Advertisement
ಒಂದೇ ಒಂದು ಕಮಾನಿನ ಮೇಲೆ 359 ಮೀಟರ್ ಎತ್ತರದಲ್ಲಿ ಈ ಸೇತುವೆ ನಿರ್ಮಾಣಗೊಂಡಿದೆ. ಇದಕ್ಕೂ ಹಿಂದೆ ಚೀನಾದ ಗಿಝೌ ಪ್ರಾಂತ್ಯದ ಬೆಪಾಂಜಿಯಾಂಗ್ ನದಿಯ ಮೇಲೆ 275 ಮೀಟರ್ ಎತ್ತರದಲ್ಲಿ ನಿರ್ಮಿಸಿದ ಸೇತುವೆಗೆ ಅತ್ಯಂತ ಎತ್ತರದ ಸೇತುವೆಯೆಂಬ ಹೆಗ್ಗಳಿಕೆಯಿತ್ತು.
- ಸದಾ ಭೂಕುಸಿತ ಸಂಭವಿಸುವ ಪ್ರದೇಶದಲ್ಲಿ, ಅತ್ಯಂತದಲ್ಲಿ ಎತ್ತರದಲ್ಲಿ ಸೇತುವೆಯನ್ನು ನಿರ್ಮಿಸಿದ್ದೇ ಒಂದು ಅಸಾಮಾನ್ಯ ಸಾಧನೆ.
- ಇದು ಐಫೆಲ್ ಟವರ್‌ಗಿಂತ 35 ಮೀಟರ್ ಹೆಚ್ಚುವರಿ ಎತ್ತರ ಹೊಂದಿದೆ.
- ಈ ಸೇತುವೆ ಜಮ್ಮುಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿದೆ. ಇದು ಸಲಾಲ್ ಎ ಮತ್ತು ದುಗ್ಗಾ ರೈಲು ನಿಲ್ದಾಣಗಳನ್ನು ಬೆಸೆಯಲಿದೆ.
- ಈ ಸೇತುವೆಗೆ ಬಳಸಲಾಗಿರುವ ಕಂಬಗಳು 17. ಹಾಗೆಯೇ 28,660 ಮೆಟ್ರಿಕ್ ಟನ್ ಉಕ್ಕನ್ನು ನಿರ್ಮಾಣಕ್ಕೆ ಬಳಸಲಾಗಿದೆ. ಕೇವಲ ಕಮಾನಿನ ತೂಕವೇ 10,619 ಮೆಟ್ರಿಕ್ ಟನ್‌ಗಳಷ್ಟಿದೆ.
- ಮೈನಸ್ 40 ಸೆಲ್ಸಿಯಸ್‌ಗೆ ಉಷ್ಣಾಂಶ ಇಳಿದರೂ ತಾಳಿಕೊಳ್ಳುವ ಸಾಮರ್ಥ್ಯ ಈ ಸೇತುವೆಗಿದೆ.
- ಇದರ ಬಾಳಿಕೆ ಅವಧಿ 120 ವರ್ಷಗಳು. 100 ಕಿ.ಮೀ. ವೇಗದಲ್ಲಿ ಇದರ ಮೇಲೆ ರೈಲುಗಳು ಸಂಚರಿಸಬಹುದು.