾಗಿ ಕುಟುಂಬದ ಸಂಸ್ಥಾಪನೆಗೆ ನಾಂದಿ ಹಾಡಿದ ಪ್ರಶಾಂತ ಮಟ್ಟು  (ಡೆಟ್ರಾಯr…), ಉಪಾಧ್ಯಕ್ಷರಾಗಿ ಸಂತೋಷ್‌ ಗೋಳಿ  (ಡೆಟ್ರಾಯr…), ಕಾರ್ಯದರ್ಶಿಯಾಗಿ ಪ್ರಕಾಶ ಉಡುಪ (ಆಸ್ಟಿನ್‌), ಖಜಾಂಚಿಯಾಗಿ ರಕ್ಷಿತಾ ರಾವ್‌ ಮಟ್ಟಿ (ನ್ಯೂಜೆರ್ಸಿ) ನೇಮಕಗೊಂಡರು.

ಇದೇ ಅವಧಿಗೆ ವಿವಿಧ ಸಮಿತಿಗಳ ಮುಂದಾಳತ್ವವನ್ನು ವಹಿಸಿಕೊಂಡವರಲ್ಲಿ ಅರುಣ್‌ ರಾವ್‌ ಆರೂರ್‌ (ಮಿಚಿಗನ್‌, ಶೈಕ್ಷಣಿಕ ಸಮಿತಿ ), ಸುಪ್ರಿಯಾ ಕುಣಿಕುಳ್ಳಾಯ (ನ್ಯೂಜೆರ್ಸಿ, ಸಾಂಸ್ಕೃತಿಕ ಸಮಿತಿ ), ಶುಭಾ ರಾವ್‌ (ಆಸ್ಟಿನ್‌, ಧಾರ್ಮಿಕ ಮತ್ತು ಸಂಪ್ರದಾಯ), ಮೋಹನ್‌ ಹೆಬ್ಟಾರ್‌ (ಮಿಸೌರಿ, ಸಮಾಜ ಸೇವೆ), ರೋಹಿತ್‌ ವಿ. (ಒಂಟಾರಿಯೋ, ಕೆನಡಾ, ಮಾಹಿತಿ ತಂತ್ರಜ್ಞಾನ ) ಮತ್ತು ಶ್ರೀವತ್ಸ ಬÇÉಾಳ್‌ (ಫಿಲಿಡೆಲ್ಫಿಯಾ, ಹಿರಿಯರ ಚಾವಡಿ ಮತ್ತು ಯುವ ವೇದಿಕೆ), ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರ ತಂಡದ ಅಧ್ಯಕ್ಷರಾಗಿ ಶ್ರೀಶ ಜಯಸೀತಾರಾಂ (ಚಿಕಾಗೋ) ನೇಮಕಗೊಂಡಿ¨ªಾರೆ. ನಿರ್ದೇಶಕರ ಮಂಡಳಿಯಲ್ಲಿ ನಗರಿ ಶ್ರೀರಂಗ ಆಚಾರ್ಯ (ಡೆಟ್ರಾಯr…), ಕಾಂತಿ ಚಂದ್ರಶೇಖರ್‌ (ಕೆಂಟಕಿ), ಶ್ರೀನಿವಾಸ್‌ ಮಟ್ಟು  (ಒಂಟಾರಿಯೊ, ಕೆನಡಾ), ಚೇತನಾ ಕೆ. (ಒಹಾಯೊ), ಪ್ರಶಾಂತ ಮಟ್ಟು  (ಡೆಟ್ರಾಯr…) ಅವರು ನೇಮಕವಾಗಿದ್ದಾರೆ.

ಅಷ್ಟೇ ಅಲ್ಲದೇ, ದೇಶದ ಉದ್ದಗಲಕ್ಕೂ ಕುಟುಂಬದ ಸದಸ್ಯರ ಕಾರ್ಯಕ್ರಮ ಚಟುವಟಿಕೆಗಳನ್ನು ನಿಭಾಯಿಸಲು ಪ್ರಾದೇಶಿಕ ಅಧ್ಯಕ್ಷರಾಗಿ ನೇಮಕಗೊಂಡವರಲ್ಲಿ ಭಾಗ್ಯಜ್ಯೋತಿ ಅರುಣ್‌ (ಮ್ಯಾಸಚುಸೆಟ್ಸ…), ಬಾಲಕೃಷ್ಣ ರಾವ್‌ (ಜಾರ್ಜಿಯಾ), ಹರೀಶ್‌ ರಾವ್‌ (ಮಿಚಿಗನ್‌), ಅನಿತಾ  ಶ್ರೀಕಾಂತ್‌(ಇಂಡಿಯಾನಾ), ಅನಿತಾ ಆಚಾರ್ಯ (ನಾರ್ಥ್ ಕೆರೊಲಿನಾ), ಶ್ಯಾಮ್‌ ಸುಂದುರ್‌ (ಟೆಕ್ಸಾಸ್‌) ಮತ್ತು ವಿನೀತ ಭಟ್ (ಟೆಕ್ಸಾಸ್‌) ಇವರು ಆಯ್ಕೆಯಾಗಿದ್ದಾರೆ.

ಗೌರವಾನ್ವಿತ ಸಲಹಾ ಸಮಿತಿಯ ಸದಸ್ಯರಾಗಿ ಅಮೆರಿಕಕ್ಕೆ ಐದಾರು ದಶಕಗಳ ಹಿಂದೆಯೇ ಬಂದು ನೆಲೆಸಿ, ಉನ್ನತ ದರ್ಜೆಯ ವೃತ್ತಿಪರರಾಗಿ ಮಾತ್ರವಲ್ಲದೇ ಸಮಾಜ ಸೇವೆಯಲ್ಲಿಯೂ ಹೆಸರುಗಳಿಸಿದ  ಎಸ್‌.ವಿ.ಆಚಾರ್ಯ (ಮೇರಿಲ್ಯಾಂಡ್‌), ಬಾಲಕೃಷ್ಣ ರಾವ್‌ (ಪೆನ್ನಿಸಲ್ವೇನಿಯಾ), ನಾಗಾರಾಜ್‌ ಉಪಾಧ್ಯ (ಟೆಕ್ಸಾಸ್‌), ಡಾ| ಮನಮೋಹನ್‌ ಕಟಪಾಡಿ (ಒಹಾಯೊ), ಡಾ| ರಾಜೇಂದ್ರ ಕೆದ್ಲಾಯ (ಇಂಡಿಯಾನಾಪೊಲಿಸ್‌) ಮತ್ತು  ಶ್ರೀನಿವಾಸ್‌ ಭಟ್‌ (ಟೆಕ್ಸಾಸ್‌) ಅವರು ನೇಮಕಗೊಂಡಿ¨ªಾರೆ.

ನಿರ್ಣಯಗಳಿಗೆ ಅನುಮೋದನೆ

ಜಾಗತಿಕ ಪಿಡುಗಿನ ಸಂಕಷ್ಟದ ಸಮಯದಲ್ಲಿ ವಿಶ್ವವೇ ಆತಂಕದ ಕಾರ್ಮೋಡದಡಿಯಲ್ಲಿ ಬದುಕುತ್ತಿ ರುವಾಗ ಒಂದು ಸಂಪ್ರದಾಯ, ಸಂಸ್ಕೃತಿ, ಭೌಗೋಳಿಕ ಮೂಲದ ಜನರನ್ನೆಲ್ಲ ಒಗ್ಗೂಡಿಸಿ ಅದರ ಜತೆಗೆ  ದಕ್ಷಿಣ ಕನ್ನಡ ಮೂಲದವರ ಹಿರಿಮೆ, ಒಳಿತಿಗೆ ದೂರದ ಅಮೆರಿಕದಿಂದ ಶ್ರಮಿಸಲು ಮುಂದಾಗಿರುವ ಅಧ್ಯಕ್ಷ ಪ್ರಶಾಂತ್‌ ಮಟ್ಟು ಮತ್ತು ಉಪಾಧ್ಯಕ್ಷ ಸಂತೋಷ್‌ ಗೋಳಿ ಇವರ ದೂರದರ್ಶಿತ್ವ ಮತ್ತು ಕಲ್ಪನೆಯೇ ಕಾರಣ.

ಅದಕ್ಕೆ ಸಂಪೂರ್ಣ ಬೆಂಬಲ ಮತ್ತು ಸಹಕಾರ ಕಾರ್ಯಕಾರಿ ಸಮಿತಿ, ನಿರ್ದೇಶಕ ಮಂಡಳಿ, ಸಲಹಾ ಸಮಿತಿಯ ಸದಸ್ಯರದ್ದು. ಅಮೆರಿಕದಲ್ಲಿ ಅಥವಾ ವಿದೇಶದಲ್ಲಿ ಹುಟ್ಟಿ ಬೆಳೆಯುತ್ತಿರುವ ಶಿವಳ್ಳಿ ಹಿನ್ನೆಲೆಯ ಕುಟುಂಬದ ಸದಸ್ಯರನ್ನು  ಸಾಧ್ಯವಾದಷ್ಟು ಮಟ್ಟಿಗೆ ಶಿವಳ್ಳಿ ಸಂಪ್ರದಾಯದ ಸಂಸ್ಕೃತಿಯನ್ನು ಆಚರಿಸಲು ಪ್ರೇರಣೆ ಮಾಡುವ ಮೂಲ ಉದ್ದೇಶ ಇಟ್ಟುಕೊಂಡು, ಶಿವಳ್ಳಿ  ಸಂಸ್ಕೃತಿ ಮತ್ತು ಸಂಪ್ರದಾಯದ ಕುರಿತು ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ಮಾತ್ರ ಅಲ್ಲದೇ ಸಮಾಜ ಸೇವೆ, ಶೈಕ್ಷಣಿಕ, ಸಾಂಸ್ಕೃತಿಕ  ಮುಂತಾದ ಕ್ಷೇತ್ರಗಳಲ್ಲಿ ಅನೇಕ  ಕಾರ್ಯಕ್ರಮಗಳನ್ನು ನಡೆಸುವ ಗುರಿಯನ್ನು ಕುಟುಂಬದ  ಸದಸ್ಯರು ಅನುಮೋದಿಸಿದ್ದು, ಉದ್ಘಾಟನ ಸಮಾರಂಭದ ವೇದಿಕೆಯಲ್ಲಿ  ನೆರೆದ ಗಣ್ಯರ ಮಾತಿನಿಂದ ವ್ಯಕ್ತವಾಯಿತು.

ಮುಂಬರುವ ದಿನಗಳಲ್ಲಿ ಅಮೆರಿಕದ ಉದ್ದಗಲಕ್ಕೂ ಹರಡಿರುವ ಶಿವಳ್ಳಿ ಮೂಲದವರನ್ನೆಲ್ಲ ಕುಟುಂಬದ ಸದಸ್ಯತ್ವ ಪಡೆಯಲು ಪ್ರೋತ್ಸಾಹಿಸಿ ಸಂಘದ ಮೂಲ ಉದ್ದೇಶವನ್ನು ಈಡೇರಿಸುವತ್ತ ಗಮನ ಹರಿಸಲು ನಿರ್ಧರಿಸಲಾಯಿತು.

ಕುಟುಂಬದ ಮೊದಲ ಕೂಟದ ಅಂಗವಾಗಿ ಸಂಜೆ 6ರ ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸದಸ್ಯರ ಪ್ರತಿಭಾ ಪ್ರದರ್ಶನ ನಡೆಯಿತು.

ಶ್ರೀವತ್ಸ ಬಲ್ಲಾಳ, ಫಿಲಡೆಲ್ಫಿಯಾ

 

 

Advertisement

Udayavani is now on Telegram. Click here to join our channel and stay updated with the latest news.

Next